ದೇಶ

38 ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು!!

ನಿರ್ವಹಣೆ, ತಾಂತ್ರಿಕ ದೋಷ, ಕೆಟ್ಟ ಹವಾಮಾನ ಮತ್ತು ವಾಯುಪ್ರದೇಶದ ನಿರ್ಬಂಧಗಳು ಮುಂತಾದ ಕಾರಣಗಳಿಂದ ಇಂದು(ಜೂ.20) ಹಲವು ಏರ್ ಇಂಡಿಯಾ ವಿಮಾನಗಳು ರದ್ದಾಗಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಸುಮಾರು 100 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ Al-2469 ಬೆಳಿಗ್ಗೆ 5:31 ಕ್ಕೆ ದೆಹಲಿಯಿಂದ ಹೊರಟು ಬೆಳಿಗ್ಗೆ 7:14 ಕ್ಕೆ ಪುಣೆಯಲ್ಲಿ ಸುರಕ್ಷಿತವಾಗಿ ಇಳಿಯಿತು.

akshaya college

ಪುಣೆಯಲ್ಲಿ ಇಳಿದ ನಂತರ ಹಕ್ಕಿ ಡಿಕ್ಕಿ ಪತ್ತೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ .ಈ ಹಿನ್ನೆಲೆ ಪುಣೆಯಿಂದ ದೆಹಲಿಗೆ ನಿಗದಿಯಾಗಿದ್ದ ಪ್ರಯಾಣವನ್ನು ರದ್ದು ಮಾಡಲಾಗಿದೆ.

” ಜೂನ್ 20 ರಂದು ಪುಣೆಯಿಂದ ದೆಹಲಿಗೆ ಹಾರಲು ನಿಗದಿಯಾಗಿದ್ದ Al2470 ವಿಮಾನವು ಪಕ್ಷಿ ಡಿಕ್ಕಿ ಹೊಡೆದ ಕಾರಣ ರದ್ದುಗೊಂಡಿದೆ, ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಇಳಿದ ನಂತರ ಇದು ಕಂಡುಬಂದಿದೆ” ಎಂದು ಅದು ಹೇಳಿದೆ.

ಎಂಜಿನಿಯರಿಂಗ್ ತಂಡ ವ್ಯಾಪಕ ತಪಾಸಣೆಗಾಗಿ ವಿಮಾನವನ್ನು ಈಗ ಸ್ಥಗಿತಗೊಳಿಸಲಾಗಿದೆ.

ಪ್ರಯಾಣಿಕರಿಗೆ ವಸತಿ ಒದಗಿಸುವುದು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ರದ್ದತಿ ಅಥವಾ ಉಚಿತ ಮರು ವೇಳಾಪಟ್ಟಿಯ ಮೇಲಿನ ಮರುಪಾವತಿಯನ್ನು ಸಹ ನೀಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ, ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ವಿಮಾನಯಾನ ಸಂಸ್ಥೆ ತಿಳಿಸಿದೆ.

ನಿರ್ವಹಣೆ, ತಾಂತ್ರಿಕ ದೋಷ, ಕೆಟ್ಟ ಹವಾಮಾನ ಮತ್ತು ವಾಯುಪ್ರದೇಶದ ನಿರ್ಬಂಧಗಳು ಮುಂತಾದ ಕಾರಣಗಳಿಂದ ಇಂದು(ಜೂ.20) ಹಲವು ಏರ್ ಇಂಡಿಯಾ ವಿಮಾನಗಳು ರದ್ದಾಗಿವೆ.

ಜೂನ್ 21 ಮತ್ತು ಜುಲೈ 15 ರ ನಡುವೆ ವಾರಕ್ಕೆ 38 ಅಂತರರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸುವುದಾಗಿ ಮತ್ತು ಮೂರು ವಿದೇಶಿ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಹೇಳಿಕೊಂಡಿದೆ.

ಪ್ರಯಾಣಿಕರು ತಲುಪಬೇಕಾದ ಸ್ಥಳಗಳಿಗೆ ಬೇಗನೆ ತಲುಪುವಂತೆ ಮಾಡಲು ತನ್ನ ತಂಡವು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಪ್ರಯಾಣದ ಟಿಕೆಟ್ ರದ್ದತಿ ಅಥವಾ ಮತ್ತೆ ಟಿಕೆಟ್ ಕಾಯ್ದಿರಿಸುವುದು, ಅಗತ್ಯವಿದ್ದಲ್ಲಿ ಪೂರ್ಣ ಮರುಪಾವತಿ ಅವಕಾಶವನ್ನು ಪ್ರಯಾಣಿಕರಿಗೆ ನೀಡಲಾಗಿದೆ ಎಂದು ವಿಮಾನಾಯನ ಸಂಸ್ಥೆ ತಿಳಿಸಿದೆ.

ದುಬೈನಿಂದ ಚೆನ್ನೈಗೆ AI906, ದಿಲ್ಲಿಯಿಂದ ಮೆಲ್ಲೋರ್ನ್‌ಗೆ AI308, ಮೆಲ್ಲೋರ್ನ್‌ನಿಂದ ದಿಲ್ಲಿಗೆ AI309 ಮತ್ತು ದುಬೈನಿಂದ ಹೈದರಾಬಾದ್ ಗೆ AI2204 ಸಂಚರಿಸುವ ಏರ್ ಇಂಡಿಯಾ ವಿಮಾನಗಳು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts