ದೇಶ

ಮುಂಬೈ ಇಂಡಿಯನ್ಸ್‌ ಬೌಲಿಂಗ್ ಕೋಚ್ ಆಗಿ ಪಾರಸ್ ಮ್ಹಾಂಬ್ರೆ ನೇಮಕ

ಮುಂದಿನ ಆವೃತ್ತಿಯ ಐಪಿಎಲ್ ಆರಂಭಕ್ಕೆ ಮೊದಲು ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡವು ಪಾರಸ್ ಮ್ಹಾಂಬ್ರೆ ಅವರನ್ನು ತನ್ನ ಬೌಲಿಂಗ್ ಕೋಚ್‌ರನ್ನಾಗಿ ಮತ್ತೊಮ್ಮೆ ನೇಮಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ : ಮುಂದಿನ ಆವೃತ್ತಿಯ ಐಪಿಎಲ್ ಆರಂಭಕ್ಕೆ ಮೊದಲು ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡವು ಪಾರಸ್ ಮ್ಹಾಂಬ್ರೆ ಅವರನ್ನು ತನ್ನ ಬೌಲಿಂಗ್ ಕೋಚ್‌ ಆಗಿ ಮತ್ತೊಮ್ಮೆ ನೇಮಿಸಿದೆ.

ಮ್ಹಾಂಬ್ರೆ ಅವರು ಈಗಿನ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

SRK Ladders

ಇತ್ತೀಚೆಗೆ ಮಹೇಲ ಜಯವರ್ಧನೆ ಅವರು ಮಾರ್ಕ್ ಬೌಚರ್ ಸ್ಥಾನಕ್ಕೆ ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.

ಮ್ಹಾಂಬ್ರೆ ಈ ಹಿಂದೆ ಮುಂಬೈ ಇಂಡಿಯನ್ಸ್ ಕೋಚಿಂಗ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ಮ್ಹಾಂಬ್ರೆ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹಲವು ಬಾರಿ ಯಶಸ್ಸು ಸಾಧಿಸಿತ್ತು. 2013ರ ಐಪಿಎಲ್ ಪ್ರಶಸ್ತಿ ಗೆದ್ದಿದ್ದಲ್ಲದೆ, 2011 ಹಾಗೂ 2013ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. 2010ರಲ್ಲಿ ರನ್ನರ್ಸ್ ಅಪ್ ಆಗಿತ್ತು. ಹಲವು ಬಾರಿ ಪ್ಲೇ ಆಫ್‌ಗೆ ತಲುಪಿತ್ತು.

ಇತ್ತೀಚೆಗೆ ಪಾರಸ್ ಮ್ಹಾಂಬ್ರೆ ಅವರು ಭಾರತೀಯ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲಲು ತನ್ನದೇ ಆದ ಕೊಡುಗೆ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts