ಶಿಕ್ಷಣ

ಹರ್ ವಾಯ್ಸ್, ಹರ್ ಪವರ್ – ಅಕ್ಷಯ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆ್ಯಂಟಿ ವುಮನ್ ಹೆರಾಸ್ಮೆಂಟ್ ಸೆಲ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಅ. 16ರಂದು ಹರ್ ವಾಯ್ಸ್, ಹರ್ ಪವರ್ ಕಾರ್ಯಕ್ರಮ ನಡೆಯಿತು.

Shani-pooja

ಮನೋವೈದ್ಯೆ ಹಾಗೂ ವಕೀಲೆ ಮೀನಾ ಕುಮಾರಿ ಕೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿಮೆನ್ ಹೆರಾಸ್ಮೆಂಟ್ ಮತ್ತು ಅದನ್ನು ತಡೆಗಟ್ಟಲು ಜಾರಿಗೊಳಿಸಿರುವ ವಿವಿಧ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಅಕ್ಷಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಗಂಗಾರತ್ನ ಅಧ್ಯಕ್ಷತೆ ವಹಿಸಿದ್ದರು.

ಐಕ್ಯೂಎಸಿ ಸಂಯೋಜಕಿ ರಶ್ಮಿ, AWHC ಸದಸ್ಯೆ ಅನುಷಾ, AWHC ಇದರ ಉಪ ಕಾರ್ಯದರ್ಶಿ ಮೋಕ್ಷಿತ್ ಉಪಸ್ಥಿತರಿದ್ದರು.

AWHC ಸದಸ್ಯೆ ಅನನ್ಯ ಭಟ್ ಮುಖ್ಯ ಅತಿಥಿಗಳ ಪರಿಚಯ ಸಭೆಯ ಮುಂದಿಟ್ಟರು. ಸಂಘದ ಸಂಯೋಜಕಿ ಕಾವ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ದೇವಿಕಾ ಮತ್ತು ಸ್ವರ್ಣ ಶ್ರೀ ಪ್ರಾರ್ಥಿಸಿದರು. AWHC ಅಧ್ಯಕ್ಷೆ ಶ್ರಾವ್ಯ ಸ್ವಾಗತಿಸಿ, AWHC ಕಾರ್ಯದರ್ಶಿ ಅಪೇಕ್ಷಾ ಕೆ.ಜೆ. ಶೆಟ್ಟಿ ವಂದಿಸಿದರು. ರಝೀನಾ ಬಾನು ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…