ಕರಾವಳಿ

ಬಾಹ್ಯಾಕಾಶ ನಿಲ್ದಾಣದಲ್ಲಿ ವಿಷಕಾರಿ ವಾಸನೆ’ ಪತ್ತೆ: ತುರ್ತು ಕ್ರಮಕ್ಕೆ ಚಾಲನೆ

ಗಗನಯಾತ್ರಿ ಸುನೀತಾ ವಿಲಿಯಮ್ಸ್ ನೇತೃತ್ವದ ತಂಡ ಇರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಚಿತ್ರವಾದ ವಿಷಕಾರಿ ವಾಸನೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕೆ ಚಾಲನೆ ನೀಡಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಗಗನಯಾತ್ರಿ ಸುನೀತಾ ವಿಲಿಯಮ್ಸ್ ನೇತೃತ್ವದ ತಂಡ ಇರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಚಿತ್ರವಾದ ವಿಷಕಾರಿ ವಾಸನೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕೆ ಚಾಲನೆ ನೀಡಲಾಗಿದೆ. ಸರಕು ಬಾಹ್ಯಾಕಾಶ ನೌಕೆಯ ಬಾಗಿಲನ್ನು ತೆರೆಯುವಾಗ ವಿಷಕಾರಿ ವಾಸನೆ ಪತ್ತೆಯಾಗಿದ್ದು ಸಿಬ್ಬಂದಿ ತಕ್ಷಣ ಪ್ರತಿಕ್ರಿಯಿಸಿದ್ದಾರೆ.

akshaya college

ಬಾಹ್ಯಾಕಾಶ ನಿಲ್ದಾಣಕ್ಕೆ ಆಹಾರ, ಇಂಧನದಂತಹ ಅಗತ್ಯದ ವಸ್ತುಗಳನ್ನು ತರುವ ಎಂ ಎಸ್-29 ಸರಕು ನೌಕೆಯ ದ್ವಾರವನ್ನು ತೆರೆದಾಗ ಅಲ್ಲಿ ಅಸಹಜ ವಾಸನೆ ಪತ್ತೆಯಾಗಿದೆ. ಅಲ್ಲದೆ ಸರಕು ನೌಕೆಯ ಒಳಗಡೆ ಸಣ್ಣ ಹನಿಗಳೂ ಕಂಡು ಬಂದಿವೆ. ಸಂಭಾವ್ಯ ಅಪಾಯವನ್ನು ಪತ್ತೆಹಚ್ಚಿದ ಸಿಬ್ಬಂದಿ ತಕ್ಷಣವೇ ದ್ವಾರವನ್ನು ಸೀಲ್ ಮಾಡಿದರು ಮತ್ತು ಆ ಪ್ರದೇಶವನ್ನು ಬಾಹ್ಯಾಕಾಶ ನಿಲ್ದಾಣದ ಇತರ ಪ್ರದೇಶಗಳಿಂದ ಪ್ರತ್ಯೇಕಿಸಿದರು. ತಕ್ಷಣ ಕಾರ್ಯ ನಿರ್ವಹಿಸಿದ ನಾಸಾ(ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ಗಾಳಿಯನ್ನು ಶುದ್ದೀಕರಿಸಲು ನಿಲ್ದಾಣದಾದ್ಯಂತ ಏರ್ ಸ್ಟ್ರಬ್ಬಿಂಗ್‌ ವ್ಯವಸ್ಥೆಗೆ ಚಾಲನೆ ನೀಡಿದೆ.

ಸುರಕ್ಷತೆಯನ್ನು ಖಾತರಿಪಡಿಸಲು ಸಿಬ್ಬಂದಿಗಳು ವೈಯಕ್ತಿಕ ಸುರಕ್ಷತಾ ಸಾಧನ(ಪಿಪಿಇ)ಯನ್ನು ಧರಿಸಿದರು. ಕ್ಷಿಪ್ರ ಪ್ರತಿಕ್ರಿಯೆಯು ಸಿಬ್ಬಂದಿಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ತಮ್ಮ ಕಾರ್ಯವನ್ನು ಮುಂದುವರಿಸಲು ನೆರವಾಗಿದೆ. ಇದೀಗ ಐಎಸ್‌ಎಸ್ನಲ್ಲಿನ ವಾಯು ಗುಣಮಟ್ಟ ಸಹಜ ಸ್ಥಿತಿಗೆ ಮರಳಿದ್ದು ಸಿಬ್ಬಂದಿಗಳ ಸುರಕ್ಷತೆಗೆ ಅಪಾಯವಿಲ್ಲ. ಆದರೆ ವಾಸನೆಯ ಕಾರಣ ಸ್ಪಷ್ಟವಾಗಿಲ್ಲ ಮತ್ತು ತನಿಖೆ ಮುಂದುವರಿದಿದೆ ಎಂದು ನಾಸಾದ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಎರಡೇ ದಿನದಲ್ಲಿ ಬಯಲಾದ ರಸ್ತೆ ಕಾಮಗಾರಿಯ ಅಸಲಿ ಮುಖ | ಅವೈಜ್ಞಾನಿಕ, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಪುತ್ತಿಲ ಆಕ್ರೋಶ

ಪುತ್ತೂರು: ಕಾಮಗಾರಿ ನಡೆದ ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡ ಎರಡೇ ದಿನದಲ್ಲಿ ಕಿತ್ತು…

ಸೆ. 7 – 9: ಯುವಜನರ ನಡಿಗೆ ಉದ್ಯೋಗದ ಕಡೆಗೆ ಡಿವೈಎಫ್ಐನಿಂದ ಯುವಜನ ಜಾಥಾ | ಪುತ್ತೂರು ಸಹಿತ ಜಿಲ್ಲಾದ್ಯಂತ ಸಂಚರಿಸಲಿದೆ ಜಾಥಾ

ಪುತ್ತೂರು: ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಯುವಜನರ ನಡಿಗೆ ಉದ್ಯೋಗದ ಕಡೆಗೆ…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…