pashupathi
ಅಪರಾಧ

ಕಲ್ಯಾಣ ಮಂಟಪದಲ್ಲಿ ಪತಿಯ ಕೆನ್ನೆಗೆ ಚಪ್ಪಲಿಯೇಟು ನೀಡಿದ ಪತ್ನಿ: ಅಷ್ಟಕ್ಕೂ ಆತ ಮಾಡಿದ ಘನಂದಾರಿ ಕೆಲಸವೇನು ಗೊತ್ತೇ?

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಮದುವೆ ಮಂಟಪಕ್ಕೆ ನುಗ್ಗಿದ ಮಹಿಳೆಯೊಬ್ಬರು, ಪತಿಯ ಕೆನ್ನೆಗೆ ಬಾರಿಸಿ ಮದುವೆ ನಿಲ್ಲಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಅಷ್ಟಕ್ಕೂ ಆತ ಮಾಡಿದ್ದಾದರೂ ಏನು ಗೊತ್ತೇ? ಮೊದಲ ಪತಿ ಇರುವಾಗಲೇ ಎರಡನೇ ಮದುವೆಗೆ ಹಸೆಮಣೆ ಏರಿದ್ದ.

akshaya college

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಅರಸೀಕೆರೆಯ ತಿಪ್ಪಘಟ್ಟ ನಿವಾಸಿ ಕಾರ್ತಿಕ್ ನಾಯಕ್ ಎಂಬಾತ ಈಗಾಗಲೇ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ದಾವಣಗೆರೆ ಜಿಲ್ಲೆಯ ಮುಶೆನಾಳದ ಅವರ ಪತ್ನಿ ತನುಜಾ ಅವರು ತಮ್ಮ ಕುಟುಂಬದೊಂದಿಗೆ ಮದುವೆ ಮಂಟಪಕ್ಕೆ ನುಗ್ಗಿ ನುಗ್ಗಿದ್ದು, ಎಲ್ಲರ ಎದುರು ತನ್ನ ಪತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ವರದಕ್ಷಿಣೆಗಾಗಿ ಮರುಮದುವೆಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಚಪ್ಪಲಿಯಿಂದ ಹೊಡೆದಿದ್ದಾಳೆ.

ಇದರಿಂದ ಕಾರ್ತಿಕ್ ಅವರ ಮೊದಲ ಮದುವೆಯ ಬಗ್ಗೆ ತಿಳಿದಿಲ್ಲದ ಎರಡನೇ ವಧುವಿನ ಕುಟುಂಬ ಆಘಾತಕ್ಕೊಳಗಾಗಿ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಚಿತ್ರದುರ್ಗ ನಗರ ಪೊಲೀಸರು ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts