ಉದ್ಯೋಗ

ಭಾರತೀಯ ಸೇನೆ: ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ಹಾನ

ಮೆಟೀರಿಯಲ್ ಅಸಿಸ್ಟಂಟ್, ಜೂನಿಯರ್ ಆಫೀಸ್ ಅಸಿಸ್ಟಂಟ್, ಟ್ರೇಡ್ಸ್‌ಮ್ಯಾನ್ ಮೇಟ್  723 ಹುದ್ದೆಗಳು ಖಾಲಿಯಿದ್ದು, ಪಿಯುಸಿ, ಎಸ್ಎಸ್ ಎಲ್ ಸಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22 ರೊಳಗೆ ಅಧಿಕೃತ ವೆಬೈಟ್ ಲ್ಲಿ ಅರ್ಜಿ ಸಲ್ಲಿಸಬಹುದು.

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ಸೇನೆಗೆ ಸಾಮಗ್ರಿ ಮತ್ತು ವ್ಯವಸ್ಥಾಪನಾ ಬೆಂಬಲ ಒದಗಿಸುವ ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ ನೇರ ನೇಮಕಾತಿ ಆಧಾರದ ಮೇಲೆ ಗ್ರೂಪ್ ‘ಸಿ’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿಸಲಾಗಿದೆ.

ಹುದ್ದೆಗಳ ವಿವರ:

SRK Ladders

ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ  ಒಟ್ಟು 723 ಹುದ್ದೆಗಳು:

ಮೆಟೀರಿಯಲ್ ಅಸಿಸ್ಟಂಟ್, ಜೂನಿಯರ್ ಆಫೀಸ್ ಅಸಿಸ್ಟಂಟ್, ಟ್ರೇಡ್ಸ್‌ಮ್ಯಾನ್ ಮೇಟ್  723 ಹುದ್ದೆಗಳು ಖಾಲಿಯಿದ್ದು, ಪಿಯುಸಿ, ಎಸ್ಎಸ್ ಎಲ್ ಸಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22 ರೊಳಗೆ ಅಧಿಕೃತ ವೆಬೈಟ್ ಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆಗಳು

* ಮೆಟೀರಿಯಲ್ ಅಸಿಸ್ಟಂಟ್ ವಿಭಾಗದಲ್ಲಿ ಖಾಲಿಯಿರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರಬೇಕು.

*ಜೂನಿಯರ್ ಆಫೀಸ್ ಅಸಿಸ್ಟಂಟ್ ವಿಭಾಗದಲ್ಲಿ  ಹುದ್ದೆಗಳು ಹಾಗೂ ಟೆಲಿ ಆಪರೇಟರ್ ಗ್ರೇಡ್ || ವಿಭಾಗದಲ್ಲಿ  ಹುದ್ದೆಗಳು ಖಾಲಿಯಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ವಿದ್ಯಾಭ್ಯಾಸ ಹೊಂದಿರಬೇಕು.

ಸಿವಿಲ್ ಮೋಟ‌ರ್ ಡ್ರೈವರ್ ಡಿಪಾರ್ಟೆಂಟ್ ನಲ್ಲಿ ಹುದ್ದೆಗಳು, ಫೈರ್‌ಮ್ಯಾನ್ ವಿಭಾಗದಲ್ಲಿ   ಕಾರ್ಪೆಂಟರ್ ಹಾಗೂ ಜಾಯಿನರ್‌ ವಿಭಾಗದಲ್ಲಿ ಹುದ್ದೆಗಳು, ಪೈಂಟರ್ ಹಾಗೂ ಡೆಕೊರೇಟರ್ ವಿಭಾಗದಲ್ಲಿ ಹುದ್ದೆಗಳು, ಎಂಟಿಎಸ್ ವಿಭಾಗದಲ್ಲಿ ಹುದ್ದೆಗಳು ಹಾಗೂ ಟ್ರೇಡ್ಸ್‌ಮ್ಯಾನ್ ಮೇಟ್ ವಿಭಾಗದಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪಾಸ್ ಆಗಿರುವುದು ಕಡ್ಡಾಯವಾಗಿದೆ.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 22, 2024

ಅರ್ಜಿ ಶುಲ್ಕ: ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

* ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ₹18,000- 92,300 ರೂ. ಮಾಸಿಕ ವೇತನ 

ಹೆಚ್ಚಿನ ಮಾಹಿತಿಗಾಗಿ:

https://www.aocrecruitment.gov.in/


ಈ ಸುದ್ದಿಯನ್ನು ಶೇರ್ ಮಾಡಿ

Related Posts