ಉದ್ಯೋಗ

ಆರ್.ಆರ್. ನೆಕ್ಸಸ್ ಕಚೇರಿ ಶುಭಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜಾಗ ಖರೀದಿ, ಮಾರಾಟ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರದ ಎಲ್ಲಾ ವ್ಯವಹಾರಗಳನ್ನು ಒಳಗೊಂಡಿರುವ ಆರ್.ಆರ್. ನೆಕ್ಸಸ್ ಸಂಸ್ಥೆಯ ನೂತನ ಕಚೇರಿ ಫೆ.20ರಂದು ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಎಸ್.ಬಿ.ಬಿ. ಸೆಂಟರಿನ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿದೆ.

ಬೆಳಗ್ಗೆ ಧಾರ್ಮಿಕ ವಿಧಿ ವಿಧಾನದಂತೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಗಣಪತಿ ಹೋಮ ಮಾಡಿದರು.ಬಳಿಕ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ಡಾ|ವಿಜಯ ಕುಮಾರ್ ಮೊಳೆಯಾ‌ರ್ ಅವರು ಸಂಸ್ಥೆಯನ್ನು ಉದ್ಘಾಟಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಕಟ್ಟಡದ ಮಾಲಕ ಪಿ.ವಾಸುದೇವ ಭಟ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆಗೌರಿ ಬನ್ನೂರು, ನಗರಸಭೆ ಮಾಜಿ ಸದಸ್ಯರಾದ ವನಿತಾ, ಪ್ರೇಮ್ ಕುಮಾರ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಕುಮಾರ್ ರೆಡ್ಡಿ, ಇಂಜಿನಿಯರ್ ಮನೋಜ್ ಕುಮಾ‌ರ್, ಪುರುಷೋತ್ತಮ, ಸಿಬ್ಬಂದಿಗಳೂ, ಅಕೌಂಟೆಂಟ್ ಜೀವನ್ ಕುಮಾರ್, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕ ಗಣೇಶ್ ಕುಲಾಲ್, ವ್ಯವಸ್ಥಾಪಕ ಸದಾಶಿವ ಕುಲಾಲ್, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಭವಾನಿಶಂಕರ ರಾವ್, ಕೆ.ಎಂ.ಎಫ್ ಮಂಗಳೂರು ಇದರ ಅಧಿಕಾರಿ ಗೋಪಾಲಕೃಷ್ಣರಾವ್, ಮಂಗಳೂರು ಚಾರ್ಟೆಡ್್ರ ಅಕೌಂಟೆಂಟ್ ದಿವಾಕರ ರಾವ್, ಜಿಲ್ಲಾ ದಿಶಾ ಸಮಿತಿ ಮಾಜಿ ಸದಸ್ಯ ರಾಮದಾಸ್ ಹಾರಾಡಿ, ನಿವೃತ್ತ ಮುಖ್ಯಗುರು ಪ್ರೇಮಕುಮಾರಿ, ನೆಹರುನಗರ ಸಾವಿತ್ರಿ ಕಾಂಪ್ಲೆಕ್ಸ್‌ನ ಮಾಲಕಿ ಭಾರತಿ, ಶಕ್ತಿ ನ್ಯೂಸ್‌ನ ಗಣೇಶ್ ಕಲ್ಲರ್ಪೆ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಬಾತೀಷ ಅಳಕೆಮಜಲು, ಕೊಕ್ಕಡ ಸರಕಾರಿ ಕಾಲೇಜಿನ ಉಪನ್ಯಾಸಕಿ ರಕ್ಷಾ ರೈ, ಸುಕನ್ಯಾ ಕುಡ್ತಾಜೆ, ಪಶುಪತಿ ಇಲೆಕ್ಟಿಕಲ್‌ನ ಮಾಲಕ ಪಶುಪತಿ ಶರ್ಮ, ವಕೀಲೆ ಅನ್ನಪೂರ್ಣ ಶರ್ಮ, ತೇಜಸ್ ಕುಮಾರ್, ಸೌಂದರ್ಯ ಸೊಸೈಟಿಯ ವ್ಯವಸ್ಥಾಪಕಿ ಶ್ಯಾಮಲ ಮತ್ತು ಸಿಬ್ಬಂದಿ ವರ್ಗ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾತೀಷ ಆತೂರು, ಇಂಜಿನಿಯರ್ ಕಂಟ್ರಾಕ್ಟರ್ ಸುಜೀತ್ ರೈ, ಈಶಾನ್ಯ ಕನ್‌ಸ್ಪಕ್ಷನ್ ಮಾಲಕ ಶಂಕರ ಭಟ್ ದಂಪತಿ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಅಶೋಕ್ ಬಲ್ನಾಡು, ರೋಹಿತಾಕ್ಷ ರೈ, ಅಝರ್ ಕನ್‌ಸ್ಟ್ರಕ್ಷನ್‌ ರತ್ನಾಕರ, ವಾಸ್ತು ಇಂಜಿನಿಯರ್ ರವೀಶ, ಜಯಲಕ್ಷ್ಮೀ, ಹೆಗ್ಡೆ ಎಂಟರ್‌ಪ್ರೈಸಸ್‌ನ ಉದ್ಯಮಿ ಗಿರಿಧರ ಹೆಗ್ಡೆ,ತಾಜ್‌ಮಹಲ್ ಹೊಟೇಲ್‌ನ ಮಾಲಕ ತಾರಾನಾಥ ಹೆಗ್ಡೆ, ಲಕ್ಷ್ಮೀ ಇಂಡಸ್ಟ್ರೀಸ್‌ನ ಮಾಲಕ ಭರತ್ ಪೈ, ವಾಣಿ ಪ್ರಿಂಟರ್ಸ್‌ ನ ನೀಲಂತ್ ಕುಮಾರ್, ವಿಶ್ವೇಶ್ವರ ಸ್ಟೀಲ್‌ನ ಮಾಲಕ ಸುಧೀರ್ ಶೆಟ್ಟಿ, ಇಂಜಿನಿಯರ್ ರೋಹಿಣಾಕ್ಷಿ, ರಮೇಶ್ ಗೌಡ, ಶ್ರೀಕೃಷ್ಣ ನ್ಯಾಕ್, ಉದ್ಯಮಿ ರಂಜಿತ್, ಅರ್ಜುನ್ ವೈ ಟಿ, ಕಾಸರಗೋಡು ಕುದ್ರೆಪಾಡಿ ಶ್ರೀ ಕೊರಗಜ್ಜ ದೈವಸ್ಥಾನದ ಧರ್ಮದರ್ಶಿ ಸತೀಶ್ ಕುಟುಂಬಸ್ಥರು ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಕ ರಾಕೇಶ್ ರಾವ್ ಹಾಗು ಮಾಜಿ ಪುರಸಭೆಯ ಅಧ್ಯಕ್ಷರಾಗಿರುವ ಗಣೇಶ್ ರಾವ್ ಮತ್ತು ಲತಾ ಗಣೇಶ್ ರಾವ್ ದಂಪತಿ ಅತಿಥಿಗಳನ್ನು ಬರಮಾಡಿಕೊಂಡರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts