Gl harusha
ದೇಶ

ಖ್ಯಾತ ಹಾರ್ಮೋನಿಯಂ ವಾದಕ ಪಂಡಿತ್ ಸಂಜಯ್ ರಾಮ್ ಮರಾಠ ನಿಧನ

ಸಂಗೀತ ಪ್ರಪಂಚಕ್ಕೆ ಕೊಡುಗೆ ನೀಡಿರುವ ಖ್ಯಾತ ಶಾಸ್ತ್ರೀಯ ಗಾಯಕ ಮತ್ತು ಹಾರ್ಮೋನಿಯಂ ಕಲಾವಿದ ಪಂಡಿತ್ ಸಂಜಯ್ ರಾಮ್ ಮರಾಠ ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ 

ಈ ಸುದ್ದಿಯನ್ನು ಶೇರ್ ಮಾಡಿ

ಸಂಗೀತ ಪ್ರಪಂಚಕ್ಕೆ ಕೊಡುಗೆ ನೀಡಿರುವ ಖ್ಯಾತ ಶಾಸ್ತ್ರೀಯ ಗಾಯಕ ಮತ್ತು ಹಾರ್ಮೋನಿಯಂ ಕಲಾವಿದ ಪಂಡಿತ್ ಸಂಜಯ್ ರಾಮ್ ಮರಾಠ ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ. ಸಂಜಯ್ ಅವರಿಗೆ 68 ವರ್ಷ ವಯಸ್ಸಾಗಿತ್ತು.

srk ladders
Pashupathi
Muliya

ಪಂಡಿತ್ ಸಂಜಯ್ ಮರಾಠ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಯಲ್ಲಿ ಅಮೂಲ್ಯ ಕೊಡುಗೆ ನೀಡಿದ್ದು, ಕಲಾಮಾತೆಯ ಸೇವೆಗೈಯ್ಯುತ್ತಲೇ ತಮ್ಮ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಿದ್ದಾರೆ.ತಮ್ಮ ಸುಶ್ರಾವ್ಯ ಹಾಡುಗಾರಿಕೆ ಹಾಗೂ ಹಾರ್ಮೋನಿಯಂ ನೈಪುಣ್ಯದಿಂದ ಅಸಂಖ್ಯ ಅಭಿಮಾನಿ ಬಳಗವನ್ನೇ ಮರಾಠ, ಕಲಾ ಕ್ಷೇತ್ರಕ್ಕೆ ಅಪರಿಮಿತ ಕೊಡುಗೆ ನೀಡಿದ್ದಾರೆ.

ಹಾರ್ಮೋನಿಯಂ ಮತ್ತು ಸುಮಧುರ ಗಾಯನದಲ್ಲಿ ತಮ್ಮ ಪರಿಣತಿಗಾಗಿ ಅವರು ಹೆಚ್ಚು ಗುರುತಿಸಿಕೊಂಡಿದ್ದರು ಮತ್ತು ತಮ್ಮ ತಂದೆಯ ಜನ್ಮ ಶತಮಾನೋತ್ಸವದ ಅಂಗವಾಗಿ ಈ ವರ್ಷ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು

ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದ ಅವರನ್ನು ಥಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಭಾನುವಾರ ರಾತ್ರಿ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ 


ಈ ಸುದ್ದಿಯನ್ನು ಶೇರ್ ಮಾಡಿ

Related Posts