ಅಪಘಾತ

ಮುಳ್ಳೇರಿಯಾ: ತಂದೆಯ ಕಾರಿನಡಿಗೆ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು!

ತಂದೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು, ಒಂದೂವರೆ ವರ್ಷದ ಪುಟ್ಟ ಕಂದ ಸಾವನ್ನಪ್ಪಿರುವ ಘಟನೆ  ಮುಳ್ಳೇರಿಯಾದಲ್ಲಿ ನಡೆದಿದೆ. ಎಂ.ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯ ನಂದಾ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Kasaragod: ತಂದೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು, ಒಂದೂವರೆ ವರ್ಷದ ಪುಟ್ಟ ಕಂದ ಸಾವನ್ನಪ್ಪಿರುವ ಘಟನೆ  ಮುಳ್ಳೇರಿಯಾ ಬೆಳ್ಳಿಗ್ಗದಲ್ಲು ನಡೆಡದಿದೆ. ಎಂ.ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯ ನಂದಾ ಎಂದು ಗುರುತಿಸಲಾಗಿದೆ.

akshaya college

ಮುಳ್ಳೇರಿಯಾ-ಕುಂಬಳೆ KSTP ರಸ್ತೆಯಲ್ಲಿ 200 ಮೀಟ‌ರ್ ಕೆಳಗೆ ಹರಿದಾಸ್ ಅವರ ಮನೆ. ಅವರು ಕಾರು ಚಲಾಯಿಸಿಕೊಂಡು ಮನೆಗೆ ಬರುತ್ತಿದ್ದಾಗ, ಕಂದಕದಲ್ಲಿ ಕಾರಿನ ಟೈರು ಸಿಲುಕಿ ಎಂಜಿನ್ ನಿಂತು ಹೋಗಿದೆ. ಮನೆ ಹತ್ತಿರದಲ್ಲಿಯೇ ಇದ್ದುದ್ದರಿಂದ ಶ್ರೀವಿದ್ಯಾ ತಮ್ಮ ಕಿರಿಯ ಮಗಳನ್ನು ಕರೆದುಕೊಂಡು ಹರಿದಾಸ್ ಇದ್ದಲ್ಲಿಗೆ ನಡೆದುಕೊಂಡು ಬಂದಿದ್ದು, ಹಿರಿಯ ಮಗಳು ದೇವ ನಂದ ಕಾರಿನೊಳಗೆ ಇದ್ದಳು.

ಹರಿದಾಸ್ ಕಾರಿನಿಂದ ಇಳಿದು, ಕಾರನ್ನು ಕಂದಕದಿಂದ ಹೊರತೆಗೆಯಲು ತಳ್ಳುತ್ತಿದ್ದ ಸಂದರ್ಭದಲ್ಲಿ ಕಾರು ಗೋಡೆಗೆ ಅಪ್ಪಳಿಸಿದೆ, ಮಗುವಿನ ಮೇಲೆ ಹರಿದಿದೆ. ಹಿರಿಯ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತಾಯಿ ಶ್ರೀವಿದ್ಯಾ ಕೂಡಾ ಪಾರಾಗಿದ್ದು, ಮಗು ಹೃದ್ಯ ನಂದಾಳನ್ನು ಕೂಡಲೇ ಮುಳ್ಳೇರಿಯಾ ಸಹಕಾರ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಮಗು ಸಾವಿಗೀಡಾಗಿದೆ.

ಮಗುವಿನ ದೇಹವನ್ನು ಕಾಸರಗೋಡು ಜನರಲ್ ಶವಾಗಾರಕ್ಕೆ ಸಾಗಿಸಲಾಗಿರುವ ಕುರಿತು ವರದಿಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts