Gl
ಅಪರಾಧ

ಆರೋಪಿ ಜತೆ ರಾಜಸ್ಥಾನ್ ಸುತ್ತಾಡಿ ಸೆಲ್ಫಿ ತೆಗೆದ ಪೊಲೀಸ್ ಅಧಿಕಾರಿ!

ವಾಣಿಜ್ಯ ಸಂಸ್ಥೆ ಅಮೆಝಾನ್ ಗೆ ವಂಚಿಸಿದ ಹಿನ್ನೆಲೆಯಲ್ಲಿ ಆರೋಪಿಗಳಾದ ರಾಜಸ್ಥಾನದ ರಾಜ್ ಕುಮಾ‌ರ್ ಮೀನಾ(23),ಸುಭಾಷ್ ಗುರ್ಜರ್ ( 27), ಎಂಬಿವರನ್ನು ತಮಿಳುನಾಡಿನ ಸೇಲಂನಿಂದ ಬಂಧಿಸಲಾಗಿತ್ತು.

ಈ ಸುದ್ದಿಯನ್ನು ಶೇರ್ ಮಾಡಿ

ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ, ಪ್ರವಾಸಿ ತಾಣ ಸುತ್ತಾಡಿ, ಆತನ ಜತೆ ಫೊಟೋ ತೆಗೆಸಿಕೊಂಡ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

rachana_rai
Pashupathi
akshaya college
Balakrishna-gowda

ಪೋಲೀಸ್ ಅಧಿಕಾರಿ ಪೀಟ‌ರ್ ಡಿಸೋಜ ಸೆಲ್ವಿ ತೆಗೆಸಿಕೊಂಡವರು.

pashupathi

ಇದು ಪೋಲೀಸ್‌ ಇಲಾಖೆಯ ಶಿಸ್ತಿನ ಉಲ್ಲಂಘನೆಯಾಗಿದ್ದು, ಇದನ್ನು ಸಾಮಾಜಿಕ ಜಾಲ ತಾಣ ಸಹಿತ ಮಾಧ್ಯಮಗಳು ವರದಿ ಮಾಡಿದ್ದವು.

ಇ- ವಾಣಿಜ್ಯ ಸಂಸ್ಥೆ ಅಮೆಝಾನ್ ಗೆ ವಂಚಿಸಿದ ಹಿನ್ನೆಲೆಯಲ್ಲಿ ಆರೋಪಿಗಳಾದ ರಾಜಸ್ಥಾನದ ರಾಜ್ ಕುಮಾ‌ರ್ ಮೀನಾ (23),ಸುಭಾಷ್ ಗುರ್ಜರ್ ( 27), ಎಂಬಿವರನ್ನು ತಮಿಳುನಾಡಿನ ಸೇಲಂನಿಂದ ಬಂಧಿಸಲಾಗಿತ್ತು.

ನಕಲಿ ಗುರುತು ಚೀಟಿ ತೋರಿಸಿ ಅಮೆಝಾನ್ ನಿಂದ 11 45 ಲಕ್ಷ ರೂ ಮೌಲ್ಯದ ಸಾಮಗ್ರಿ ತರಿಸಿಕೊಂಡು, ತದನಂತರ ಅದನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳನ್ನು ವಾರಂಟ್ ಮೇರೆಗೆ 2024 ನವಂಬರಿನಲ್ಲಿ ಬಂಧಿಸಲಾಗಿತ್ತು. ಬಳಿಕ ತನಿಖೆಯ ಸಲುವಾಗಿ ಆರೋಪಿಗಳನ್ನು ವಿಮಾನದಲ್ಲಿ ಜೈಪುರಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಗಳ ಜತೆ ಜೈಪುರದ ಪ್ರೇಕ್ಷಣೀಯ ಸ್ಥಳವನ್ನು ಸುತ್ತಾಡಿ ಸೆಲ್ವಿ ತೆಗೆಯಲಾಗಿತ್ತು. ಈ ಕುರಿತಾದ ಚಿತ್ರವೊಂದು ವಿವಾದ ಹುಟ್ಟಿಸಿದ ಹಿನ್ನೆಲೆಯಲ್ಲಿ ಈ ಕಾನೂನು ಪ್ರಕ್ರಿಯೆ ನಡೆದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts