ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಅಕ್ಷಯ ಪಿಯು ಕಾಲೇಜು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಸಂಸ್ಥೆಯ ವತಿಯಿಂದ “ಫ್ರೀ ಬ್ರಿಡ್ಜ್ ಕೋರ್ಸ್” ಮತ್ತು “ಫ್ರೀ ಸ್ಪೋಕನ್ ಇಂಗ್ಲಿಷ್ ಕ್ಲಾಸ್” ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಈ ಕೋರ್ಸ್‌ಗಳು ಏಪ್ರಿಲ್ 15, 2026ರಿಂದ ಅಧಿಕೃತವಾಗಿ ಆರಂಭವಾಗಲಿವೆ.
ಈ ಬ್ರಿಡ್ಜ್ ಕೋರ್ಸ್‌ಗಳು ವಿವಿಧ ಹಂತದ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ. 9ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 10ನೇ ತರಗತಿ ಬ್ರಿಡ್ಜ್ ಕೋರ್ಸ್, 10ನೇ ತರಗತಿ ಉತ್ತೀರ್ಣರಾದವರಿಗೆ ಪ್ರಥಮ ಪಿಯುಸಿ (1st PUC) ಬ್ರಿಡ್ಜ್ ಕೋರ್ಸ್ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ ದ್ವಿತೀಯ ಪಿಯುಸಿ (2nd PUC) ಅನ್ನು ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಪಠ್ಯಕ್ರಮವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗಲಿದೆ.
ಇದಕ್ಕೆ ಜೊತೆಗೆ, ಇಂದಿನ ಕಾಲದಲ್ಲಿ ಅತ್ಯಂತ ಮುಖ್ಯವಾಗಿರುವ ಇಂಗ್ಲಿಷ್ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಉಚಿತ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನೂ ಏರ್ಪಡಿಸಲಾಗಿದೆ. ಈ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಮಾತನಾಡುವ, ಕೇಳುವ ಹಾಗೂ ಪ್ರಸ್ತುತಪಡಿಸುವ ಕೌಶಲ್ಯಗಳನ್ನು ತರಬೇತಿ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಭವಿಷ್ಯದ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಅವಕಾಶಗಳಿಗೆ ಸಹಕಾರಿಯಾಗಲಿದೆ.
ಅಕ್ಷಯ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ನಿರ್ವಹಿಸಲ್ಪಡುವ ಅಕ್ಷಯ ಪಿಯು ಕಾಲೇಜು, ಈಗಾಗಲೇ ಉತ್ತಮ ಶೈಕ್ಷಣಿಕ ಫಲಿತಾಂಶಗಳ ಮೂಲಕ ತನ್ನದೇ ಆದ ಗುರುತನ್ನು ಪಡೆದಿದೆ. 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶವೂ ಈಗಾಗಲೇ ಆರಂಭವಾಗಿದ್ದು, ವಿಜ್ಞಾನ (PCMB, PCMC) ಮತ್ತು ವಾಣಿಜ್ಯ (EBAS, EBAC) ವಿಭಾಗಗಳಲ್ಲಿ ತರಗತಿಗಳು ಲಭ್ಯವಿವೆ.
ಇದಲ್ಲದೆ, ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತಿಗಾಗಿ IIT-JEE, NEET, KCET ಹಾಗೂ CA ಫೌಂಡೇಶನ್ ತರಬೇತಿಗೂ ವಿಶೇಷ ಕೋಚಿಂಗ್ ವ್ಯವಸ್ಥೆಯನ್ನು ಕಾಲೇಜು ಒದಗಿಸಿದೆ. ಅನುಭವಸಂಪನ್ನ ಉಪನ್ಯಾಸಕರು ಹಾಗೂ ಸಮಗ್ರ ತರಬೇತಿ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲಾಗುತ್ತಿದೆ.
ವಿದ್ಯಾರ್ಥಿಗಳು ಈ ಉಚಿತ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ತಮ್ಮ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಾಸದಲ್ಲಿ ಮುಂದುವರಿಯಬೇಕು. ಪೋಷಕರೂ ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 7975719385 / 8088381678 / 9980987212























