NASA: 4 ಗಗನಯಾತ್ರಿಗಳನ್ನು ಒಳಗೊಂಡ ತಂಡವನ್ನು 14 ದಿನಗಳ ವಿವಿಧ ರೀತಿಯ ಸಂಶೋಧನೆಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲಿರುವ ನಾಸಾ ಮಿಷನ್ 41 ವರ್ಷಗಳ ಬಳಿಕ ಮೊದಲ ಬಾರಿ ಭಾರತೀಯರೊಬ್ಬರು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಶುಭಾನ್ಯು ಶುಕ್ಲಾ ಒಳಗೊಂಡ 4 ಗಗನಯಾತ್ರಿಗಳ ತಂಡ ಹೊರಡಲಿದೆ.
ಭಾರತದ ಶುಭಾಂಶು ಶುಕ್ಲಾರ ಐತಿಹಾಸಿಕ ಆಕ್ಸಿಯಂ-4 ಬಾಹ್ಯಾಕಾಶ ಯಾನಕ್ಕೆ ಹೊಸ ಮುಹೂರ್ತ ನಿಗದಿಯಾಗಿದ್ದು, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಮಧ್ಯಾಹ್ನ 12:01 ಗಂಟೆಗೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ನಭಕ್ಕೆ ಚಿಮ್ಮಲಿದೆ. 28 ಗಂಟೆಗಳ ಪ್ರಯಾಣದ ನಂತರ ಶುಭಾಂಶು ಸಹಿತ ನಾಲ್ವರು ಗಗನಯಾತ್ರಿಗಳುಳ್ಳ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ 14 ದಿನಗಳ ಕಾಲ ತಂಗಲಿದೆ. ಈ ಅವಧಿಯಲ್ಲಿ ವಿವಿಧ ಪ್ರಯೋಗಗಳನ್ನು ಗಗನಯಾತ್ರಿಗಳು ಕೈಗೊಳ್ಳಲಿದ್ದಾರೆ. ಮೇ 29ರಂದೇ ನಡೆಯಬೇಕಿದ್ದ ಈ ಗಗನಯಾನ ಯೋಜನೆಯು ಈಗಾಗಲೇ 5 ಬಾರಿ ಮುಂದೂಡಿಕೆಯಾಗಿದೆ.