Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ವಿದೇಶ
  • ‘ಜೈ ಜವಾನ್’ | “ನವೀನ್… ತು ಡರ್ ನಾ ನಹೀ. ಮೇ ಆಯಾ” ಎಂದಿದ್ಯಾಕೆ ಕ್ಯಾ. ವಿಕ್ರಮ್ ಬಾತ್ರಾ | ಕಾರ್ಗಿಲ್ ಬೆಟ್ಟದ ಮೇಲಿನ ರಣರೋಚಕ ಯುದ್ಧದ ಚಿತ್ರಣ ಬಿಚ್ಚಿಟ್ಟ ಕಾರ್ಗಿಲ್ ಹುಲಿ, ಸೇನಾ ಪದಕ ಪುರಸ್ಕೃತ ಕ್ಯಾ. ನವೀನ್ ನಾಗಪ್ಪ | ಇದು ಕಾರ್ಗಿಲ್ ವಿಜಯೋತ್ಸವದ ವಿಶೇಷ
ಟ್ರೆಂಡಿಂಗ್ ನ್ಯೂಸ್ವಿದೇಶ

‘ಜೈ ಜವಾನ್’ | “ನವೀನ್… ತು ಡರ್ ನಾ ನಹೀ. ಮೇ ಆಯಾ” ಎಂದಿದ್ಯಾಕೆ ಕ್ಯಾ. ವಿಕ್ರಮ್ ಬಾತ್ರಾ | ಕಾರ್ಗಿಲ್ ಬೆಟ್ಟದ ಮೇಲಿನ ರಣರೋಚಕ ಯುದ್ಧದ ಚಿತ್ರಣ ಬಿಚ್ಚಿಟ್ಟ ಕಾರ್ಗಿಲ್ ಹುಲಿ, ಸೇನಾ ಪದಕ ಪುರಸ್ಕೃತ ಕ್ಯಾ. ನವೀನ್ ನಾಗಪ್ಪ | ಇದು ಕಾರ್ಗಿಲ್ ವಿಜಯೋತ್ಸವದ ವಿಶೇಷ

Shakthi News
July 26, 2024
0
FacebookWhatsApp XTelegram
6 ತಿಂಗಳು ಯುದ್ಧದಲ್ಲಿ ಭಾಗಿ, 21 ತಿಂಗಳು ವೈದ್ಯಕೀಯ ಉಪಚಾರ. ಒಟ್ಟು 27 ತಿಂಗಳು ಸೇನೆಯಲ್ಲಿ ನನ್ನ ಸೇವೆ. ಎಲ್ಲರೂ ಇದನ್ನು ದುರದೃಷ್ಟ ಅಂತ ಹೇಳ್ತಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡ ನಾನು, ಕೆಲವು ತಿಂಗಳುಗಳಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಕಿತು ಎನ್ನುವುದು ಅವರ ವಾದ. ಆದರೆ ನನಗೆ ಹಾಗೇ ಅನ್ನಿಸಲೇ ಇಲ್ಲ. ಕಾರಣವೂ ಇದೆ. 1970ರ ಯುದ್ಧದ ಬಳಿಕ ಮತ್ತೊಂದು ಯುದ್ಧ ನಡೆದದ್ದು 1999ರಲ್ಲಿ. ಅದು ಕಾರ್ಗಿಲ್ ಯುದ್ಧ. ಇದೇ ಹೊತ್ತಿಗೆ ನಾನು ಸೇನೆಗೆ ಸೇರಿಕೊಂಡೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಎಂತಾ ಅದೃಷ್ಟ ನೋಡಿ.

ಈ ಸುದ್ದಿಯನ್ನು ಶೇರ್ ಮಾಡಿ

ನಿರೂಪಣೆ: ಗಣೇಶ್ ಎನ್. ಕಲ್ಲರ್ಪೆ

akshaya college

6 ತಿಂಗಳು ಯುದ್ಧದಲ್ಲಿ ಭಾಗಿ, 21 ತಿಂಗಳು ವೈದ್ಯಕೀಯ ಉಪಚಾರ. ಒಟ್ಟು 27 ತಿಂಗಳು ಸೇನೆಯಲ್ಲಿ ನನ್ನ ಸೇವೆ.

ಎಲ್ಲರೂ ಇದನ್ನು ದುರದೃಷ್ಟ ಅಂತ ಹೇಳ್ತಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡ ನಾನು, ಕೆಲವು ತಿಂಗಳುಗಳಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಕಿತು ಎನ್ನುವುದು ಅವರ ವಾದ. ಆದರೆ ನನಗೆ ಹಾಗೇ ಅನ್ನಿಸಲೇ ಇಲ್ಲ. ಕಾರಣವೂ ಇದೆ. 1970ರ ಯುದ್ಧದ ಬಳಿಕ ಮತ್ತೊಂದು ಯುದ್ಧ ನಡೆದದ್ದು 1999ರಲ್ಲಿ. ಅದು ಕಾರ್ಗಿಲ್ ಯುದ್ಧ. ಇದೇ ಹೊತ್ತಿಗೆ ನಾನು ಸೇನೆಗೆ ಸೇರಿಕೊಂಡೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಎಂತಾ ಅದೃಷ್ಟ ನೋಡಿ.

ಎಷ್ಟೋ ಮಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೂ, ದೇಶಕ್ಕಾಗಿ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ಸಿಗಲೇ ಇಲ್ಲ. ಆದರೆ ನನಗೆ ಆ ಭಾಗ್ಯ ದೊರಕಿತು. ಹಾಗಾಗಿ ನಾನು ಅದೃಷ್ಟವಂತ.

ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಾನು ಮೊದಲ ಪ್ರಯತ್ನದಲ್ಲೇ ಸೇನಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸೇನೆಗೆ ಸೇರಿಕೊಂಡೆ. ಅಕಾಡೆಮಿ ಸೇರಿ ಕೋಚಿಂಗ್ ತೆಗೆದುಕೊಳ್ಳುವವರ ನಡುವೆ, ಸೇನಾ ಮನೆತನದ ಹಿನ್ನೆಲೆ ಇರುವವರ ನಡುವೆ, ನಾನು ಯಾವುದೇ ಹಿನ್ನೆಲೆ ಇಲ್ಲದೇ, ಕೋಚಿಂಗ್ ತೆಗೆದುಕೊಳ್ಳದೇ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದದ್ದು ನನ್ನ ಅದೃಷ್ಟವಲ್ಲದೇ ಮತ್ತಿನ್ನೇನು.

ಸೇನೆಯಿಂದ ಮೆಡಿಕಲ್ ಡಿಸ್ಚಾರ್ಜ್ ಆದ ಬಳಿಕ ಇಂಡಿಯನ್ ಇಂಜಿನಿಯರಿಂಗ್ ಸರ್ವೀಸ್ ಪರೀಕ್ಷೆ ಬರೆದೆ. ಅಲ್ಲೂ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಆಯ್ಕೆಯಾದೆ. ಇದೂ ಅದೃಷ್ಟವೇ. ಅಲ್ಲಿ 20 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡೆ.

ಕೇಂದ್ರ ಸರ್ಕಾರದ ಸೇವೆಯಲ್ಲಿ ಮುಂದುವರಿಯುತ್ತಿದ್ದರೆ ಚೀಫ್ ಇಂಜಿನಿಯರ್ ಆಗಿ ನಿವೃತ್ತಿಗೊಳ್ಳುತ್ತಿದೆ. ಆದರೆ ನಾನು ಸೂಪರಿಟೆಂಡೆಂಡ್ ಇಂಜಿನಿಯರ್ ಆಗಿರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡೆ. ಕಾರಣವೂ ಇದೆ. ಸೇನೆಯ ಬಗ್ಗೆ, ಸೇನಾ ಪರೀಕ್ಷೆಗಳ ಬಗ್ಗೆ ಮಾಹಿತಿ ಕೇಳಿಕೊಂಡು ಹಲವಾರು ಯುವಕರು ನನ್ನ ಬಳಿ ಬರುತ್ತಿದ್ದರು. ಇದಕ್ಕಾಗಿ, ನನ್ನ ಮುಂದಿನ ಜೀವನವನ್ನು ಸೇನೆಯ ಮಾಹಿತಿ ನೀಡಲು ಮೀಸಲಿಡಬೇಕು ಎಂಬ ನಿರ್ಣಯಕ್ಕೆ ಬಂದೆ. ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡು, ಯಾವುದೇ ಫಲಾಪೇಕ್ಷೆ ಇಲ್ಲದೇ ಯುವಕರಿಗೆ ಮಾರ್ಗದರ್ಶನ ನೀಡುವ ಕೆಲಸ, ಸಾರ್ವಜನಿಕರಿಗೆ ಸೇನಾ ವಿಚಾರಗಳನ್ನು ತಿಳಿಸುವ ಕಾಯಕದಲ್ಲಿ ನಾನೀಗ ತೊಡಗಿಸಿಕೊಂಡಿದ್ದೇನೆ.

ಭಾರತೀಯ ಸೇನೆಯೇ ನನ್ನ ಬ್ರ್ಯಾಂಡ್:

ಸೈನ್ಯ ಎಂದರೆ ಶಿಸ್ತು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇದರೊಂದಿಗೆ, ಸೇನೆಯಲ್ಲಿ ಕೆಲಸ ಮಾಡಿ ಬಂದಿದ್ದೇನೆ ಎಂದರೆ ನನಗೆ ಅದೇ ಒಂದು ಬ್ರ್ಯಾಂಡ್. ಅದು ನನ್ನ ಜೀವನದಲ್ಲೇ ಬ್ರ್ಯಾಂಡ್ ಆಗಿದೆ. ಎಷ್ಟೋ ಜನರ ತ್ಯಾಗ, ಬಲಿದಾನದ ಫಲದಿಂದಾಗಿ ಇಂದು ಭಾರತೀಯ ಸೇನೆಗೆ ಒಂದು ಬ್ರ್ಯಾಂಡ್ ಬಂದಿದೆ. ಸರ್ವಸ್ವವನ್ನು ತ್ಯಾಗ ಮಾಡಿ, ದೇಶವನ್ನು ಕಾಪಾಡಿದ್ದಾರೆ. ಇದರೊಂದಿಗೆ ಬ್ರ್ಯಾಂಡ್ ಜೊತೆಗೂಡಿದೆ.

ಕಾರ್ಗಿಲ್ ಬೆಟ್ಟಗಳ ನಡುವಿನ ಹೋರಾಟ:

1997ರ ಡಿಸೆಂಬರಿನಲ್ಲಿ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರಿಕೊಂಡೆ. ಬಳಿಕ 1998ರ ಡಿಸೆಂಬರ್’ವರೆಗೆ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ, ಕಮೀಷನ್. ಇದಾಗಿ 3 ವಾರಗಳ ರಜೆ.

ರಜೆ ಮುಗಿಸಿಕೊಂಡು ಬಂದವನಿಗೆ ಸೋಪುರ್’ನ 13 ಬೆಟಾಲಿಯನ್ ಜಮ್ಮು & ಕಾಶ್ಮೀರ್ ರೈಫಲ್ಸ್ ಇಲ್ಲಿ ಮೊದಲ ನೇಮಕಾತಿ ಸಿಕ್ಕಿತು.

ಅದು 1999ರ ಮೇ ತಿಂಗಳು. ಕಾರ್ಗಿಲ್ ಬೆಟ್ಟಗಳನ್ನು ಆಕ್ರಮಿಸಿದ್ದ ಪಾಕಿಸ್ತಾನದ ಸೈನಿಕರು, ಬೆಟ್ಟಗಳ ತುದಿಯಿಂದ ಆಕ್ರಮಣಕ್ಕೆ ಮುಂದಾಗುತ್ತಾರೆ. ನಮ್ಮ ಬೆಟಾಲಿಯನ್ ಗೆ ಆಕ್ರಮಿತ ಎರಡು ಬೆಟ್ಟಗಳನ್ನು ಮರುವಶಪಡಿಸಿಕೊಳ್ಳುವ ಜವಾಬ್ದಾರಿ ನೀಡಲಾಗುತ್ತದೆ. ತಂಡದ ನೇತೃತ್ವ ವಹಿಸಿಕೊಂಡವರು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಕ್ಯಾ. ಸಂಜೀವ್ ಸಿಂಗ್ ಜಾಂಬ್’ವಾಲ್.

ಮೊದಲ ಬೆಟ್ಟ ಪಾಯಿಂಟ್ 5140. ಸಮುದ್ರದಿಂದ ಬೆಟ್ಟ ಎಷ್ಟು ಎತ್ತರದಲ್ಲಿದೆ ಎನ್ನುವುದರ ಮೇಲೆ, ಬೆಟ್ಟಗಳಿಗೆ ಈ ನಂಬರ್ ನೀಡಲಾಗುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಕ್ಯಾ. ಸಂಜೀವ್ ಸಿಂಗ್ ಜಾಂಬ್’ವಾಲ್ ಎಂತಹ ಅದ್ಭುತ ಹೋರಾಟ ನಡೆಸುತ್ತಾರೆ ಎಂದರೆ, ಕೇವಲ ಎರಡೇ ದಿನದಲ್ಲಿ ಆ ಬೆಟ್ಟ ನಮ್ಮ ಕೈವಶ ಆಗುತ್ತದೆ. ಈ ಹೋರಾಟದಲ್ಲಿ ನನ್ನ ಪಾತ್ರ ಇರಲಿಲ್ಲ.

ಮುಂದಿನ ಬೆಟ್ಟ ಪಾಯಿಂಟ್ 4875. ಪಾಯಿಂಟ್ 5140ಕ್ಕೆ ಗಸ್ತು ಹಾಕಿ, ಬೆಟ್ಟದಿಂದ ಕೆಳಗಿಳಿದೆವು. ಸಾಮಾನ್ಯವಾಗಿ, ಬೆಟ್ಟಗಳ ಮೇಲೆ ಯುದ್ಧಕ್ಕೆ ಹೋಗುವ ಮೊದಲ ಒಂದು ದಿನ ಸಮೀಪದ ಇನ್ನೊಂದು ಬೆಟ್ಟಕ್ಕೆ ಹತ್ತಿ, ಆ ಬೆಟ್ಟದಲ್ಲಿರುವ ಶತ್ರುಗಳ ದಿನಚರಿಯನ್ನು ಅಭ್ಯಾಸ ಮಾಡುತ್ತೇವೆ. ನಂತರ ಯೋಜನೆಯ ರೂಪ, ಕಾರ್ಯಗತ.

ಇನ್ನು ಸರಿಯಾಗಿ ನೆನಪಿದೆ. ಆ ದಿನ 1999ರ ಜುಲೈ 4. ಪಾಯಿಂಟ್ 4875 ಬೆಟ್ಟದ ಮೇಲೆ ಯುದ್ಧ ಸಾರಿದ್ದೇವು. 4, 5, 6ರಂದು ರಾತ್ರಿ – ಹಗಲು ಯುದ್ಧ ನಡೆಯಿತು. ನಿದ್ದೆ, ಆಹಾರ, ನೀರು ಯಾವುದೂ ಇಲ್ಲ. ಇನ್ನು 1 ಬಂಕರ್ ಉಳಿದಿತ್ತಷ್ಟೇ.

ಕೆಳಭಾಗದಿಂದ ಸಂದೇಶ ಕಳುಹಿಸುತ್ತಾರೆ – ಆಹಾರ ಕಳುಹಿಸಲೇ ಎಂದು. ಅದಾಗಲೇ ನಾವು ಆಹಾರ ತಿನ್ನದೇ, ನಿದ್ದೆ ಇಲ್ಲದೇ 48 ಗಂಟೆಗಳಾಗಿತ್ತು. ಸುರಿಯುವ ಮಂಜನ್ನು ಸರಿಸಿ, ಅದರೊಳಗಡೆಯಿದ್ದ ಮಂಜನ್ನಷ್ಟೇ ಬಾಯಿಗೆ ಹಾಕಿಕೊಳ್ಳುತ್ತಿದ್ದೇವು.

ಜುಲೈ 7ರಂದು ಬೆಳಿಗ್ಗೆ. ಕೊನೆ ಬಂಕರಿನ ಮೇಲಿನ ನಮ್ಮ ಯುದ್ಧ. 150 ಜನ ಸೈನಿಕರ ನೇತೃತ್ವ ನಾನು ವಹಿಸಿದ್ದೆ. ನನ್ನ ಕೈಯಲ್ಲಿ ಎಕೆ 47 ಗನ್ ಇತ್ತು. ಒಂದು ಕಲ್ಲಿನ ಸೆರೆಯಲ್ಲಿ ನಿಂತು ಎದುರಾಳಿಗಳ ಮೇಲೆ ದಾಳಿ ನಡೆಸುತ್ತಿದ್ದೆ. ಅಷ್ಟರಲ್ಲಿ, ಶತ್ರು ಪಾಳಯದಿಂದ ಹಾರಿ ಬಂದ ಒಂದು ಹ್ಯಾಂಡ್ ಗ್ರೆನೇಡ್ ನನ್ನ ಬಳಿ ಬಿದ್ದಿತು.

ಅಷ್ಟೇ, ನಾನೇನು ಮಾಡಲು ಸಾಧ್ಯ. ತರಬೇತಿ ಸಂದರ್ಭ ಹೇಳಿಕೊಟ್ಟ ವಿಚಾರಗಳು ತಲೆಯಲ್ಲಿ ಸುಳಿಯಿತು – ಗ್ರೆನೇಡ್ ಅನ್ನು ಬೀಸಿ ಎಸೆದ ಬಳಿಕ ಅದು ಒಂದು ಕಡೆ ಹೋಗಿ ಬೀಳುತ್ತದೆ. ಅದಾಗಿ 4 ಸೆಕೆಂಡ್ ಗಳಲ್ಲಿ ಗ್ರೆನೇಡ್ ಸ್ಫೋಟಗೊಳ್ಳುತ್ತದೆ ಎಂದು. ಹಾಗಾಗಿ, ನನ್ನಲ್ಲಿ 4 ಸೆಕೆಂಡ್ ಗಳ ಸಮಯ ಮಾತ್ರ ಇತ್ತು. ಆಸುಪಾಸಿನಲ್ಲಿ ಬಿಸಾಡುವಂತಿರಲಿಲ್ಲ. ಅಲ್ಲಿ ನಮ್ಮ ಸೈನಿಕರಿದ್ದರು. ಸಾಧ್ಯವಾದಷ್ಟು ಬೀಸಿ ಎಸೆದೆ. ಒಂದು ಕೈಯಲ್ಲಿ ಗನ್, ಪಕ್ಕದಲ್ಲಿ ಕಲ್ಲು. ಕೈಯಲ್ಲಿ ಗ್ರೆನೇಡನ್ನು ಬೀಸಲು ಸಾಧ್ಯವಿಲ್ಲದಷ್ಟು ಕಿರಿದಾದ ಜಾಗ. ಹಾಗಾಗಿ, ಗ್ರೆನೇಡ್ ಪಕ್ಕದ ಕಲ್ಲಿಗೆ ಬಡಿದು, ಮತ್ತೆ ನನ್ನ ಕಾಲ ಬುಡದಲ್ಲೇ ಬಿದ್ದಿತು.

ಕೇವಲ 1 ಸೆಕೆಂಡ್ ಮಾತ್ರ ನನ್ನಲ್ಲಿತ್ತು. ಅಷ್ಟರಲ್ಲಿ ನನ್ನ ಬಾಲ್ಯ, ಶಾಲಾ – ಕಾಲೇಜು ದಿನಗಳು, ಹೆತ್ತವರು ನೆನಪಿಗೆ ಬಂದರು. ಸಾಯುವುದು ನಿಶ್ಚಿತ. ಆದರೆ ನನ್ನ ದೇಹವನ್ನು ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ಮನೆಯವರು ನೋಡುವುದೇ? ಬೇಡ ಹಾಗಾಗಬಾರದು ಎಂದು ನಿಶ್ಚಯಿಸಿದೆ. ತಲೆಯನ್ನು ಮುಂದೆ ಮಾಡಿ, ಪಕ್ಕದಲ್ಲೇ ಇದ್ದ ಕಲ್ಲಿನ ಸೆರೆಗೆ ಹಾರಿದೆ. ಕಾಲುಗಳು ಹಿಂದುಳಿದವು. ಕ್ಷಣದಲ್ಲಿ ಗ್ರೆನೇಡ್ ಸಿಡಿಯಿತು. ಕಾಲುಗಳು ಛಿದ್ರಗೊಂಡವು.

ಒಂದಷ್ಟು ಸೆಕೆಂಡ್ ಏನಾಯಿತು ಎಂದು ತಿಳಿಯಲೇ ಇಲ್ಲ. ಮೆಲ್ಲನೇ ಪ್ರಜ್ಞೆ ಮರಳತೊಡಗಿತು. ನನ್ನ ಮುಂದೆ ಕ್ಯಾ. ವಿಕ್ರಮ್ ಬಾತ್ರಾ ಓಡೋಡಿ ಬರುತ್ತಿದ್ದರು. “ನವೀನ್ ತು ಡರ್ ನಾ ನಹೀ. ಮೇ ಆಯಾ…” ಎಂದು ರಕ್ಷಣೆಗೆ ಓಡೋಡಿ ಬಂದರು. ಯುದ್ಧವನ್ನು ನಾನು ಮುಂದುವರಿಸುತ್ತೇನೆ. ನೀನು ಕೆಳಭಾಗಕ್ಕೆ ಹೋಗಿ, ಚಿಕಿತ್ಸೆ ತೆಗೆದುಕೋ ಎಂದು ಸೂಚಿಸಿದರು. ನಾನು ತೆವಳುತ್ತಾ ಇನ್ನೊಂದು ಬಂಡೆಯತ್ತ ಸರಿದೆ. ಬಂಡೆಯ ಬಳಿ ತಲುಪಿ ಹಿಂದಿರುಗಿ ನೋಡಿದರೆ, ತೆವಳುತ್ತಾ ಬಂದ ಜಾಗ ಸಂಪೂರ್ಣ ರಕ್ತಮಯವಾಗಿತ್ತು. ಕಾಲು ನೋಡಿದೆ, ಎಳೆದರೆ ಕಿತ್ತು ಬಂದುಬಿಡುತ್ತದೋ ಎಂಬಂತಿತ್ತು.

ಓರ್ವ ಸೈನಿಕ ನನ್ನನ್ನು ಭುಜದಲ್ಲಿ ಹಾಕಿ, ಬೆಟ್ಟದ ಕೆಳಭಾಗಕ್ಕೆ ಕೊಂಡೊಯ್ದರು.

ಕ್ಯಾ. ವಿಕ್ರಮ್ ಬಾತ್ರಾ ಅಮರ್ ರಹೇ:

ಬೆಟ್ಟದ ಕೆಳಭಾಗದಲ್ಲಿ ನನ್ನ ಚಿಕಿತ್ಸೆ ನಡೆಯುತ್ತಿತ್ತು. ದಾದಿಯೊಬ್ಬರು ಬಂದು, ನಿಮ್ಮ ತ್ಯಾಗ ನಿಷ್ಫಲಗೊಳ್ಳಲಿಲ್ಲ. ಆ ಬೆಟ್ಟ ನಮ್ಮ ಕೈವಶವಾಯಿತು. ಆದರೆ, ಕ್ಯಾ. ವಿಕ್ರಮ್ ಬಾತ್ರಾ ಅಮರರಾದರು ಎಂದರು.

ಆ ಕ್ಷಣ ನಾನೇನು ಪ್ರತಿಕ್ರಿಯಿಸಲಿ. ಬೆಟ್ಟದತ್ತ ಒಮ್ಮೆ ನೋಡಿ, ನೋವಿನ ಕೈಗಳಿಂದ ಸೆಲ್ಯೂಟ್ ಮಾಡಿದೆ.

ಕ್ಯಾ. ವಿಕ್ರಮ್ ಬಾತ್ರಾ, ಕ್ಯಾ. ಸಂಜೀವ್ ಸಿಂಗ್ ಜಾಂಬ್ ವಾಲ್ ಅವರೊಂದಿಗೆ ಇನ್ನೋರ್ವ ಡೇರ್ ಡೆವಿಲ್ ಆಫೀಸರ್ ಅವರನ್ನು ನೆನೆಯಲೇ ಬೇಕು. ಅವರು, ಮೇಜರ್ ಅಜಯ್ ಸಿಂಗ್ ಜಸ್ರೋಟಿಯಾ. ಇವರು ನನಗಿಂತ ಒಂದು ವರ್ಷ ಸೀನಿಯರ್. ಆದರೆ ಅವರು ಸಲ್ಲಿಸಿದ ಸೇವೆ, ನಮ್ಮೊಂದಿಗಿದ್ದ ಒಡನಾಟದ ಕ್ಷಣಗಳು ಅನುಪಮ.

ನಮ್ಮ ಬೆಟಾಲಿಯನ್’ನಲ್ಲಿ ಮೇಜರ್ ಅಜಯ್ ಸಿಂಗ್ ಜಸ್ರೋಟಿಯಾ ಹಾಗೂ ಕ್ಯಾ. ವಿಕ್ರಮ್ ಬಾತ್ರಾ ಸಹಿತ 15 ಸೈನಿಕರನ್ನು ನಾವು ಕಳೆದುಕೊಂಡೆವು.

ಒಂದು ವೇಳೆ ನಾನು ಈಗಲೂ ಸೇನೆಯಲ್ಲಿರುತ್ತಿದ್ದರೆ ಬ್ರಿಗೇಡಿಯರ್ ಹುದ್ದೆಯಲ್ಲಿರುತ್ತಿದೆ. ನನ್ನ ಜೊತೆಗಿದ್ದವರು ಈಗ ಬ್ರಿಗೇಡಿಯರ್ ಆಗಿದ್ದಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡಿದ್ದ ನಾನು ಸ್ವಯಂ ನಿವೃತ್ತಿಯನ್ನು ಪಡೆದುಕೊಳ್ಳುತ್ತಿರಲಿಲ್ಲ. ಸೇನಾ ಸಮವಸ್ತ್ರ ಧರಿಸಿ ಕೆಲಸ ಮಾಡಬೇಕು ಎಂಬುದೇ ನನ್ನ ಕನಸಾಗಿತ್ತು.

ದುರ್ಗಿ ಮಾತಾ ಕೀ ಜೈ:

ದುರ್ಗಿ ಮಾತಾ ಕೀ ಜೈ ಎನ್ನುವುದು ನಮ್ಮ ಬೆಟಾಲಿಯನ್ ನ ಘೋಷ ವಾಕ್ಯ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಬೆಟಾಲಿಯನ್ ನ ಸೇವೆ, ತ್ಯಾಗ ದೊಡ್ಡ ಮಟ್ಟದಲ್ಲೇ ಇತ್ತು. ಭಾರತದ ಇತಿಹಾಸದಲ್ಲೇ ಒಂದು ಯುದ್ಧದಲ್ಲಿ ಒಂದು ಬೆಟಾಲಿಯನ್’ಗೆ ಎರಡು ಪರಮವೀರ ಚಕ್ರ ಸಿಕ್ಕಿದ್ದರೆ, ಅದು ನಮ್ಮ ಬೆಟಾಲಿಯನ್’ಗೆ ಮಾತ್ರ. ಒಬ್ಬರು ಕ್ಯಾ. ವಿಕ್ರಮ್ ಬಾತ್ರಾ ಹಾಗೂ ರೈಫಲ್ ಮ್ಯಾನ್ ಸಂಜಯ್ ಕುಮಾರ್.

ಲೆಫ್ಟಿನೆಂಟ್ ಕರ್ನಲ್ ಜೋಶಿ ಅವರು ಲೆಫ್ಟಿನೆಂಟ್ ಜನರಲ್ ಆಗಿ, ಆರ್ಮಿ ಕಮಾಂಡರ್ ಆಗಿ ನಿವೃತ್ತರಾದರು. ಮೇಜರ್ ಗುರುಪ್ರೀತ್, ಮೇಜರ್ ಭಾಸ್ಕರ್ ನಮ್ಮ ರೆಜಿಮೆಂಟಿನಲ್ಲಿದ್ದರು. ಇಂತಹ ಉತ್ತಮ ಅಧಿಕಾರಿಗಳಿಂದಲೇ ಸೈನ್ಯ ಉತ್ತಮವಾಗಿ ಮುನ್ನಡೆಯುತ್ತದೆ. ಇದರೊಂದಿಗೆ ಜವಾನ್ಸ್ ಸೇವೆ ಮರೆಯಲು ಸಾಧ್ಯವಿಲ್ಲ.

ಕಾರ್ಗಿಲ್ ಯುದ್ಧ ನೀಡಿದ ಸಂದೇಶ:

ಯುದ್ಧ ಪ್ರಾರಂಭಿಸಿದವರು, ಯಾವ ಉದ್ದೇಶ ಇಟ್ಟುಕೊಂಡಿದ್ದರೋ ಅದನ್ನು ಈಡೇರದಂತೆ ಮಾಡಿದ್ದೇ ಭಾರತದ ಸಾಧನೆ. ಇದು ಕಾರ್ಗಿಲ್ ಯುದ್ಧ ನೀಡಿದ ಸ್ಪಷ್ಟ ಸಂದೇಶ.

ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿತಕ್ಕೆ ತರುವ ಉದ್ದೇಶದಿಂದಲೇ ಬೆಟ್ಟದ ಮೇಲೆ ಪಾಕಿಸ್ತಾನದ ಸೈನಿಕರು ಆಕ್ರಮಿತಗೊಂಡಿದ್ದರು. ಕೆಳಭಾಗದಲ್ಲಿ ನಮ್ಮ ಕಾನ್ವಾಯಿ (30- 40 ವಾಹನಗಳ ಸಾಲು) ಶುರುವಾಗುತ್ತಿದ್ದಂತೆ, ಮೇಲ್ಭಾಗದಿಂದ ಶೆಲ್ಲಿಂಗ್ (ಗುಂಡಿನ ಸುರಿಮಳೆ) ಮಾಡುತ್ತಿದ್ದರು. ಅಂದರೆ ವಾಹನ ಸಾಗಾಟ ಒಂದು ಕಡೆಯಿಂದ ಇನ್ನೊಂದು ಕಡೆ ತೆರಳುವುದನ್ನು ನಿರ್ಬಂಧಿಸಬೇಕಿತ್ತು. ಲೇ ಲಡಾಕ್, ಸಿಯಾಚಿನ್ ಮೊದಲಾದ ಭಾಗಗಳಿಗೆ ನಾವು ತೆರಳುವುದನ್ನು ತಡೆಯಬೇಕಿತ್ತು. ನಮ್ಮ ಸೈನಿಕರಿಗೆ ಆಹಾರ ಸಿಗದಂತೆ ಮಾಡುವುದು ಅವರ ಮೊದಲ ಉದ್ದೇಶವಾಗಿತ್ತು. ಹಾಗೂ ಸಿಯಾಚಿನನ್ನು ವಶಪಡಿಸಿಕೊಳ್ಳುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತದ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸುವ ಉದ್ದೇಶ ಪಾಕಿಸ್ತಾನಕ್ಕಿತ್ತು. ಈ ಉದ್ದೇಶವನ್ನು ಸಫಲಗೊಳಿಸಲು ಬಿಡದ ಭಾರತ, ಎದುರಾಳಿ ಪಾಕಿಸ್ತಾನಕ್ಕೆ ಪ್ರಖರವಾದ ಏಟು ನೀಡಿತು. ಆ ಏಟು ಹೇಗಿತ್ತು ಎಂದರೆ, ಪಾಕಿಸ್ತಾನ ಇಂದು ಕೂಡ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಭಾರತೀಯ ಸೈನ್ಯದ ಸಾಮರ್ಥ್ಯ ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಯುವಂತೆ ಮಾಡಿತು.

ಕಾರ್ಗಿಲ್ ಯುದ್ದದ ಬಳಿಕ ಪಾಕಿಸ್ತಾನದಲ್ಲಿ ಒಳಯುದ್ಧ ಪ್ರಾರಂಭವಾಯಿತು. ಅಧ್ಯಕ್ಷ ನವಾಜ್ ಷರೀಫ್ ಹೊರದೇಶಕ್ಕೆ ಹೋಗಿ ಬರುವಾಗ, ಅವರ ವಿಮಾನವನ್ನು ಆಗಿನ ಆರ್ಮಿ ಚೀಫ್ ಪರ್ವೇಜ್ ಮುಷರಫ್ ತಡೆದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಅವಮಾನಕ್ಕೀಡಾಗುವಂತೆ ಮಾಡಿತು.

ಮೌಂಟೇನ್ ವಾರ್ ಫೇರ್ ನಲ್ಲಿ ಭಾರತದ 527 ಸೈನಿಕರು ವೀರ ಮರಣವನ್ನಪ್ಪಿದ್ದಾರೆ. ಪಾಕಿಸ್ತಾನದ 800ಕ್ಕೂ ಅಧಿಕ ಸೈನಿಕರು ಮೃತಪಟ್ಟಿದ್ದಾರೆ ಎನ್ನುವುದು ಗುಪ್ತಚರ ಮಾಹಿತಿ. ಆದರೆ ಪಾಕಿಸ್ತಾನ ಇದುವರೆಗೆ ಇದರ ಬಗ್ಗೆ ಅಧಿಕೃತ ಮಾಹಿತಿ ನೀಡಲೇ ಇಲ್ಲ. ಆದರೂ, ಭಾರತದ ಸೈನ್ಯ ಪಾಕಿಸ್ತಾನ ಸೈನ್ಯದ ಆ ಮೃತದೇಹಗಳನ್ನು ಅದೇ ಬೆಟ್ಟದ ಮೇಲೆ, ಅವರ ಸಂಪ್ರದಾಯದ ಪ್ರಕಾರವೇ, ಅವರ ಧ್ವಜವನ್ನು ಮೃತದೇಹದ ಮೇಲೆ ಹಾಕಿ ದಫನ ಮಾಡಿತು. ಅಂದರೆ, ಭಾರತದ ಸೈನ್ಯ ನೈತಿಕತೆಯೊಂದಿಗೆ ರಾಜಿ ಮಾಡುವುದಿಲ್ಲ ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟಿತು.

ಕ್ಯಾ. ವಿಕ್ರಮ್ ಬಾತ್ರಾ ಅವರು ಮೃತಪಟ್ಟ ಬೆಟ್ಟದ ಮೇಲೆಯೇ ಪಾಕಿಸ್ತಾನ ಸೈನಿಕರ ಮೃತದೇಹಗಳನ್ನು ದಫನ ಮಾಡಲಾಯಿತು.

ಸೌಮ್ಯ ನವೀನ್ ತೆಗೆದುಕೊಂಡ ದೃಢ ನಿಲುವು:

2001ರಲ್ಲಿ ನಾನು ಸೈನ್ಯದಿಂದ ಮೆಡಿಕಲ್ ಡಿಸ್ಚಾರ್ಜ್ ಆದೆ. 2004ರಲ್ಲಿ ವಿವಾಹದ ಸಿದ್ಧತೆ ನಡೆಯಿತು. ಮೂಲತಃ ಹುಬ್ಬಳ್ಳಿಯವನಾದ ನನಗೆ, ತುಮಕೂರಿನ ಸೌಮ್ಯ ಅವರೊಂದಿಗೆ ಮಾತುಕತೆಯ ಪ್ರಸ್ತಾಪ ಬಂದಿತು.

ಏನಾಯಿತೋ ಗೊತ್ತಿಲ್ಲ, ಎಷ್ಟಾದರೂ ಜೀವನದ ಪ್ರಶ್ನೆಯಲ್ಲವೇ? ಸಮಾಜವೂ ಮಾತನಾಡಿಕೊಳ್ಳುತ್ತದೆ. ಕಾಲು ಊನವಿರುವ ಹುಡುಗನಿಗೆ ಮಗಳನ್ನು ಕೊಡುತ್ತೀರಾ ಎಂಬ ಪ್ರಶ್ನೆಯೂ ಎದ್ದಿರಬಹುದು. ಸೌಮ್ಯ ಅವರ ತಂದೆ ವಿವಾಹದ ಪ್ರಸ್ತಾಪದಿಂದ ಹಿಂದೆ ಸರಿಯುವ ಮಾತನ್ನು ಮುಂದಿಟ್ಟರು. ಆ ಹೊತ್ತಿನಲ್ಲಿ ಸೌಮ್ಯ ದೃಢ ನಿಲುವು ತೆಗೆದುಕೊಂಡರು.

ಕಾಲು ಊನವಿದೆ, ವಿಶೇಷ ಚೇತನ ಎಂಬ ಕಾರಣಕ್ಕೆ ಮದುವೆ ನಿರಾಕರಿಸುತ್ತೀರಿ ಎಂದರೆ, ಜೀವನದಲ್ಲಿ ನಾನೆಂದು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ ಎಂದುಬಿಟ್ಟರು. ಮದುವೆಗೆ ಮನೆಯವರು ಒಪ್ಪಿಕೊಂಡರು. ಮತ್ತೆಲ್ಲವೂ ಸುಸೂತ್ರ. ನಮಗೆ ಒಬ್ಬಾಕೆ ಮಗಳು. ಹೆಸರು ಸವೇರಾ. ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದು, ವೈದ್ಯಕೀಯ ವಿದ್ಯಾಭ್ಯಾಸದ ಆಕಾಂಕ್ಷೆ ಹೊಂದಿದ್ದಾಳೆ.

ನನ್ನ ತಂದೆ ದಿ. ನಾಗಪ್ಪ, ತಾಯಿ ದಿ. ಶಾರದಾ. ಓರ್ವ ಸಹೋದರ. ಇಬ್ಬರು ಸಹೋದರಿಯರು.

ನನ್ನದೊಂದು ಅಪೇಕ್ಷೆ:

ಕಾರ್ಗಿಲ್ ಕದನದಲ್ಲಿ 527 ಸೈನಿಕರು ಸಾವನ್ನಪ್ಪಿದರು. 1300ಕ್ಕೂ ಅಧಿಕ ಸೈನಿಕರು ಗಾಯಗೊಂಡರು. ಇದಾಗಿ 25 ವರ್ಷ ಸರಿದು ಹೋಯಿತು. ಅವರನ್ನು ನೆನೆಪಿಸಿಕೊಳ್ಳುವ ಕೆಲಸವನ್ನು ಜುಲೈ 26ರಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಹಣತೆ ಬೆಳಗುವ ಮೂಲಕ ಮಾಡಬೇಕು ಎನ್ನುವುದು ನನ್ನ ಕೋರಿಕೆ.

ಇನ್ನೊಂದು ಕೋರಿಕೆ, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಸರ್ಕಾರದ ನೆರವು ಸಿಕ್ಕಿರುತ್ತದೆ. ಆದರೆ ಅಷ್ಟೇ ಸಾಕೇ? ಅವರಿಗೆ ನೋವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮದು. ನೀವು ಯಾವುದೇ ಊರಿಗೆ ಹೋದಾಗ, ಆಸುಪಾಸು ಸೈನಿಕರ ಮನೆ ಇದೆಯೋ ಎಂದು ನೋಡಿಕೊಳ್ಳಿ. ಇದ್ದರೆ, ಭೇಟಿ ಕೊಡಿ. ಮನೆಯವರ ಜೊತೆ ನಾವಿದ್ದೇವೆ ಎಂಬ ವಿಶ್ವಾಸ ತುಂಬಿಸಿ. ಇದಕ್ಕಿಂತ ಹೆಚ್ಚು ಓರ್ವ ಸೈನಿಕನಿಗೆ ಏನು ಬೇಕು?


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:betallionhow many indian soldiers died in 1965 warhttps://www.joinindianarmy.nic.in/indian army age limitindian army age limit obcindian army agnipath 2024indian army agnipath 2024 apply onlineindian army agnipath recruitmentindian army agniveerindian army agniveer cut off 2024indian army agniveer physical date 2024indian army agniveer recruitment 2024indian army agniveer result 2024indian army agniveer result 2024 dateindian army agniveer salaryindian army application dateindian army application date 2024indian army appsindian army backgroundindian army bangalore addressindian army based moviesindian army bhartiindian army bharti 2024indian army bharti 2024 dateindian army book pdf free downloadindian army booksindian army boy photoindian army brand ambassadorindian army bro recruitment 2024indian army bsc nursingindian army bsc nursing salaryindian army budgetindian army budget 2024indian army capindian army captainindian army chiefindian army chief 2024indian army chief listindian army clerk qualificationindian army clerk salaryindian army commandsindian army cuttingindian army drawingindian army haircutindian army logoindian army newsindian army photoindian army ranksindian army recruitmentindian army recruitment 2024indian army result 2024indian army salaryindian army wallpaperkargilkargil warkargil war 1999kargil war aboutkargil war activitykargil war againstkargil war against pakistankargil war air force operation namekargil war all informationkargil war all soldiers listkargil war all soldiers name listkargil war also known askargil war animationkargil war anniversarykargil war areakargil war armykargil war army chiefkargil war articlekargil war barkha duttkargil war based movieskargil war battleskargil war best photoskargil war betweenkargil war between india and pakistankargil war board decorationkargil war board decoration ideaskargil war bollywood moviekargil war bookkargil war book pdfkargil war book pdf download in hindikargil war book written bykargil war brave soldierskargil war byjuskargil war captainkargil war captain vikram batrakargil war captionskargil war casualtieskargil war casualties pakistankargil war causekargil war celebrationkargil war chartkargil war clipskargil war code namekargil war commanderkargil war committeekargil war conclusionkargil war costkargil war datekargil war date 2024kargil war date and yearkargil war daykargil war day quoteskargil war deathkargil war detailskargil war diwas 2024kargil war diwas speechkargil war documentarykargil war drawingkargil war drawing competitionkargil war drawing easykargil war drawing easy pencilkargil war durationkargil war heroeskargil war heroes photoskargil war historykargil war imageskargil war memorialkargil war memorial livekargil war mountainkargil war moviekargil war museumkargil war naveen nagappakargil war newskargil war nuclearkargil war pdfkargil war start datekargil war summarykargil war vijay diwaskargil war year
FacebookWhatsApp XTelegram
Previous Article

ಕಾರ್ಗಿಲ್‌ ಯುದ್ಧದಲ್ಲಿ ಭಾರತ ವಾಯುಪಡೆ ನಡೆಸಿತ್ತು ಲೇಸರ್‌ ಬಾಂಬ್‌ ದಾಳಿ, ರೋಮಾಂಚನಕಾರಿ ವಿಡಿಯೋ ವೈರಲ್

Next Article

ಆತ್ಮಹತ್ಯಾ ಯಂತ್ರ ಆವಿಷ್ಕಾರ! ನೋವಿಲ್ಲದೇ ಸಾಯುವ ಯಂತ್ರಕ್ಕೆ ಸ್ವಿಟ್ಜರ್ಲೆಂಡ್ ಅನುಮೋದನೆ!! ಸುಲಭದಲ್ಲಿ ಸಾಯುವ ಬಗೆಯಾದರೂ ಹೇಗೆ? ಇಲ್ಲಿ ಓದಿ

Shakthi News

What's your reaction?

  • 0
    ai technology
  • 0
    artificial intelegence
  • 0
    bt ranjan
  • 0
    death news
  • 0
    gl
  • 0
    google for education
  • 0
    independence
  • 0
    jewellers
  • 0
    manipal
  • 0
    nidana news
  • 0
    puttur news
  • 0
    sowmya
  • 0
    udupi

Related Posts

ಟ್ರೆಂಡಿಂಗ್ ನ್ಯೂಸ್
207
40

ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಯೋಗ ಗಣಪತಿ ನಮಸ್ಕಾರ | ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜನೆ

by Shakthi News
August 27, 2025

ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ನೇತ್ರಾವತಿ ವಲಯ, ಪುತ್ತೂರು…

kille-ganapa
ಟ್ರೆಂಡಿಂಗ್ ನ್ಯೂಸ್
190
38

ಕಿಲ್ಲೆ ಗಣಪನಿಗೆ ಸ್ವರ್ಣಾಭರಣ – ಚಿನ್ನದ ಸೊಂಡಿಲು, ಚಿನ್ನದ ಕರ್ಣಾದ್ಯ

by Shakthi News
August 26, 2025

ಪುತ್ತೂರು: ಜಿಲ್ಲೆಯಲ್ಲೇ ಅತೀ ಹಿರಿಯ ಗಣಪ ಎಂಬ ಖ್ಯಾತಿ ಪಡೆದುಕೊಂಡಿರುವ ಪುತ್ತೂರಿನ ಕಾರಣೀಕತೆಯ…

kukkila-generators
ಟ್ರೆಂಡಿಂಗ್ ನ್ಯೂಸ್
27
4

ಇಂದು ಕೊನೆ ದಿನ: ಪಂಜದಲ್ಲಿ ಜನರೇಟರ್ ಕ್ಯಾಂಪ್ | ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್

by Shakthi News
August 23, 2025

ಕುಕ್ಕಿಲ ಎಂಟರ್ ಪ್ರೈಸಸ್ ನೇತೃತ್ವದಲ್ಲಿ ಪೋರ್ಟೇಬಲ್ ಜನರೇಟರ್ ಗಳ ಉಚಿತ ಸರ್ವಿಸ್ ಕ್ಯಾಂಪ್ ಪಂಜ…

ಟ್ರೆಂಡಿಂಗ್ ನ್ಯೂಸ್
118
23

ಸ್ವಾತಂತ್ರ್ಯದ ದಿನ ಸಂಕಲ್ಪದ ದಿನ: ಸ್ಟೆಲ್ಲಾ ವರ್ಗೀಸ್ | ಸಾಧನೆಗೆ ಸಾಕ್ಷಿಯಾಗಿರುವ ಭಾರತಕ್ಕೆ ಕೋಮುವಾದ ಕಪ್ಪುಚುಕ್ಕೆ: ಅಶೋಕ್ ರೈ

by Shakthi News
August 15, 2025

ಪುತ್ತೂರು: ಹಿರಿಯರ ತ್ಯಾಗ ಬಲಿದಾನ ಶೌರ್ಯದ ಸಂಕೇತವಾಗಿ ನಾವಿಂದು ಸ್ವಾತಂತ್ರ್ಯೋತ್ಸವ ಆಚರಣೆ…

kukkila-generators
ಟ್ರೆಂಡಿಂಗ್ ನ್ಯೂಸ್
111
22

ಪಂಜದಲ್ಲಿ ಜನರೇಟರ್ ಕ್ಯಾಂಪ್ | ಆ. 22, 23ರಂದು ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್

by Shakthi News
August 20, 2025

ಕುಕ್ಕಿಲ ಎಂಟರ್ ಪ್ರೈಸಸ್ ನೇತೃತ್ವದಲ್ಲಿ ಪೋರ್ಟೇಬಲ್ ಜನರೇಟರ್ ಗಳ ಉಚಿತ ಸರ್ವಿಸ್ ಕ್ಯಾಂಪ್ ಪಂಜ…

elephant
ಟ್ರೆಂಡಿಂಗ್ ನ್ಯೂಸ್
1,230
257

ಕೆಯ್ಯೂರಿನಲ್ಲಿ ನಟ್ಟನಡು ಮಧ್ಯಾಹ್ನ ಕಾಣಸಿಕ್ಕ ಕಾಡಾನೆ! ಆನೆ ಹಿಡಿಯುವ ತಂಡ ಬರಲೇ ಇಲ್ಲ; ಕಾಡಾನೆ ಸ್ಥಳ ಬಿಟ್ಟು ಕದಲಲೇ ಇಲ್ಲ!!

by Shakthi News
July 31, 2025

ಪುತ್ತೂರು: ಕೆಯ್ಯೂರು, ದೇರ್ಲದಲ್ಲಿ ಗುರುವಾರ ಮಧ್ಯಾಹ್ನವೇ ಕಾಡಾನೆಗಳು ನಾಡಿಗೆ ಬಂದಿವೆ. ಆನೆ…

warning
ವಿದೇಶ
258
60

ಇನ್ನು ನಿಮ್ಮನ್ನು ಜೀವಂತ ಉಳಿಸಲ್ಲ: ಆಸ್ಪತ್ರೆ ಮೇಲಿನ ದಾಳಿಗೆ ನೇರ ಎಚ್ಚರಿಕೆ!

by Shakthi News
June 19, 2025

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ರಕ್ಷಣಾ…

war
ವಿದೇಶ
133
26

ಕದನ ವಿರಾಮ ಘೋಷಿಸಿದ ಟ್ರಂಪ್! ಮದ್ಯಪ್ರಾಚ್ಯ ಯುದ್ಧಕ್ಕೆ ಬೀಳುತ್ತಾ ಬ್ರೇಕ್?

by Shakthi News
June 24, 2025

ಇರಾನ್ – ಇಸ್ರೇಲ್ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದೆ.…

nalin-kumar-kateel
ಟ್ರೆಂಡಿಂಗ್ ನ್ಯೂಸ್
1,125
237

ನಿನ್ನೆವರೆಗೆ ಕಾಂಗ್ರೆಸ್, ಇಂದಿನಿಂದ ಬಿಜೆಪಿ ಆಡಳಿತ! ಮಾಜಿ ಸಂಸದ ನಳಿನ್ ಮಾತಿಗೆ ನಗೆಗಡಲಲ್ಲಿ ತೇಲಾಡಿದ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪದಪ್ರದಾನ ಸಭೆ

by Shakthi News
July 19, 2025

ಪುತ್ತೂರು: ನಿನ್ನೆವರೆಗೆ ಕಾಂಗ್ರೆಸ್ ಆಡಳಿತವಿತ್ತು. ಇಂದಿನಿಂದ ಬಿಜೆಪಿ ಆಡಳಿತ ಶುರುವಾಗಿದೆ.…

ಟ್ರೆಂಡಿಂಗ್ ನ್ಯೂಸ್
100
20

ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಪುತ್ತೂರಿಗೆ ಭೇಟಿ

by Shakthi News
August 19, 2025

ಪುತ್ತೂರು: ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜಿ. ಸೂರ್ಯನಾರಾಯಣ ವರ್ಮಾ ಅವರು ಬುಧವಾರ…

PreviousNext1 of 10
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0FacebookLikesJoin us on FacebookLike our page
  • 0XFollowersJoin us on XFollow Us
  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾದೇವಿ ನಿಧನ!!

by Shakthi News
July 14, 2025
131
26

ಹೊಸ ಸುದ್ದಿಗಳು

ಆ. 30ರಂದು ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಸಾರ್ವಜನಿಕರಿಗೂ…

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ…

ಮಂಗಳೂರು:ಮಾದಕ ವಸ್ತು ಪೂರೈಕೆ ಆರೋಪಿ ಅರ್ಶದ್ ಬಂಧನ!!

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ…

accident

ಪೆರ್ನಾಜೆ ಬಳಿ ಬಸ್ – ಕಾರು ಅಪಘಾತ! ರಸ್ತೆಯಲ್ಲಿ ಚೆಲ್ಲಿದ್ದ ತೈಲಕ್ಕೆ ಜಾರಿದ…

ಪುತ್ತೂರು: ಸುಳ್ಯದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕಾರು ಹಾಗೂ ಮೈಸೂರು ಕಡೆ ತೆರಳುತ್ತಿದ್ದ ಬಸ್ ನಡುವೆ…

ಪ್ರೊ. ಕೆ.ಇ. ರಾಧಾಕೃಷ್ಣ ಕನ್ನಡಕ್ಕೆ ಅನುವಾದಿಸಿರುವ ಮೂರು ಕೃತಿಗಳು ಅನಾವರಣಕ್ಕೆ…

ಬೆಂಗಳೂರು: ನಗರದ ಸನ್‌ಸ್ಟಾರ್ ಪಬ್ಲಿಷರ್ಸ್‌ನವರು ಆರ್.ಆರ್‌.ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಟ್ರಸ್ಟ್‌…

accident

ಸವಾರರೇ ಗಮನಿಸಿ: ಪುತ್ತೂರು – ಸಂಪ್ಯ ನಡುವೆ ರಸ್ತೆಯಲ್ಲಿ ಚೆಲ್ಲಿದೆ ಆಯಿಲ್!!…

ಪುತ್ತೂರು: ಹೆದ್ದಾರಿಯಲ್ಲಿ ವಾಹನವೊಂದರ ಆಯಿಲ್ ಚೆಲ್ಲಿದ ಪರಿಣಾಮ, ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In