ಅಪರಾಧ

ರಸ್ತೆ ನಡುವೆ ಕೆಟ್ಟು ನಿಂತ ಸಿಎಂ ಸಹಿತ ಬೆಂಗಾವಲಿನ 19 ವಾಹನ! ನೀರು ಮಿಶ್ರಿತ ಡೀಸಿಲ್: ಕಾರಣ ಬಹಿರಂಗ

GL
ಡೀಸೆಲ್‌ಗೆ ನೀರು ಮಿಶ್ರಣ ಕೆಟ್ಟುನಿಂತ ಮಧ್ಯಪ್ರದೇಶ ಸಿಎಂ ಬೆಂಗಾವಲಿನ 19 ವಾಹನ!

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್‌ ಅವರ ಬೆಂಗಾವಲಿನ 19 ಎಸ್‌ಯುವಿ(ಕಾರು)ಗಳು ಮಾರ್ಗಮಧ್ಯೆ ಕೆಟ್ಟು ನಿಂತ ಘಟನೆ ಗುರುವಾರ ರಾತ್ರಿ ನಡೆದಿದೆ.

chennai-shopping
maithri

ರಾಡ್ಲಾಂನಲ್ಲಿ ಶುಕ್ರವಾರ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಗಣ್ಯರನ್ನು ಕರೆದೊಯ್ಯುತ್ತಿದ್ದ ಈ ವಾಹನಗಳು ಮಾರ್ಗ ಮಧ್ಯೆ ಡೀಸೆಲ್ ತುಂಬಿಸಿದ ಬಳಿಕ ಎಲ್ಲ ವಾಹನಗಳೂ ಕೆಟ್ಟು ನಿಂತಿದ್ದು, ಇದಕ್ಕೆ ಸ್ಥಳೀಯ ಪೆಟ್ರೋಲ್ ಬಂಕ್‌ನಲ್ಲಿ ಕಲಬೆರಕೆ ಡೀಸೆಲ್ ನೀಡಿದ್ದು ಕಾರಣ ಎನ್ನಲಾಗಿದೆ.

ದಾರಿಯಲ್ಲಿ ನಿಂತಿದ್ದ ಗಣ್ಯರನ್ನು ಬೇರೆ ವಾಹನಗಳಲ್ಲಿ ಕಳುಹಿಸಲಾಗಿದ್ದು, ಕೆಟ್ಟು ನಿಂತ ವಾಹನಗಳ ಇಂಧನ ಟ್ಯಾಂಕನ್ನು ಖಾಲಿ ಮಾಡಲಾಗಿದೆ. ಅಧಿಕಾರಿಗಳು ಬಂಕ್‌ನ ಡೀಸೆಲ್‌ ಅನ್ನು ಪರೀಕ್ಷೆಗೊಳಪಡಿಸಿ ಅದರಲ್ಲಿ ನೀರಿರುವುದನ್ನು ದೃಢಪಡಿಸಿದ್ದಾರೆ.

ಪೆಟ್ರೋಲ್ ಬಂಕ್ ಅನ್ನು ಸದ್ಯ ಮುಚ್ಚಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105