ಪುತ್ತೂರು: ನವಂಬರ 13 ರಂದು ತುಳಸಿ ಪೂಜೆಯ ದಿನ ರಾಜ್ಯಾದ್ಯಂತ ಪ್ರತಿ ಮನೆಗಳಲ್ಲಿ ತಾಯಂದಿರು ಏಕಕಾಲದಲ್ಲಿ ಮನೆಯವರೊಂದಿಗೆ ಸಾಯಂಕಾಲ ತುಳಸಿ ಗಿಡಕ್ಕೆ ಹೂವಿಟ್ಟು ಆರತಿ ಎತ್ತುವ ಮೂಲಕ ಸರಳವಾಗಿ ತುಳಸಿ ಪೂಜೆ ಮಾಡುಬೇಕೆನ್ನುವ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ ಯೋಚನೆಯ ಅನುಷ್ಠಾನ ಇಡೇರಿಕೆಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಾಲಯಗಳ ಸಂವರ್ದನ ಸಮಿತಿಯ ಪ್ರಮುಖರು ವಿಶೇಷ ಪ್ರಾಥನೆ ಸಲ್ಲಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ನಿಕಟಪೂರ್ವ ಅಧ್ಯಕ್ಷ, ದೇವಾಲಯಗಳ ಸಂವರ್ಧನಾ ಸಮಿತಿಯ ಮಂಗಳೂರು ವಿಭಾಗ ಪ್ರಮುಖ್ ಕೇಶವ ಭಟ್ ಮುಳಿಯ, ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ್ ಸುಳ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿ ಸದಸ್ಯ, ದೇವಾಲಯಗಳ ಸಂವರ್ಧನಾ ಸಮಿತಿಯ ವಿಭಾಗ ಸಂಯೋಜಕ ಪ್ರಸನ್ನ ದರ್ಬೆ, ಕೊಯಿಲ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿಅಧ್ಯಕ್ಷ, ದೇವಲಯಗಳ ಸಂವರ್ಧನಾ ಸಮಿತಿ ಸದಸ್ಯ ಯದುಶ್ರೀ ಆನೆಗುಂಡಿ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಕೇಶವ ಭಟ್ ಮುಳಿಯ, ನಮ್ಮ ಸಂಸ್ಕತಿಯ ಆಚರಣೆಗಳು ಮಾಯವಾಗುತ್ತಾ, ಪಾಶ್ಚಾತ್ಯ ಸಂಸ್ಕತಿಗಳ ಕಡೆ ಮುಖ ಮಾಡುವ ಈ ಸಂದರ್ಭಗಳಲ್ಲಿ ಹಿಂದುಗಳ ಪ್ರತಿ ಮನೆಯಲ್ಲಿ ಮಕ್ಕಳಲ್ಲಿ ಧಾರ್ಮಿಕತೆಯ ಅರಿವು ಮೂಡಿಸಲು ನಮ್ಮ ಧರ್ಮ ನಮ್ಮ ರಕ್ಷಣೆಯ ಅಡಿಯಲ್ಲಿ ಕಳೆದ ವರ್ಷ ಕಡಬ ತಾಲೂಕಿನ ಕೊಯಿಲ ಗ್ರಾಮದ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಗ್ರಾಮದ ಪ್ರತಿ ಮನೆಗಳಲ್ಲಿ ಮಕ್ಕಳಿಂದ ಶಾರದ ಪೂಜೆ ಹಾಗು ಮಾತೆಯರಿಂದ ತುಳಸಿ ಪೂಜೆ ನಡೆಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಮನೆಗಳಲ್ಲಿ ಮಾತೆಯರಿಂದ ತುಳಸಿ ಪೂಜೆ ಜರಗಬೇಕು ಎನ್ನುವ ಅಪೇಕ್ಷೆ ನಮ್ಮದು. ಹಿಂದು ಧರ್ಮದ ಪೂಜನಿಯ ಅಸ್ಮಿತೆಗಳು ಪ್ರತೀ ಮನೆಯಲ್ಲಿ ನೆಲೆ ನಿಲ್ಲುವಂತಾಗಲಿ, ನಮ್ಮ ಧರ್ಮ ನಮ್ಮಿಂದ ರಕ್ಷಣೆ ಆಗಲಿ, ಎಲ್ಲಾ ಮನೆಯವರು ನಮ್ಮ ಯೋಜನೆಯನ್ನು ಪ್ರೋತ್ಸಾಹಿಸಬೇಕೆಂದು ದೇವರಲ್ಲಿ ಪ್ರಾಥನೆ ಸಲ್ಲಿಸಲಾಗಿದೆ ಎಂದರು.
ನ. 13ರ ಸಂಜೆ ಸರಳವಾಗಿ ತುಳಸಿ ಪೂಜೆ ಆಚರಿಸಿ; ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೇಳಿಕೆ ನೀಡಿದ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ
0
2,610
ನವಂಬರ 13 ರಂದು ತುಳಸಿ ಪೂಜೆಯ ದಿನ ರಾಜ್ಯಾದ್ಯಂತ ಪ್ರತಿ ಮನೆಗಳಲ್ಲಿ ತಾಯಂದಿರು ಏಕಕಾಲದಲ್ಲಿ ಮನೆಯವರೊಂದಿಗೆ ಸಾಯಂಕಾಲ ತುಳಸಿ ಗಿಡಕ್ಕೆ ಹೂವಿಟ್ಟು ಆರತಿ ಎತ್ತುವ ಮೂಲಕ ಸರಳವಾಗಿ ತುಳಸಿ ಪೂಜೆ ಮಾಡುಬೇಕೆನ್ನುವ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ ಯೋಚನೆಯ ಅನುಷ್ಠಾನ
Related Posts
ಹೀಗೊಂದು ವಿಶಿಷ್ಠ ಕಾರ್ಯಕ್ರಮ – ದಿವ್ಯಾಂಗಜನ ಸಾಹಿತ್ಯ ಸಂಭ್ರಮ| ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಸಾಹಿತ್ಯ ಕಾರ್ಯಕ್ರಮದಲ್ಲಿ ಮಿಂದೆದ್ದ ವಿಶೇಷಚೇತನರು
ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ದಿವ್ಯಾಂಗಜನ ಸಾಹಿತ್ಯ ಸಂಭ್ರಮ ಮಂಗಳವಾರ ಮುರ ಶಿವಸದನ…
ವಿಶ್ವಕರ್ಮ ಯುವ ಸಮಾಜದ ಮಹಾಸಭೆ, ವಾರ್ಷಿಕೋತ್ಸವ
ಬೊಳುವಾರು ವಿಶ್ವಕರ್ಮ ಯುವ ಸಮಾಜದ 2023-24ನೇ ಸಾಲಿನ ಮಹಾಸಭೆ ಹಾಗೂ ವಾರ್ಷಿಕೋತ್ಸವ ಭಾನುವಾರ…
ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ
ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…
ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!
ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…
ವಾರಂಟ್ ಆರೋಪಿ ಅಝರುದ್ದೀನ್ ಬಂಧನ!!
ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ಎಲ್ಪಿಸಿ ವಾರಂಟ್…
ಆನೆ ಕೊಲ್ಲಲು ಅನುಮತಿ ಕೇಳಿದ ಶಾಸಕ ಹರೀಶ್ ಪೂಂಜಾ!
ಶಾಸಕ ಹರೀಶ್ ಪೂಂಜ ಅವರು ಕಾಡಿನಂಚಿನ ಜನರಿಗೆ ತೊಂದರೆ ಕೊಡುತ್ತಿರುವ ಆನೆಗಳನ್ನು ಕೊಲ್ಲಲು…
ಕಾರ್ಕಳ: ಹೊತ್ತಿ ಉರಿದ ಟೂರಿಸ್ಟ್ ಬಸ್; ಪ್ರಯಾಣಿಕರು ಅಪಾಯದಿಂದ ಪಾರು!!
ಟೂರಿಸ್ಟ್ (ಟಿಟಿ) ವಾಹನವೊಂದು ಹೊತ್ತಿ ಉರಿದ ಘಟನೆ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ನಡೆದಿದೆ.
ಕೃಷ್ಣನಗರ: ಸಿಲೆರಿಯೋ – ಬೈಕ್ ಅಪಘಾತ!
ಉಪ್ಪಿನಂಗಡಿ - ಪುತ್ತೂರು ಹೆದ್ದಾರಿಯ ಬನ್ನೂರಿನ ಕೃಷ್ಣನಗರದಲ್ಲಿ ಸಿಲೆರಿಯೋ ಕಾರು ಹಾಗೂ ಬೈಕ್…