ಕರಾವಳಿ

ಮಂಗಳೂರು: ಮರದ ಕೊಂಬೆ ಬಿದ್ದು  ಮೂವರು ವಿದ್ಯಾರ್ಥಿನಿಯರಿಗೆ  ಗಂಭೀರ ಗಾಯ!

GL
ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ನಡೆದಿದೆ.

chennai-shopping
maithri

ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಪ್ರತ್ (18) ಗಾಯಗೊಂಡವರು ಎಂದು ತಿಳಿದು ಬಂದಿದೆ.

ನಗರದ ಬಲ್ಮಠದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರಾಗಿರುವ ಇವರು ಸೋಮವಾರ ಸಂಜೆ ಹಂಪನಕಟ್ಟೆಯ ಬಳಿ ಮನೆಗೆ ತೆರಳಲು ಸಂಜೆ 4:30ಕ್ಕೆ ಬಸ್ಸಿಗೆ ಕಾಯುತ್ತಿದ್ದಾಗ ಮರದ ಕೊಂಬೆ ಬಿತ್ತು ಎನ್ನಲಾಗಿದೆ. ಹಲವು ಮಂದಿ ಇಲ್ಲಿಯೇ ಬಸ್‌ಗೆ ಕಾಯುತ್ತಿದ್ದರು ಎನ್ನಲಾಗಿದ್ದು, ಬಹುತೇಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts