Gl jewellers
ಧಾರ್ಮಿಕ

ತೆಂಕುತಿಟ್ಟು ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಕುರುಪ್ ನಿಧನ

ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ವಾದನದ ತಜ್ಞ ಕಲಾವಿದ, ಹಿರಿಯ ಯಕ್ಷಗಾನ ಗುರು ಬಿ.ಗೋಪಾಲಕೃಷ್ಣ ಕುರುಪ್‌ (90) ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ವಾದನದ ತಜ್ಞ ಕಲಾವಿದ, ಹಿರಿಯ ಯಕ್ಷಗಾನ ಗುರು ಬಿ.ಗೋಪಾಲಕೃಷ್ಣ ಕುರುಪ್‌ (90) ನಿಧನರಾದರು.

Pashupathi
Papemajalu garady
Karnapady garady

ಕಾಸರಗೋಡು ಜಿಲ್ಲೆಯ ನೀಲೇಶ್ವರ ಬಳಿಯ ಪಟ್ಟೇನ ಎಂಬಲ್ಲಿ ಪುತ್ರಿ ಮನೆಯಲ್ಲಿ ವಾಸಿಸುತ್ತಿದ್ದರು.ವಯೋಸಹಜವಾಗಿ ನಿನ್ನೆ ರಾತ್ರಿ ಕೊನೆಯುಸಿರೆಳೆದರು

ಗಡಿನಾಡು ಕಾಸರಗೋಡು ಮೂಲದ ಕುರುಪ್ ಅವರು ಬೆಳ್ತಂಗಡಿಯ ಶಿಶಿಲದಲ್ಲಿ ಈ ಹಿಂದೆ ನೆಲೆಸಿದ್ದರು.ಇವರ ಪತ್ನಿ, ಮತ್ತು ಇಬ್ಬರು ಪುತ್ರ ಹಾಗೂ ಓರ್ವ ಪುತ್ರಿ ಯನ್ನು ಅಗಲಿದ್ದಾರೆ.

ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ವಾದನದಲ್ಲಿ ಅತ್ಯುನ್ನತ ಹೆಸರಾಗಿದ್ದ ಇವರು ಆರು ದಶಕಕ್ಕೂ ಅಧಿಕಕಾಲ ಹಿಮ್ಮೇಳ ಶಿಕ್ಷಣ ನೀಡಿ ಅನೇಕ ಶಿಷ್ಯರನ್ನು ನೀಡಿದ್ದಾರೆ. ತೆಂಕುತಿಟ್ಟು ಸಾಂಪ್ರದಾಯಿಕ ಕ್ರಮಗಳ ಕುರಿತು  ಮಾತಾಡಬಲ್ಲವರಾಗಿದ್ದ ಅವರು ಹಿಮ್ಮೇಳ ವಾದನದ ಕುರಿತು ( ಮಧ್ಯಳೆ ವಾದನ ಕ್ರಮ) ಕೃತಿ ರಚಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸನ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳದ ಗುರುಪೂಜಾ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ…