Gl
ಶಿಕ್ಷಣ

ವಿದ್ಯಾರಶ್ಮಿಯಲ್ಲಿ ಸಮ್ಮಾನ ರಶ್ಮಿ ವಾರ್ಷಿಕೋತ್ಸವ: ಬಹುಮಾನ ವಿತರಣಾ ಸಮಾರಂಭ

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭದ ಸಮ್ಮಾನ ರಶ್ಮಿ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಸವಣೂರು : ಸವಣೂರಿನ(Savanoor) ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭದ ಸಮ್ಮಾನ ರಶ್ಮಿ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. 

rachana_rai
Pashupathi
akshaya college
Balakrishna-gowda

ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಮುಖ್ಯ ಅತಿಥಿ ನೆಲೆಯಿಂದ ಮಾತನಾಡಿ, ಸಮಯವನ್ನು ಗೌರವಿಸುವವರನ್ನು ಮತ್ತು ಅಧ್ಯಯನ ಮಾಡುವವರನ್ನು ಲೋಕವೇ ಗೌರವಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಸವಣೂರು ಸೀತಾರಾಮ ರೈಯವರೇ ಸಾಕ್ಷಿ ಎಂದರು. ಇದರ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಸೋಲುವುದನ್ನು ಕಲಿತುಕೊಂಡರೆ ನಾವು ನಾಯಕರಾಗುತ್ತೇವೆ ಎಂದು ಕಿವಿಮಾತು ಹೇಳಿದರು.

pashupathi

ಸವಣೂರು ಸಹಕಾರ ರತ್ನ ಸಂಚಾಲಕ ಸೀತಾರಾಮ ರೈ ಮಾತನಾಡಿ, ಇಂದು ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿರುವುದು ತೀರಾ ಸಾಮಾನ್ಯವಾಗಿದೆ. ಇದಕ್ಕೆ ಶಿಕ್ಷಕರ ಜೊತೆ ಹೆತ್ತವರೂ ಸಹ ಕೈ ಜೋಡಿಸಿ ಮಕ್ಕಳನ್ನು ಹುರಿದುಂಬಿಸಬೇಕಾಗಿದೆ. ನಮ್ಮಲ್ಲಿ  ಕ್ರೀಡೆಗೆ ಬೇಕಿರುವ ಸಕಲ ವ್ಯವಸ್ಥೆಗಳನ್ನು ಶಿಸ್ತುಬದ್ಧವಾಗಿ ಮಾಡಿದ್ದು ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಆಡಳಿತಾಧಿಕಾರಿ, ನ್ಯಾಯವಾದಿ ಅಶ್ವಿನ್ ಎಲ್. ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಅತ್ಯಾಧುನಿಕ ಸ್ಮಾರ್ಟ್ ಬೋರ್ಡನ್ನು ಮುಖ್ಯ ಅತಿಥಿಯವರು ಉದ್ಘಾಟಿಸಿದರು. 

ರೂರಲ್ ಟ್ರಸ್ಟ್‍ ನಿರ್ದೇಶಕ ನಡುಮನೆ ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಮತ್ತು ವಿದ್ಯಾ ರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಬೋಧಕ ವರ್ಗದ ಆಶಾಲತಾ, ಸುನೀತಾ, ಅನಿತಾ, ಶೀಲಾವತಿ, ಸೌಮ್ಯಾ, ಮತ್ತು ವೇದಾವತಿ ಬಹುಮಾನ ವಿತರಣೆ ಕಾರ್ಯಗಳಲ್ಲಿ ಸಹಕರಿಸಿದರು. 

ಕಾರ್ಯಕ್ರಮದಲ್ಲಿ 10ನೆ ತರಗತಿಯ ಶ್ರುತ ಜೈನ್ ಮತ್ತು ಬಳಗ ಪ್ರಾರ್ಥನೆ, 9ನೆ ತರಗತಿಯ ಫಾತಿಮಾತ್ ಹನ್ನಾ ಸಂವಿಧಾನದ ಪೀಠಿಕೆ ವಾಚಿಸಿದರು. ದ್ವಿತೀಯ ವಿಜ್ಞಾನ ವಿಭಾಗದ  ಸುನೀಕ್ಷಾ  ಅತಿಥಿಗಳ ಪರಿಚಯ ಮಾಡಿದರು. 

ವಿದ್ಯಾರಶ್ಮಿ ವಿದ್ಯಾಲಯದ(Vidyarashmi Vidyalaya) ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಸ್ವಾಗತಿಸಿ, 10ನೆ ತರಗತಿಯ ಎಂ . ವೈಷ್ಣವಿ ವಂದಿಸಿ,  10ನೆ ತರಗತಿಯ ರಶ್ಮಿತಾ ನಿರೂಪಣೆಗೈದರು.  

ಕಾರ್ಯಕ್ರಮದ ಕೊನೆಯಲ್ಲಿ ಸಂಗೀತ ಗುರು ಪಾರ್ವತಿ ಪದ್ಯಾಣ ಅವರ ಶಿಷ್ಯ ವರ್ಗದಿಂದ ಸುಗಮ ಸಂಗೀತ ಮತ್ತುಉಪನ್ಯಾಸಕಿ ರಂಜಿತಾ ಅವರ ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮಗಳು ನಡೆಯಿತು. ಬಳಿಕ 10ನೆ ತರಗತಿಯ ಪ್ರಾಪ್ತಿ ಪಿ. ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಅಂಬಿಕಾದ ಅಡುಗೆಮನೆಗೆ ಆಧುನಿಕ ಸ್ಪರ್ಶ! ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ

ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ…

ಕೌಡಿಚ್ಚಾರಿನಲ್ಲಿ ಧರ್ಮ ಶಿಕ್ಷಣ ಉದ್ಘಾಟನೆ | ಮನುಷ್ಯನನ್ನು ಮನುಷ್ಯತ್ವಕ್ಕೇರಿಸುವ ಶಿಕ್ಷಣ ಅಗತ್ಯ: ಸುಬ್ರಮಣ್ಯ ನಟ್ಟೋಜ

ಪುತ್ತೂರು: ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿದ ಬ್ರಿಟಿಷ್ ಅಧಿಕಾರಿಗಳನ್ನು ವೈಭವೀಕರಿಸುವ…