pashupathi
ನಿಧನ

ಸ್ಕೂಬಾ ಡೈವಿಂಗ್ ವೇಳೆ  ಖ್ಯಾತ ಬಾಲಿವುಡ್ ಗಾಯಕ ನಿಧನ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಸ್ಕೂಬಾ ಡೈವಿಂಗ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಖ್ಯಾತ ಬಾಲಿವುಡ್ ಗಾಯಕ ಜುಬೀನ್ ಗರ್ಗ್ (Zubeen Garg) ಸಾವನ್ನಪ್ಪಿದ್ದಾರೆ.

akshaya college

52 ವರ್ಷದ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಸೆಪ್ಟೆಂಬರ್ 20 ಮತ್ತು 21 ರಂದು ಪ್ರದರ್ಶನ ನೀಡಬೇಕಿದ್ದ ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಆದರೆ ಅದಕ್ಕೂ ಮೊದಲೇ ಈ ದುರ್ಘಟನೆ ನಡೆದಿದೆ.

ಮಧ್ಯಾಹ್ನ 2.30ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಜುಬೀನ್ ಅವರನ್ನು ಸಮುದ್ರದಿಂದ ಮೇಲಕ್ಕೆತ್ತಿ ಸಿಪಿಆ‌ರ್ ನೀಡಲಾಗಿತ್ತು, ಆದರೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂದು ವರದಿ ಹೇಳಿದೆ.

ಸ್ಕೂಬಾ ಡೈವಿಂಗ್ ಮಾಡುವಾಗ, ಗರ್ಗ್ ಅವರಿಗೆ ಉಸಿರಾಟದ ತೊಂದರೆ ಅನುಭವಿಸಿದ್ದರು ಎಂದು ಈಶಾನ್ಯ ಭಾರತ ಉತ್ಸವದ ಪ್ರತಿನಿಧಿಗಳು ಹೇಳಿದ್ದಾರೆ.

ಸ್ಕೂಬಾ ಡೈವಿಂಗ್ ಮಾಡುವಾಗ, ಅವರಿಗೆ ಉಸಿರಾಟದ ತೊಂದರೆ ಉಂಟಾಯಿತು, ಸಿಂಗಾಪುರ ಜನರಲ್ ಆಸ್ಪತ್ರೆಗೆ ಸಾಗಿಸುವ ಮೊದಲು  ಸಿಪಿಆರ್ ನೀಡಲಾಯಿತು. ಅವರನ್ನು ಉಳಿಸಲು ಪ್ರಯತ್ನಿಸಿದರೂ, ಅವರು ಭಾರತೀಯ ಕಾಲಮಾನ ಮಧ್ಯಾಹ್ನ 2.30 ರ ಸುಮಾರಿಗೆ ಐಸಿಯುನಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು’ ಎಂದು ಈಶಾನ್ಯ ಭಾರತ ಉತ್ಸವದ ಪ್ರತಿನಿಧಿ ಅನುಜ್ ಕುಮಾರ್ ಬೊರುವಾ ಹೇಳಿದರು.

ಜುಬೀನ್ ಗರ್ಗ್ ಅವರು ಚಲನಚಿತ್ರಗಳು ಮತ್ತು ಸಂಗೀತ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದರು. ಅವರು ಅಸ್ಸಾಮಿ, ಬಂಗಾಳಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಹಾಡಿದ್ದರು.

ಇಮ್ರಾನ್ ಹಶ್ಮಿ-ಕಂಗನಾ ರಣೇತ್ ನಟಿಸಿದ್ದ ಗ್ಯಾಂಗ್‌ಸ್ಟರ್ ಚಿತ್ರದ ‘ಯಾ ಆಲಿ’ ಹಾಡಿನ ಮೂಲಕ ಜುಬೀನ್ ಗರ್ಗ್ ಪ್ರಸಿದ್ದಿ ಪಡೆದಿದ್ದರು. ಅವರು ಹಲವಾರು ಚಿತ್ರಗಳಲ್ಲಿ ನಟಿಸಿ ನಿರ್ದೇಶಿಸಿದ್ದಾರೆ, ಅವುಗಳಲ್ಲಿ ಕಾಂಚನಜುಂಗಾ, ಮಿಷನ್ ಚೀನಾ, ದಿನಬಂಧು, ಮೋನ್ ಜೈ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts