ನಿಧನ

ಕೆ. ಕಸ್ತೂರಿ ರಂಗನ್ ನಿಧನ!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ರೊ ಮಾಜಿ ಅಧ್ಯಕ್ಷ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ. ಕಸ್ತೂರಿ ರಂಗನ್ (84 ) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು.

akshaya college

ಶ್ರೀಲಂಕಾದ ಕೊಲಂಬೋದಲ್ಲಿ ಹೃದಯಾಘಾತಕ್ಕೊಳಗಾದ ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗಿತ್ತು.

ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಕಸ್ತೂರಿ ರಂಗನ್‌ ಅವರು 1940 ಅಕ್ಟೋಬರ್‌ 24ರಂದು ಎರ್ನಾಕುಳಂನಲ್ಲಿ ಜನಿಸಿದ್ದರು.

ರಾಜ್ಯಸಭೆಯ ಸದಸ್ಯರಾಗಿ(2003–09), ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದರು. 2004ರ ಎಪ್ರಿಲ್ ನಿಂದ 2009ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.

ಡಾ.ಕೆ.ಕಸ್ತೂರಿರಂಗನ್ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಸುದೀರ್ಘ 9ವರ್ಷಕ್ಕೂ ಅಧಿಕ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಸ್ತೂರಿ ರಂಗನ್ ಅವರು ಇಬ್ಬರು ಪುತ್ರರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಶಾಲಾ ವಾಹನದ ಚಾಲಕನಿಗೆ ಹೃದಯಾಘಾತ: ಸಾವು| ವಿದ್ಯಾರ್ಥಿಗಳ ಪ್ರಾಣ ಉಳಿಸಿ ಸಮಯ ಪ್ರಜ್ಞೆ ಮೆರೆದ ಮೊಯ್ದಿನ್  ಬಾವ!!

ಮಣಿಪಾಲ: ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ…

ಬನ್ನೂರು ಶ್ರೀ ಶನೀಶ್ವರ ಸನ್ನಿಧಿ ಸಂಚಾಲಕ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಅವರಿಗೆ ಪಿತೃವಿಯೋಗ!

ಪುತ್ತೂರು: ಬನ್ನೂರು ಶ್ರೀ ಶನೀಶ್ವರ ಸನ್ನಿಧಿ ಸಂಚಾಲಕ, ಪುತ್ತೂರು ತಾಲೂಕು ಯುವಜನ ಒಕ್ಕೂಟದ…