ಪುತ್ತೂರು: ಸಂಚಲನ ಮೂಡಿಸಿದ ಲವ್ – ಸೆಕ್ಸ್ – ದೋಖಾ ಪ್ರಕರಣದ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ ಬೇಲ್ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ತೀರ್ಪಿಗೆ ದಿನ ನಿಗದಿ ಪಡಿಸಿದೆ.
6ನೇ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆರೋಪಿ ಪರ ಹಾಗೂ ಸರ್ಕಾರದ ಪರ ವಕೀಲರು ವಾದ ಮಂಡಿಸಿದರು.
ವಾದ – ವಿವಾದ ಆಲಿಸಿದ ನ್ಯಾಯಾಧೀಶರು, ಜುಲೈ 25ರಂದು ತೀರ್ಪು ನೀಡುವುದಾಗಿ ಘೋಷಿಸಿದರು ಎಂದು ತಿಳಿದುಬಂದಿದೆ.