ಕರಾವಳಿ

ಪುತ್ತೂರು: ಫೆ. 1ರಂದು ಹಿಂದೂ ಸಂಗಮ, ಶೋಭಾಯಾತ್ರೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ನಗರದ ವಿದ್ಯಾರಣ್ಯ ವಸತಿಯ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ಫೆ. 1ರಂದು ಸಂಜೆ 4.30ರಿಂದ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ನಡೆಯಲಿದೆ.

chennai-shopping
maithri

hindu-sangama

ಬೊಳುವಾರು, ಪಡೀಲು, ದೇವಿಬೆಟ್ಟ, ಕೊಂಬೆಟ್ಟು, ಸೂತ್ರಬೆಟ್ಟು, ನೆಲ್ಲಿಕಟ್ಟೆ ವಲಯ ವ್ಯಾಪ್ತಿಯ ಹಿಂದೂ ಸಂಗಮ ಇದಾಗಿದೆ. ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ.

ಸಂಜೆ 4.30ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶೋಭಾಯಾತ್ರೆ ಉದ್ಘಾಟನೆಗೊಳ್ಳಲಿದೆ. ಬಳಿಕ ಮುಖ್ಯಪೇಟೆಯಾಗಿ ಸಾಗಲಿರುವ ಶೋಭಾಯಾತ್ರೆ, ಪುತ್ತೂರು ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಸಮಾಪನಗೊಂಡು ಹಿಂದೂ ಸಂಗಮ ನಡೆಯಲಿದೆ. ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts