ಸಣ್ಣ ಪುಟ್ಟ ವಿಷಯಕ್ಕೆ ಡಿವೋರ್ಸ್ ತೆಗೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವರು ಕೊನೆಯ ಹಂತದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸುವ ಮೂಲಕ ಡಿವೋರ್ಸ್ ಯಿಂದ ಹಿಂದೆ ಸರಿಯುವುದನ್ನು ನೋಡಬಹುದು. ಆದರೆ ಇಲ್ಲೊಬ್ಬ ಪತಿರಾಯ ಡಿವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ಪತ್ನಿಯನ್ನು ಮನವೊಲಿಸಲು ಒಂದೊಳ್ಳೆ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
@Vishalmalvi ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ದಂಪತಿಗಳಿಬ್ಬರೂ ಡಿವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿರುವುದು ನೋಡಬಹುದು. ಈ ವಿಡಿಯೋದಲ್ಲಿ ದಂಪತಿಗಳಿಬ್ಬರೂ ನಿಂತಿರುವುದನ್ನು ಕಾಣಬಹುದು. ಆದರೆ ಪತಿ ಮುಖದಲ್ಲಿ ಬೇಸರವಿದ್ದು, ಈ ವೇಳೆಯಲ್ಲಿ ಪತಿಯೂ ನಾ ಸಿಖಾ ತೇರೆ ಬಿನ್ ಜೀನಾ ಹಿಂದಿ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಹಾಡು ಕೇಳಿ ಪತ್ನಿಯೂ ಭಾವುಕಳಾಗಿದ್ದು, ಪತಿಯನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು.
ಈ ದಂಪತಿಗಳಿಬ್ಬರೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ವಿಚಾರಣೆಯ ಬಳಿಕ ಪತಿಯ ಹಾಡು ಕೇಳಿ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಜೊತೆಗೆ ಬದುಕಲು ಮುಂದಾಗಿದ್ದಾಳೆ. ಈ ವಿಡಿಯೋವೊಂದು 1.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಈ ರೀತಿ ಹಾಡು ಹಾಡಿ ಹೆಂಡತಿಯ ಮನವೊಲಿಸಬಹುದೆಂದು ಈ ವಿಡಿಯೋ ನೋಡಿದ ಬಳಿಕ ವಷ್ಟೇ ತಿಳಿಯಿತು ಎಂದಿದ್ದಾರೆ.
ಇನ್ನೊಬ್ಬರು, ಇದು ಒಳ್ಳೆಯ ಐಡಿಯಾ, ಆದರೆ ನಾನು ಹಾಡಿಗೆ ಹೆಂಡತಿ ಮನವೊಲಿಯುವುದಲ್ಲ, ಕೋಪ ನೆತ್ತಿಗೇರುತ್ತದೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಹಾಡು ಹಾಡುವುದನ್ನು ಕಲಿತರೆ ಹಣ ಮಾತ್ರವಲ್ಲ, ದಾಂಪತ್ಯ ಕೂಡ ಉಳಿಸಿಕೊಳ್ಳಬಹುದು ಎಂದಿದ್ದಾರೆ. ಕೆಲವರು, ಹೆಂಡತಿ ಮುನಿಸಿಕೊಂಡಾಗಲೇ ಹಾಡು ಹಾಡಿದ್ದರೆ ಕೋರ್ಟ್ ಮೆಟ್ಟಿಲೇರುವ ಪ್ರಸಂಗವೆ ಬರ್ತಾ ಇರ್ಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.