ದೇಶ

ಅಹಮದಾಬಾದ್: ವಿಮಾನ ದುರಂತದ ಅವಶೇಷಗಳಡಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ!!

ಈ ಸುದ್ದಿಯನ್ನು ಶೇರ್ ಮಾಡಿ

ಗುಜರಾತಿನ ಅಹಮದಾಬಾದಿನಲ್ಲಿ ನಡೆದ ವಿಮಾನ ದುರಂತದ ಅಡಿಯಲ್ಲಿ ಭಗವದ್ಗೀತೆ ಪುಸ್ತಕವೊಂದು ದೊರಕಿದ್ದು, ಈ ಪುಸ್ತಕಕ್ಕೆ ಯಾವುದೇ ಹಾನಿಯಾಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

akshaya college

ವಿಮಾನ ದುರಂತಕ್ಕೆ ಸಂಬಂಧಪಟ್ಟ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಮತ್ತೊಂದು ವೀಡಿಯೋ ಸಿಕ್ಕಿದ್ದು, ಇದರಲ್ಲಿ ಭಗವದ್ಗೀತೆಯೊಂದು ಪತ್ತೆಯಾಗಿದೆ. ವಿಮಾನ ದುರಂತದ ಅವಶೇಷಗಳಡಿ ವಸ್ತುಗಳನ್ನು ಹೆಕ್ಕಿ ತೆಗೆಯುತ್ತಿರುವ ನಡುವೆಯೇ, ಭಗವದ್ಗೀತೆ ಪುಸ್ತಕ ಪತ್ತೆಯಾಗಿದೆ. ಇದು ಎಲ್ಲರನ್ನು ಆಶ್ಚರ್ಯದ ಕಡಲಲ್ಲಿ ತಳ್ಳಿದೆ. ಕಾರಣ, ಇಡೀಯ ಪರಿಸರವೇ ಸುಟ್ಟು ಹೋಗಿದ್ದರೆ, ಭಗವದ್ಗೀತೆ ಪುಸ್ತಕ ಹಾನಿಯಾಗದೇ ಸುರಕ್ಷಿತವಾಗಿದೆ.

ಎಲ್ಲವನ್ನು ಆಪೋಶನ ತೆಗೆದುಕೊಂಡಿರುವ ಬೆಂಕಿ, ಸುಮಾರು 246ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಆದರೆ ಭಗವದ್ಗೀತೆ ಪುಸ್ತಕ ಸ್ವಲ್ಪವೂ ಹಾನಿಯಾಗದೇ ಪತ್ತೆಯಾಗಿದೆ. ಈ ಭಗವದ್ಗೀತೆಯ ಬಗೆಗಿನ ಸತ್ಯಾಸತ್ಯತೆ ತಿಳಿದುಬಂದಿಲ್ಲ. ವೈದ್ಯಕೀಯ ಕಾಲೇಜು ಹಾಸ್ಟೆಲಿನಲ್ಲಿದ್ದ ಪುಸ್ತಕವೋ, ವಿಮಾನ ಪ್ರಯಾಣಿಕರ ಬ್ಯಾಗ್’ಗಳಲ್ಲಿದ್ದ ಪುಸ್ತಕವೋ ಎನ್ನುವ ಮಾಹಿತಿ ಲಭ್ಯವಾಗಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts