ಮಂಜೇಶ್ವರ : ಮಂಜೇಶ್ವರ ಪೋಲೀಸ್ ಠಾಣೆಯ ಎಎಸ್‌ಐ ನೇಣುಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಕೋಲ್ ನಿವಾಸಿ ಮಧು(50)ಮೃತ ವ್ಯಕ್ತಿಯಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ಪೋಲೀಸ್ ಕ್ವಾರ್ಟಸ್ ನಲ್ಲಿ ನೇಣು ಬಿಗಿದು ಸಾವಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಘಟನೆಯ ಹಿನ್ನೆಲೆಯಲ್ಲಿ ಉನ್ನತ ಪೋಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆತ್ಮಹತ್ಯೆ ಗೆ ಕಾರಣ ಏನೆಂಬುದು ವ್ಯಕ್ತವಾಗಿಲ್ಲ. ಮೃತರು ಅವಿವಾಹಿತರಾಗಿದ್ದಾರೆ.ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ.