ಜೈಪುರದಲ್ಲಿ ಸಿಎನ್‌ಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 8 ಮಂದಿ ಸಜೀವ ದಹನರಾಗಿದ್ದಾರೆ
ರಾಜಸ್ಥಾನದ ಜೈಪುರದ ಅಜೀರ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಎಲ್ಪಿಜಿ (LPG)(ದ್ರವೀಕೃತ ಪೆಟ್ರೋಲಿಯಂ ಅನಿಲ) ಮತ್ತು ಸಿಎನ್ ಜಿ (CNG) ಟ್ರಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಮಾಹಿತಿಯ ಪ್ರಕಾರ, ಟ್ರಕ್ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ 40 ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿದೆ ಎಂದು ವರದಿಯಾಗಿದೆ.