ಪುತ್ತೂರು: 2026ರ ಏಪ್ರಿಲ್ 1ರ ಮೊದಲು ನಿವೃತ್ತರಾದ ಸರ್ಕಾರಿ ನೌಕರರಿಗೆ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಷ್ಕರಣೆ ಅಸಾಧ್ಯವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಬಿಲ್’ನಲ್ಲಿ ತಿಳಿಸಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು ಘಟಕದಿಂದ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
2025ರ ಮಾರ್ಚ್ 25ರಂದು ವಿತ್ತ ಸಚಿವರು ಆರ್ಥಿಕ ಬಿಲ್ಲನ್ನು ಮಂಡಿಸಿದ್ದರು. ಆ ಸಂದರ್ಭ ಸರ್ಕಾರಿ ನೌಕರರ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಷ್ಕರಣೆ ಅಸಾಧ್ಯ ಎಂದು ತಿಳಿಸಿದ್ದರು. ಇದರಿಂದ ಸಮಸ್ಯೆ ಎದುರಾಗಿದ್ದು, ಅಖಿಲ ಭಾರತ ಫೆಡರೇಷನ್ ಅಧ್ಯಕ್ಷ ಪಿ.ಕೆ. ಶರ್ಮಾ ಅವರು ನೀಡಿದ ಕರೆಯಂತೆ ಪುತ್ತೂರು ತಹಸೀಲ್ದಾರ್ ಅವರ ಮೂಲಕ ಮನವಿ ನೀಡಲಾಯಿತು.
ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.