Gl jewellers
ಶಿಕ್ಷಣ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ  ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ "ಕ್ಯಾಂಪಸ್ ಟು ಕಾರ್ಪೊರೇಟ್" ಎಂಬ ಶಿರೋನಾಮೆಯಲ್ಲಿ ಇಂಡಕ್ಷನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸರಣಿ ಕಾರ್ಯಕ್ರಮದ ಪ್ರಥಮ ದಿನದಂದು "ಸ್ಕಿಲ್ ಮ್ಯಾಪಿಂಗ್ ಮತ್ತು ಗೋಲ್ ಸೆಟ್ಟಿಂಗ್' ಎಂಬ ವಿಷಯದ ಕುರಿತು ತಾಂತ್ರಿಕ ಉಪನ್ಯಾಸವನ್ನು ಆಯೋಜಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷಕ್ಕೆ ದಾಖಲಾದ ಎಂಸಿಎ, ಎಂಎಸ್‌ಡಬ್ಲ್ಯೂ ಹಾಗೂ ಎಂಕಾಂ ತರಗತಿಗಳ ವಿದ್ಯಾರ್ಥಿಗಳಿಗೆ “ಕ್ಯಾಂಪಸ್ ಟು ಕಾರ್ಪೊರೇಟ್” ಎಂಬ ಶಿರೋನಾಮೆಯಲ್ಲಿ ಇಂಡಕ್ಷನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸರಣಿ ಕಾರ್ಯಕ್ರಮದ ಪ್ರಥಮ ದಿನದಂದು “ಸ್ಕಿಲ್ ಮ್ಯಾಪಿಂಗ್ ಮತ್ತು ಗೋಲ್ ಸೆಟ್ಟಿಂಗ್’ ಎಂಬ ವಿಷಯದ ಕುರಿತು ತಾಂತ್ರಿಕ ಉಪನ್ಯಾಸವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು “ವಿದ್ಯಾರ್ಥಿಗಳು ನಿರಂತರ ಕಲಿಯುವ ಹಾಗೂ ಹೊಸ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಕಲಿಯುವ ಸಂದರ್ಭದಲ್ಲಿ ಕೇವಲ ವೇತನದ ಪ್ಯಾಕೇಜ್‌ನ ಕುರಿತು ಚಿಂತಿಸದೆ ವೇತನವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆ ಹಾಗೂ ಕೌಶಲ್ಯಗಳ ಅಭಿವೃದ್ಧಿಗೆ ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ತಮ್ಮ ಗುರಿಯಬಗ್ಗೆ ನಿಖರವಾಗಿ ಅರಿತಿರಬೇಕು. ಉದ್ಯಮ ಕ್ಷೇತ್ರದಲ್ಲಿ ತಾಂತ್ರಿಕ ಪರಿಣತಿ ಮತ್ತು ಸಮಸ್ಯೆ ಪರಿಹರಣೆ, ಸಂವಹನ ಮತ್ತು ಟೀಮ್ನರ್ಕ್‌ನಂತಹ ಕೌಶಲ್ಯಗಳು ಅಗತ್ಯ ಸ್ಕಿಲ್ ಮ್ಯಾಪಿಂಗ್ ನೀವು ಇಂದು ಯಾವ ಹಂತದಲ್ಲಿ ಇರುವಿರಿ ಎಂಬುದನ್ನು ಗುರುತಿಸಲು ಸಹಕಾರಿ” ಎಂದು ಹೇಳಿದರು ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಿದ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Pashupathi
Papemajalu garady
Karnapady garady

ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಜೇಸಿ ಇಂಡಿಯಾದ ರಾಷ್ಟ್ರೀಯ ತರಬೇತುದಾರರಾಗಿರುವ ಕೃಷ್ಣಮೋಹನ ಪಿ ಎಸ್ ರವರು ವಿದ್ಯಾರ್ಥಿಗಳಿಗೆ ಗುರಿ ನಿರ್ಧಾರದ ಮಹತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು, ಕೌಶಲ್ಯಗಳು ಮುಂತಾದ ವಿಷಯಗಳ ಬಗ್ಗೆ ಹಲವಾರು ನಿದರ್ಶನಗಳ ಸಹಾಯದೊಂದಿಗೆ ಮಾಹಿತಿ ನೀಡಿದರು, ವಿದ್ಯಾರ್ಥಿಗಳು ಪ್ರತಿದಿನ ಮುಂಜಾನೆ ಆಯಾಯ ದಿನದಲ್ಲಿ ಸಾಧಿಸಬೇಕಾದ ಕಾರ್ಯಗಳ ಬಗ್ಗೆ ಚಿಂತಿಸಿದರೆ ದಿನದ ಕೊನೆಯಲ್ಲಿ ತಾವು ತಲುಪಬೇಕಾದ ಗುರಿಯನ್ನು ಸಾಧಿಸಿದ್ದೇವೋ ಎಂದು ಆತ್ಮಾವಲೋಕನ ಮಾಡಬೇಕು ಹಾಗೂ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ದಾಖಲಿಸುವುದರ ಮಹತ್ವದ ಕುರಿತು ತಿಳಿಸಿದರು.

ಅಪೂರ್ವ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಂಯೋಜಕರೂ ಪರೀಕ್ಷಾಂಗ ಕುಲಸಚಿವರೂ ಆಗಿರುವ ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಅವರು ಕಾಲೇಜಿನ ಸ್ನಾತಕೋತ್ತರ ವಿಭಾಗಗಳಿಂದ ಆಯೋಜಿಸಲ್ಪಡುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕರಾದ ಹರ್ಷಿತ್ ಆರ್ ವಂದಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಿಸಿಲ ತಾಪಕ್ಕೆ ನೆರಳಾದ ಗುಜುರಿ ಹಣ!! ಹೀಗೂ ಬಸ್ ನಿಲ್ದಾಣ ನಿರ್ಮಿಸಬಹುದೆಂದು ತೋರಿಸಿಕೊಟ್ಟ ಎನ್.ಎಸ್.ಎಸ್. ಕಾರ್ಯಕರ್ತರು!

ಗುಜಿರಿ ಸಂಗ್ರಹಿಸಿ ಮಾರಿ ಸಿಕ್ಕಿದ ಹಣದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ವಿದ್ಯಾರ್ಥಿಗಳು