Gl
ಅಪಘಾತ

ಗೂಡ್ಸ್ ರೈಲು ಅಗ್ನಿಗಾಹುತಿ!

ಈ ಸುದ್ದಿಯನ್ನು ಶೇರ್ ಮಾಡಿ

ಡೀಸೆಲ್‌ ಸಾಗಿಸುತ್ತಿದ್ದ ಗೂಡ್ಸ್ ರೈಲೊಂದು ನಿಲ್ದಾಣದ ಬಳಿಯೇ ಬೆಂಕಿಗಾಹುತಿಯಾದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ  ಸಂಭವಿಸಿದೆ.

pashupathi

 ಭಾನುವಾರ ಮುಂಜಾನೆ   5:30ರ ಸುಮಾರಿಗೆ ಘಟನೆ ಸಂಭವಿಸಿದ್ದು ರೈಲಿನ ನಾಲ್ಕು ವ್ಯಾಗನ್‌ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಪರಿಣಾಮ ನಾಲ್ಕು ವ್ಯಾಗನ್ ಗಳು ಬೆಂಕಿಗಾಹುತಿಯಾಗಿದೆ ಘಟನೆಯಿಂದ ದೊಡ್ಡ ಮಟ್ಟದಲ್ಲಿ ಹೊಗೆ ಸುತ್ತ ಮುತ್ತಲ ಪ್ರದೇಶವನ್ನು ವ್ಯಾಪಿಸಿದೆ, ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ತಂಡ ಕೆಲ ಹೊತ್ತಿನ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡೀಸೆಲ್ ಹೊತ್ತ ಗೂಡ್ಸ್ ರೈಲು ಮನಾಲಿಯಿಂದ ಆಂದ್ರಪ್ರದೇಶದ ಕಡೆ ಚಲಿಸುತ್ತಿತ್ತು ಈ ವೇಳೆ ತಮಿಳುನಾಡಿನ ತಿರುವಳ್ಳೂರು ನಿಲ್ದಾಣ ಸಮೀಪಿಸುತ್ತಿದ್ದಂತೆ ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts