ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

Shani-pooja

ಕಾರ್ಯಕ್ರಮದ ಆರಂಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಎಲ್ಲಾ ಅತಿಥಿಗಳು ಭಾರತ ಮಾತೆಯ ಭಾವಚಿತ್ರಕ್ಕೆ ಗೌರವ ಪುಷ್ಪಾರ್ಚನೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ದೇಶ ಸೇವೆ ಹಾಗೂ ಯೋಧರ ಬಲಿದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಆಡಳಿತ ವ್ಯವಸ್ಥಾಪಕಿ ಕಲಾವತಿ ಜಯಂತ್, ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದು ದೇಶದ ಭದ್ರತೆಗಾಗಿ. ನಾವು ಅವರ ಬಲಿದಾನವನ್ನು ಎಂದೆಂದಿಗೂ ಸ್ಮರಿಸಬೇಕು ಎಂದರು.

ಅಕ್ಷಯ ಪಿಯು ಕಾಲೇಜು ಪ್ರಾಂಶುಪಾಲೆ ಗಂಗರತ್ನ, ಉಪ ಪ್ರಾಂಶುಪಾಲ ರಕ್ಷಣಾ  ಟಿ.ಆರ್, ಆಂತರಿಕ ಗುಣಮಟ್ಟದ ಸಂಯೋಜಕಿ ರಶ್ಮಿ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಮೇಘಶ್ರೀ ಉಪಸ್ಥಿತರಿದ್ದರು.

ಅಕ್ಷಯ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ.  ಕನ್ನಡ ವಿಭಾಗದ ಮುಖ್ಯಸ್ಥ ಹರಿಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು: ಸೈಂಟ್ ಪಿಲೋಮಿನಾ ಕಾಲೇಜಿನಲ್ಲಿ ‘ಮಾಸ್ಟರ್ ಮಿಕ್ಸ್ ಶೆಫ್ಟ್’ ಅಗ್ನಿಯಿಲ್ಲದೆ ಅಡುಗೆ ಸ್ಪರ್ಧೆ

ಪುತ್ತೂರು:ಇಲ್ಲಿನ ಸೈಂಟ್ ಪಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ…

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…