ಶಿಕ್ಷಣ

ಅಂಬಿಕಾ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ | ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಸ್ಪರ್ಧೆಗೆ ಆಯ್ಕೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಅಖಿಲ ಭಾರತ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ.

chennai-shopping
maithri

ಚಿಕ್ಕಪುತ್ತೂರಿನ ನಿವಾಸಿಗಳಾದ ಸತ್ಯನಾರಾಯಣ ಮತ್ತು ಲತಾ ಕೆ ದಂಪತಿ ಪುತ್ರ, ಏಳನೆಯ ತರಗತಿಯ ಪ್ರತ್ಯುಷ್ ಎಲ್.ಎಸ್. ಗೌಡ ಇವರು 50 ಮೀ ಬಟರ್ ಫ್ಲೈನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಪರ್ಲಡ್ಕದ ನಿವಾಸಿಗಳಾದ ಲೋಕನಾಥ ಶೆಟ್ಟಿ ಮತ್ತು ದಿಶಾ ಮಣಿ ಬಿ ದಂಪತಿಯ ಪುತ್ರ ಹತ್ತನೇ ತರಗತಿಯ ಸಮೃದ್ಧ್ ಎಲ್. ಶೆಟ್ಟಿ 200 ಮೀ ಬ್ಯಾಕ್ ಸ್ಟ್ರೋಕ್, 200 ಮೀ ಫ್ರೀ ಸ್ಟೈಲ್ ಮತ್ತು 100 ಮೀ ಫ್ರೀ ಸ್ಟೈಲ್’ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಪುತ್ತೂರು ಹಾರಾಡಿಯ ನಿವಾಸಿಗಳಾದ  ಮಧುಸೂಧನ್ ಸಾಲೆ ಮತ್ತು ವಿನುತಾ ಎಂ ಸಾಲೆ ದಂಪತಿ ಪುತ್ರ, ಒಂಬತ್ತನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ ಇವರು 800 ಮೀ ಫ್ರೀ ಸ್ಟೈಲ್’ನಲ್ಲಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂರೂ ಮಂದಿ ವಿದ್ಯಾರ್ಥಿಗಳು ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪುತ್ತೂರು ಉರ್ಲಾಂಡಿ ನಿವಾಸಿಗಳಾದ ಮಹೇಶ್ ಶೆಟ್ಟಿ ಮತ್ತು ಸುಕನ್ಯ ಕೆ ಶೆಟ್ಟಿ ದಂಪತಿ ಪುತ್ರ, ಏಳನೇ ತರಗತಿಯ ದೀಪಾಂಶ್ ಶೆಟ್ಟಿ ಇವರು 100 ಮೀ ಬ್ಯಾಕ್ ಸ್ಟ್ರೋಕ್’ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts