Gl harusha
ವಿದೇಶ

ಜಪಾನ್ ನಿಂದ ಭಾರತಕ್ಕೆ 2 ಬುಲೆಟ್ ರೈಲು ಉಡುಗೊರೆ!!

ಜಪಾನಿನ ಬುಲೆಟ್ ರೈಲುಗಳಾದ ಶಿನ್‌ಕಾನ್‌ಸೆನ್ ಇ5 ಹಾಗೂ ಇ3 ಸರಣಿಯ ರೈಲುಗಳು ಭಾರತಕ್ಕೆ ಬರಲಿವೆ. ಮುಂಬಯಿ-ಅಹ್ಮದಾಬಾದ್ ಕಾರಿಡಾ-ರ್‌ನ ಪರೀಕ್ಷೆಯ ಸಹಾಯಕ್ಕಾಗಿ ಜಪಾನ್ ಈ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಭಾರತಕ್ಕೆ 2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡಲು ಜಪಾ ನ್ ನಿರ್ಧರಿಸಿದೆ ಎಂದು “ದ ಜಪಾನ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ. ಅದರಂತೆ ಜಪಾನಿನ ಬುಲೆಟ್ ರೈಲುಗಳಾದ ಶಿನ್‌ಕಾನ್‌ಸೆನ್ ಇ5 ಹಾಗೂ ಇ3 ಸರಣಿಯ ರೈಲುಗಳು ಭಾರತಕ್ಕೆ ಬರಲಿವೆ. ಮುಂಬಯಿ-ಅಹ್ಮದಾಬಾದ್ ಕಾರಿಡಾ-ರ್‌ನ ಪರೀಕ್ಷೆಯ ಸಹಾಯಕ್ಕಾಗಿ ಜಪಾನ್ ಈ ಕ್ರಮ ಕೈಗೊಂಡಿದೆ.

srk ladders
Pashupathi
Muliya

ಈ ಕಾರಿಡಾರ್‌ನಲ್ಲಿ ಅಗತ್ಯ ತಪಾಸಣಾ ಉಪಕರಣಗಳನ್ನು ಅಳವಡಿಸಿದ ಕೂಡಲೇ, ಈ ರೈಲುಗಳು 2026ರ ಆರಂಭದಲ್ಲಿ ಭಾರತಕ್ಕೆ ಬರುವ ನಿರೀಕ್ಷೆ ಯಿದೆ. ಇಲ್ಲಿನ ತಾಪಮಾನ, ಧೂಳಿನಂತಹ ನೈಸರ್ಗಿಕ ಸವಾಲುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ರೈಲುಗಳು ಕಲೆ ಹಾಕಲಿವೆ. 2030ರ ವೇಳೆಗೆ ಇ10 ಸರಣಿಯ ರೈಲುಗಳು ಭಾರತಕ್ಕೆ ಬರಲು ಸಜ್ಜಾಗಿದೆ. ಇ3 ಹಾಗೂ ಇ5 ರೈಲುಗಳ ಕಾರ್ಯಾಚರಣೆ ಪರೀಕ್ಷಿಸಿ, ಇ10 ರೈಲುಗಳನ್ನು ವಿನ್ಯಾಸಗೊಳಿಸಲು ಭಾರತ ಹಾಗೂ ಜಪಾನ್ ನಿರ್ಧರಿಸಿವೆ.

ಪ್ರಸ್ತುತ ಮುಂಬಯಿ- ಅಹ್ಮದಾ ಬಾದ್ ಕಾರಿಡಾರ್‌ನ ನಿರ್ಮಾಣ ಕಾರ್ಯ ಸಕ್ರಿಯವಾಗಿದ್ದು, ಗುಜರಾತ್‌ನಲ್ಲಿ ಹಲವು ನಿಲ್ದಾಣಗಳ, ಮೂಲಸೌಕರ್ಯಗಳ ನಿರ್ಮಾಣ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿ: 100ಕ್ಕೂ ಅಧಿಕ ಮಂದಿ ಸಾವು?? ಪ್ರಧಾನಿ ರಾಜೀನಾಮೆ, ಭಾರತಕ್ಕೆ ಓಡಿಬಂದ ಶೇಖ್‌ ಹಸೀನಾ!

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಭಾರತಕ್ಕೆ…