Gl harusha
ಧಾರ್ಮಿಕ

ಪಾಲಿಂಜೆ ದೇವಳದಲ್ಲಿ 9ನೇ ವರ್ಷದ ಶ್ರೀ ಶನೈಶ್ಚರ ಪೂಜೆ | ಶ್ರೀ ದುರ್ಗಾ ಪೂಜೆ, ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಕಾರ್ತಿಕ ಪೂಜೆ

ಕುರಿಯ ಅಮ್ಮುಂಜ ಪಾಲಿಂಜೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ನೇತೃತ್ವದಲ್ಲಿ ಮಾ. 8ರ ಶನಿವಾರ ಸಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ದುರ್ಗಾ ಪೂಜೆ, ಕಾರ್ತಿಕ ಪೂಜೆ, ಭಜನೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕುರಿಯ ಅಮ್ಮುಂಜ ಪಾಲಿಂಜೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ನೇತೃತ್ವದಲ್ಲಿ ಮಾ. 8ರ ಶನಿವಾರ ಸಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ದುರ್ಗಾ ಪೂಜೆ, ಕಾರ್ತಿಕ ಪೂಜೆ, ಭಜನೆ ನಡೆಯಿತು.

Pashupathi

ಕ್ಷೇತ್ರದ ಪುರೋಹಿತರಾದ ಸೂರ್ಯಪ್ರಕಾಶ್ ಅಂಗಿಂತ್ತಾಯ ಅವರ ನೇತೃತ್ವದಲ್ಲಿ, ಸಂದೀಪ್ ಕಾರಂತ್ ಅವರು ಪೂಜಾ ಕಾರ್ಯ ನಡೆಸಿಕೊಟ್ಟರು. ದೇವರಿಗೆ ವಿಶೇಷ ಅಲಂಕಾರ ಸೇವೆಯನ್ನು ಅರ್ಚಕ ಶ್ರವಣ ಭಟ್ ನೆರವೇರಿಸಿದರು.

akshaya college

ಸಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಶನಿ ಪೂಜೆ ಹಾಗೂ ಹೊತ್ತಿಗೆ ದೇವಳದ ಎದುರು ಗೋಪುರದಲ್ಲಿ ಶ್ರೀ ದುರ್ಗಾ ಪೂಜೆ ಆರಂಭಿಸಲಾಯಿತು. ಶನಿ ಪೂಜೆ ಹಾಗೂ ದುರ್ಗಾ ಪೂಜೆ ಮಹಾಮಂಗಳಾರತಿ ನಡೆದು, ನಂತರ ದೇವರಿಗೆ ಕಾರ್ತಿಕ ಪೂಜೆ ನೆರವೇರಿಸಲಾಯಿತು.

ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

371 ಶನೈಶ್ಚರ ಪೂಜೆ, 34 ಅನ್ನದಾನ ಸೇವೆ, 25 ದುರ್ಗಾ ಪೂಜೆ, 20 ಕಾರ್ತಿಕ ಪೂಜೆಯನ್ನು ಸೇವಾದಾರರು ನೆರವೇರಿಸಿದರು.

ಪಾಲಿಂಜೆ ಶ್ರೀ ಶನೈಶ್ಚರ ಪೂಜಾ ಸಮಿತಿಯ ಗೌರವಾಧ್ಯಕ್ಷ ರೇಖಾನಾಥ್ ರೈ, ಅಧ್ಯಕ್ಷ ವಿಠಲ ಗೌಡ, ಕಾರ್ಯದರ್ಶಿ ದಿನೇಶ್ ಗೌಡ ಡೆಮ್ಮಲೆ, ಖಜಾಂಚಿ ರಾಘವೇಂದ್ರ ಅಂಗಿಂತಾಯ, ಜತೆ ಕಾರ್ಯದರ್ಶಿ ಮಾಲಿನಿ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಸತೀಶ್ ನಾಯ್ಕ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ನಿಕಟಪೂರ್ವ ಅಧ್ಯಕ್ಷರಾದ ಜಯರಾಮ್ ರೈ ನುಳಿಯಾಲು, ರಾಮಣ್ಣ ನಾಯ್ಕ ಅಮ್ಮುಂಜ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮೇ 11ರಂದು ಪುತ್ತೂರು ಶ್ರೀ ಮಹಾಕಾಳಿ ದೇವಸ್ಥಾನದ ಷಡಾಧಾರ, ನಿಧಿಕುಂಭ ಪ್ರತಿಷ್ಠೆ | ಮೇ 10ರಂದು ನಿಧಿಕುಂಭ ಮೆರವಣಿಗೆ

ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನ ಬಳಿಯ ಪುತ್ತೂರು ಸೆಂಟರ್ ಹಿಂಭಾಗದಲ್ಲಿರುವ ಶ್ರೀ ಮಹಾಕಾಳಿ…