ಉಪ್ಪಿನಂಗಡಿ: ಇಲ್ಲಿನ ಕೂಟೇಲು ದರ್ಗಾದಲ್ಲಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ದುಷ್ಕರ್ಮಿಗಳು ಒಡೆದು ಅದರೊಳಗಿದ್ದ ಹಣವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೂರಾನಿಯಾ ವೆಲ್‌ಫೇರ್ ಅಸೋಸಿಯೇಶನ್ ಹಾಗೂ ಬದ್ರಿಯಾ ಜುಮಾ ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಆದಂ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಕಾಣಿಕೆ ಡಬ್ಬಿಯಲ್ಲಿ ಇದ್ದ ಸುಮಾರು ₹5,000 ಹಣ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.





















