ಕರಾವಳಿ

ಸಂಘ ಪರಿವಾರದ ಪ್ರಮುಖರ ಟಾರ್ಗೆಟ್ ಖಂಡನೀಯ: ಪುತ್ತಿಲ | ಕಾರ್ಯಕರ್ತರ ಮನೆಗೆ ನುಗ್ಗಿ ಜಿಪಿಎಸ್ ಫೊಟೋ ತೆಗೆದು, ಮನೆಯವರಿಗೆ ಹಿಂಸೆ!!

ಪುತ್ತೂರು: ಇತ್ತಿಚಿನ ಕೆಲವು ಘಟನೆಗಳು ಸಂಭವಿಸಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರನ್ನೇ ಗುರಿಯಾಗಿಸಿ ಕೇಸ್ ಜಡಿಯುವ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆಯುತ್ತಿರುವುದು ಖಂಡನೀಯ ಎಂದು ಅರುಣ್ ಪುತ್ತಿಲ ಹೇಳಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇತ್ತಿಚಿನ ಕೆಲವು ಘಟನೆಗಳು ಸಂಭವಿಸಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರನ್ನೇ ಗುರಿಯಾಗಿಸಿ ಕೇಸ್ ಜಡಿಯುವ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆಯುತ್ತಿರುವುದು ಖಂಡನೀಯ ಎಂದು ಅರುಣ್ ಪುತ್ತಿಲ ಹೇಳಿದ್ದಾರೆ.

ಸುಹಾಸ್ ಶೆಟ್ಟಿ ಶ್ರದ್ದಾಂಜಲಿ ಭಾಷಣ ನೆಪದಲ್ಲಿ ಸಂಘ ಪರಿವಾರದ ಹಿರಿಯರಿಗೆ, ಎನ್ ಐ ಎ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮುಖಂಡರಿಗೆ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.

ಮಧ್ಯರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಗೆ ನುಗ್ಗಿ ಜಿಪಿಎಸ್ ಪೋಟೋ ತೆಗೆಯುವ ಮೂಲಕ ಮಲಗಿರುವ ಮನೆ ಮಂದಿಗೂ ಹಿಂಸೆ ನೀಡಿವಂತ ಪ್ರಕ್ರಿಯೆ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ.

ಈ ಎಲ್ಲಾ ಘಟನೆಗಳು ಸಂಘ ಪರಿವಾರದ ಕಡು ವಿರೋಧಿ ಬಿ.ಕೆ ಹರಿಪ್ರಸಾದ್ ರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾದ ನಂತರ ನಡೆದ ಘಟನೆಗಳಾಗಿವೆ. ಸಂಘಪರಿವಾರದ ನಾಯಕರನ್ನು ಭಯೋತ್ಪಾದಕರ ರೀತಿ ಬಿಂಬಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೇಸ್ ಸರ್ಕಾರ SDPI ನಾಯಕರ ಬೆದರಿಕೆಗೆ ಹೆದರಿ ಹಿಂದೂ ನಾಯಕ ಶರಣ್ ಪಂಪ್ವೆಲ್ ರನ್ನು ಬಂಧಿಸಿದೆ. ಆದರೆ ಗೌರವಾನ್ವಿತ ನ್ಯಾಯಲಯ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಿ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ ಸಂಘ ಪರಿವಾರ ವಿರೋಧಿ ಸಿದ್ದರಾಮಯ್ಯ ಸರ್ಕಾರಕ್ಕೆ ಕಪಾಲಮೋಕ್ಷ ಮಾಡಿದಂತಾಗಿದೆ.

ಹಿಂದೂ ಕಾರ್ಯಕರ್ತರನ್ನು ಮಾತ್ರ ಟಾರ್ಗೆಟ್ ಮಾಡುವ ಕಾಂಗ್ರೇಸ್ ಸರ್ಕಾರದ ನಡೆ ಖಂಡನೀಯ. ಇದನ್ನು ತಕ್ಷಣ ನಿಲ್ಲಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ದೇಹದಂತೆ ದೇಶ, ದೇವರ ರಕ್ಷಣೆ ಅಗತ್ಯ | ಪುತ್ತೂರಿನಲ್ಲಿ ಶೋಭಾಯಾತ್ರೆ ಬಳಿಕ ನಡೆದ ಹಿಂದೂ ಸಂಗಮದಲ್ಲಿ ಕಣಿಯೂರು ಶ್ರೀ

ಪುತ್ತೂರು: ದೇಹವನ್ನು ದಿನನಿತ್ಯ ರಕ್ಷಣೆ ಮಾಡುವಂತೆ ದೇಶ ಹಾಗೂ ದೇವಸ್ಥಾನವನ್ನು ರಕ್ಷಣೆ…