Gl harusha
ಶಿಕ್ಷಣ

ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇ.50 ಮೀಸಲು, ಶಿಕ್ಷಣ ಇಲಾಖೆ ಮಹತ್ವದ ಆದೇಶ!

ರಾಜ್ಯದ ಎಲ್ಲಾ ಮಾದರಿ ಖಾಸಗಿ ಶಾಲೆಗಳಲ್ಲೂ ಶೇ.50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.2025-26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಲವು ಅಂಶಗಳ ಸುತ್ತೋಲೆ ಹೊರಡಿಸಿದೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್ ಸೇರಿ ಸಹಶಿಕ್ಷಣ ಹೊಂದಿರುವ ರಾಜ್ಯದ ಎಲ್ಲಾ ಮಾದರಿ ಖಾಸಗಿ ಶಾಲೆಗಳಲ್ಲೂ ಶೇ.50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.2025-26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಲವು ಅಂಶಗಳ ಸುತ್ತೋಲೆ ಹೊರಡಿಸಿರುವ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ಸಹಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿಯನ್ವಯ ಒಟ್ಟು ಪ್ರವೇಶದಲ್ಲಿ ಶೇ.50ರಷ್ಟು ಸ್ಥಳಾವಕಾಶಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು. ಶೇ.50ರಷ್ಟು ಸೀಟುಗಳ ಪ್ರವೇಶಕ್ಕೆ ಹೆಣ್ಣು ಮಕ್ಕಳು ದೊರೆಯದೆ ಹೋದಲ್ಲಿ ಉಳಿಯುವ ಸೀಟುಗಳನ್ನು ಮೀಸಲಾತಿ ನಿಯಮದಂತೆ ಗಂಡು ಮಕ್ಕಳಿಗೆ ನೀಡಬೇಕು ಎಂದು ಸೂಚಿಸಿದ್ದಾರೆ.

srk ladders
Pashupathi
Muliya

ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ, ಅವರ ಪೋಷಕರನ್ನಾಗಲಿ ಪರೀಕ್ಷಿಸುವುದು ಅಥವಾ ಸಂದರ್ಶನ ನಡೆಸುವುದು ಕಾನೂನು ಬಾಹಿರ. ಪ್ರತಿ ಶಾಲೆಯೂ ನಿಗದಿತ ಶುಲ್ಕದ ಮೊತ್ತವನ್ನು ಸಾರ್ವಜನಿಕ ಮಾಹಿತಿಗೆ ಶಾಲೆಯ ನೋಟಿಸ್‌ ಬೋರ್ಡ್, ಜಾಲತಾಣ ಮತ್ತು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಪ್ರಕಟಿಸಬೇಕು. ಶಾಲೆ ಮಾಹಿತಿ ಪುಸ್ತಕದಲ್ಲೂ ಮುದ್ರಿಸಬೇಕೆಂದು. ಈ ಶುಲ್ಕ ಹೊರತುಪಡಿಸಿ ಕ್ಯಾಪಿಟೇಷನ್‌ ಶುಲ್ಕವಸೂಲಿ ಮಾಡುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಹಾಗೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts