ಕರಾವಳಿ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ಮಂಡಲ ರಂಗಪೂಜೆಯ ವೈಭವ | ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ರಂಗಪೂಜೆ ಸೇವಾದಾರರ ಸಂಖ್ಯೆ

ವಿಶೇಷ ಕಾರಣಿಕತೆಯ ಪುಣ್ಯ ಕ್ಷೇತ್ರ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜಾತ್ರೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಕಿರುಷಷ್ಠಿಯಂದು ನಡೆಯುವ ಈ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ಒಂದು ಮಂಡಲ ಅಂದರೆ 48 ದಿನಗಳ ಪರ್ಯಂತ ರಂಗಪೂಜೆ ನಡೆದು ಬರುವುದು ಎಲ್ಲೂ ಕಾಣ ಸಿಗದ ವೈಭವ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಶೇಷ ಕಾರಣಿಕತೆಯ ಪುಣ್ಯ ಕ್ಷೇತ್ರ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜಾತ್ರೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಕಿರುಷಷ್ಠಿಯಂದು ನಡೆಯುವ ಈ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ಒಂದು ಮಂಡಲ ಅಂದರೆ 48 ದಿನಗಳ ಪರ್ಯಂತ ರಂಗಪೂಜೆ ನಡೆದು ಬರುವುದು ಎಲ್ಲೂ ಕಾಣ ಸಿಗದ ವೈಭವ.

ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ಪೈಕಿ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ವಿಶೇಷ ಪ್ರಾಧಾನ್ಯತೆ. ಕರಾವಳಿ ನಾಗ ಸಾನಿಧ್ಯದ ಭೂಮಿ ಎನ್ನುವುದು ಎಲ್ಲರೂ ಕಂಡುಕೊಂಡ ಸತ್ಯ. ಹಾಗಾಗಿ ನಾಗಗಳ ಅಧಿಪತಿ ಸುಬ್ರಹ್ಮಣ್ಯ ದೇವರ ಮೇಲೆ ಹೆಚ್ಚಿನ ಭಯ – ಭಕ್ತಿ. ಯಾವುದೇ ಸಮಸ್ಯೆಗಳಿಗೂ ಮೂಲ ಕಾರಣ ಹಾಗೂ ಪರಿಹಾರ ಸುಬ್ರಹ್ಮಣ್ಯ ಅಥವಾ ನಾಗ ಎಂದೇ ಹೇಳಲಾಗುತ್ತದೆ. ಆದ್ದರಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದು ಬರುತ್ತಿರುವ ಒಂದು ಮಂಡಲ ರಂಗಪೂಜೆಗೆ ವಿಶೇಷ ಪ್ರಾಧಾನ್ಯತೆ.

SRK Ladders

ನವಂಬರ್ 18ರಂದು ಆರಂಭಗೊಂಡಿರುವ ರಂಗಪೂಜೆ ಜನವರಿ 4ರಂದು ದೊಡ್ಡ ರಂಗಪೂಜೆ ನಡೆಯುವ ಮೂಲಕ ಸಮಾಪನಗೊಳ್ಳುತ್ತದೆ. ಬಳಿಕ ಸುಬ್ರಹ್ಮಣ್ಯ ದೇವರಿಗೆ ಜಾತ್ರೆಯ ಸಡಗರ. ಜ. 9ರ ಬೆಳಿಗ್ಗೆಯಿಂದ ಉಳ್ಳಾಲ್ತಿ – ಉಳ್ಳಾಕುಲು‌ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಕಳೆದ ಕೆಲ ವರ್ಷಗಳಿಂದ ಒಂದು ಮಂಡಲ ರಂಗಪೂಜೆ ನಡೆದು ಬರುತ್ತಿದ್ದು, ಊರ – ಹೊರ ಊರಿನ ಭಕ್ತರನ್ನು ಸೆಳೆಯುತ್ತಿದೆ. ಅವರ ಮನಸಂಕಲ್ಪಗಳನ್ನು ಈಡೇರಿಸುತ್ತಿವೆ. ಸಂಕಷ್ಟಗಳನ್ನು ದೂರ ಮಾಡುತ್ತಿವೆ. ಆದ್ದರಿಂದ ಸುಬ್ರಹ್ಮಣ್ಯ ದೇವರ ನಡೆಯಲ್ಲಿ ನಡೆಯುವ ರಂಗಪೂಜೆ ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ.

ಹೆಚ್ಚುತ್ತಿದೆ ಸೇವೆ:

ರಂಗಪೂಜೆಯ ವಿಶೇಷತೆಯಿಂದಾಗಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಕಾರಣೀಕತೆಯಿಂದಾಗಿ ಇದೀಗ ದಿನಕ್ಕೆ ಸುಮಾರು 14ರಷ್ಟು ಸೇವಾದಾರರು ರಂಗಪೂಜೆ ನಡೆಸುತ್ತಿದ್ದಾರೆ. ತಮ್ಮ ಮನಸ್ಸಂಕಲ್ಪವನ್ನು ದೇವರ ಮುಂದೆ ಅರುಹಿ, ಪರಿಹಾರ ಪಡೆದುಕೊಳ್ಳುತ್ತಿದ್ದಾರೆ. ಹಿಂದಿನ ಬಾರಿಗೆ ಹೋಲಿಸಿದರೆ, ಈ ಬಾರಿ 48 ದಿನದ ರಂಗಪೂಜೆಗೆ ಈಗಲೇ ಅನೇಕ ಹೆಸರುಗಳು ನೋಂದಾವಣೆಗೊಂಡಿವೆ. ದೇವರಿಗೆ ರಂಗಪೂಜೆ ನೆರವೇರಿದ ಬಳಿಕ, ರಾತ್ರಿ ಅನ್ನಸಂತರ್ಪಣೆ ಜರಗುತ್ತದೆ. ರಂಗಪೂಜೆಯ ಜೊತೆಗೆ ಕಾರ್ತಿಕ ಪೂಜೆ, ಮಹಾಪೂಜೆ, ಸರ್ವ ಸೇವೆ ನಡೆಯುತ್ತವೆ.

–ಕೋಟ್-

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ರಂಗಪೂಜೆ ನಡೆಯುತ್ತಿದೆ. ಜ. 5 ಹಾಗೂ 6ರಂದು ವಾರ್ಷಿಕ ಜಾತ್ರೋತ್ಸವ ನಡೆಯಲಿದೆ. ಡಿ. 5ರ ಗುರುವಾರ 18ನೇ ದಿನದ ರಂಗಪೂಜೆ ನಡೆಯಿತು. ಈ ಹದಿನೆಂಟು ದಿನದಲ್ಲಿ 128 ರಂಗಪೂಜಾ ಸೇವೆ ನಡೆದಿವೆ. ಉಳಿದಿರುವ 30 ದಿನಗಳಲ್ಲಿ ರಂಗಪೂಜೆ ನಡೆಯಲಿದ್ದು, ಭಕ್ತರು ಸುಬ್ರಹ್ಮಣ್ಯ ದೇವರ ಸಾನಿಧ್ಯದಲ್ಲಿ ರಂಗಪೂಜೆ ನಡೆಸಿ ಕೃತಾರ್ಥರಾಗಬಹುದು. ರಂಗಪೂಜೆಯ ಬಳಿಕ ರಾತ್ರಿ ಅನ್ನಸಂತರ್ಪಣೆಯೂ ನಡೆಯುತ್ತಿದೆ. ಭಕ್ತರು ಸಂಪರ್ಕಿಸಬೇಕಾದ ಸಂಖ್ಯೆ 9606515600.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…