Thursday, December 12
Share News

ಪುತ್ತೂರು; ಕೆರೆ ಮತ್ತು ಪಾರ್ಕ್‌ಗಳ ಅಭಿವೃದ್ದಿ ವಿಚಾರದ ಕುರಿತು ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ  ನಿರ್ದೇಶಕರಾದ ಪ್ರಭುಲಿಂಗ ಕವಳಕಟ್ಟೆ ಅವರ ಜೊತೆ ಪುತ್ತೂರು ಶಾಸಕರಾದ ಅಶೋಕ್ ರೈ ಚರ್ಚೆ ನಡೆಸಿದರು.

ಶುಕ್ರವಾರ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಶಾಸಕರು ನಗರಸಭಾ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳನ್ನು ಹೇಗೆ ಅಭಿವೃದ್ದಿ ಮಾಡಬಹುದು ಮತ್ತು ಅಭಿವೃದ್ದಿಯಾಗುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ನಗರಸಭಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್‌ಗಳನ್ನು ನಿರ್ಮಿಸುವ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದರು. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಿಯೂ ಸೂಕ್ತವಾದ ಪಾರ್ಕ್ ಇಲ್ಲದೇ ಇದ್ದು ಜನೋಪಯೋಗಿ ಪಾರ್ಕ್‌ಗಳನ್ನಿ ನಿರ್ಮಿಸುವ ಬಗ್ಗೆ ಶಾಸಕರು ಚರ್ಚೆ ನಡೆಸಿದರು. ಪೌರಾಡಳಿತ ಇಲಾಖೆಯಿಂದ ಸಾರ್ವಜನಿಕ ಸ್ನೇಹಿ ಪಾರ್ಕ್ ನಿರ್ಮಾಣ ಮಾಡುವಲ್ಲಿ ಹೆಚ್ಚುವರಿ ಅನುದಾನವನ್ನು ಮೀಸಲಿರಿಸುವ ಬಗ್ಗೆಯೂ ಶಾಸಕರು ಚರ್ಚೆ ನಡೆಸಿದರು.


Share News

Comments are closed.

Exit mobile version