ಪುತ್ತೂರು: ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ, ಆಟೋ ಚಾಲಕ ಗೋಪಾಲ ನಾಯ್ಕ (55) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜ. 14ರಂದು ಬೆಳಗ್ಗೆ ಮನೆಯವರು ನೋಡುವಾಗ, ಮನೆ ಎದುರು ಭಾಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಪುತ್ತೂರು ಬಸ್ ನಿಲ್ದಾಣದ ಬಳಿಯ ಕ್ಯೂನಲ್ಲಿ ಬಾಡಿಗೆ ಮಾಡುತ್ತಿದ್ದ ಅವರು, ಪುತ್ತೂರು ಸಹಕಾರಿ ಸಂಘವೊಂದರಲ್ಲಿ ಆಟೋ ರಿಕ್ಷಾದ ಸಾಲದ ಕಂತು ಮತ್ತು ಆಟೋ ರಿಕ್ಷಾದ ಇನ್‌ಶೂರೆನ್ಸ್ ಪಾವತಿಗೆ ಬಾಕಿಯಾಗಿದ್ದ ಹಿನ್ನಲೆಯಲ್ಲಿ ರಿಕ್ಷಾವನ್ನು ಸೀಸ್ ಮಾಡಲಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
























