ಪುತ್ತೂರು: ಬಂದ್’ನ ತೀವ್ರತೆ ಕ್ರಮೇಣ ಪುತ್ತೂರು ಪೇಟೆಗೂ ತಟ್ಟುತ್ತಿದೆ.
ಬೆಳಗ್ಗಿನಿಂದ ತೆರೆದೇ ಇದ್ದ ಪುತ್ತೂರು ಪೇಟೆ 10 ಗಂಟೆ ಸುಮಾರಿಗೆ ಬಂದ್’ನತ್ತ ತೆರಳುತ್ತಿದೆ.
ವಾಹನ ಸಂಚಾರ ಕ್ರಮೇಣ ವಿರಳ ಆಗುತ್ತಿವೆ. ತೆರೆದಿದ್ದ ಅಂಗಡಿ ಮುಂಗಟ್ಟುಗಳು ಬಂದ್ ಆಗುತ್ತಿವೆ. ಶಾಲಾ – ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಮನೆ ಕಡೆ ಹಿಂದಿರುಗುತ್ತಿದ್ದಾರೆ. ಪೇಟೆಗೆ ಆಗಮಿಸಿದ್ದ ಸಾರ್ವಜನಿಕರು ಹಿಂದಡಿ ಇಡುತ್ತಿದ್ದಾರೆ.
ಒಟ್ಟಿನಲ್ಲಿ ಪುತ್ತೂರು ಪೇಟೆ ಬಂದ್’ನತ್ತ ವಾಲುತ್ತಿದೆ. ಹೆಚ್ಚು ಕಡಿಮೆ ಸ್ವಯಂಪ್ರೇರಿತರಾಗಿ ಅಂಗಡಿಗಳು ಬಂದ್ ಆಗುತ್ತಿವೆ.
ಕೆಲ ಹಿಂದೂ ಪರ ಸಂಘಟನೆಗಳು ತೆರೆದಿದ್ದ ಅಂಗಡಿಗಳಿಗೆ ತೆರಳಿ, ಬಂದ್ ಮಾಡುವಂತೆ ಮನವಿ ಮಾಡುತ್ತಿರುವುದು ಕಂಡು ಬಂದಿತು.


























