Gl ugadhi
ಅಪರಾಧ

ಪತ್ನಿ ಮೇಲಿನ ಕೋಪಕ್ಕೆ ಮೂವರ ಹತ್ಯೆ!!

ರಾತ್ರಿ ತ್ರಿಬಲ್ ಮರ್ಡರ್ ನಡೆದಿದೆ. ತನ್ನ ಪುಟ್ಟ ಮಗಳ ನೋವಿನ ನುಡಿ ಕೇಳಿ ಕೆರಳಿದ ತಂದೆಯೊಬ್ಬ ಪತ್ನಿಯ ಮೇಲಿನ ಕೋಪದಿಂದ ತನ್ನ ಅತ್ತೆ, ನಾದಿನಿ ಹಾಗೂ ಮಗುವಿನ ಕೊಲೆ ಮಾಡಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ಮಂಗಳವಾರ (ಎ.01) ರಾತ್ರಿ ತ್ರಿಬಲ್ ಮರ್ಡರ್ ನಡೆದಿದೆ. ತನ್ನ ಪುಟ್ಟ ಮಗಳ ನೋವಿನ ನುಡಿ ಕೇಳಿ ಕೆರಳಿದ ತಂದೆಯೊಬ್ಬ ಪತ್ನಿಯ ಮೇಲಿನ ಕೋಪದಿಂದ ತನ್ನ ಅತ್ತೆ, ನಾದಿನಿ ಹಾಗೂ ಮಗುವಿನ ಕೊಲೆ ಮಾಡಿದ್ದಾನೆ.

srk ladders
Pashupathi
Muliya

ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗುವಿನ ಕೊಲೆ ಮಾಡಲಾಗಿದೆ. ಮೃತ ಸಿಂಧು ಗಂಡ ಅವಿನಾಶ್ ಕಾಲಿಗೂ ಗುಂಡೇಟು ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ಘಟನೆ ನಡೆದಿದೆ.

ಆರೋಪಿಯನ್ನು ಶಾಲೆಯ ವಾಹನ ಚಾಲಕ ರತ್ನಾಕ‌ರ್ ಎಂದು ಗುರುತಿಸಲಾಗಿದೆ. ನಾಡ ಬಂದೂಕಿನಿಂದ ಮೂವರನ್ನ ಹತ್ಯೆಗೈದ ರತ್ನಾಕರ್ ಪರಾರಿಯಾಗಿದ್ದಾನೆ.

ಮಗಳ ಮಾತಿಗೆ ನೊಂದು ಕೊಲೆ?

ಕೊಲೆ ಮಾಡಿರುವ ರತ್ನಾಕರ್ ಸೆಲ್ಸಿ ವಿಡಿಯೋ ಮೂಲಕ ಸಂಸಾರದ ನೋವು ತೋಡಿಕೊಂಡಿದ್ದಾನೆ. ರತ್ನಾಕರ್ ಪತ್ನಿ ಎರಡು ವರ್ಷದ ಹಿಂದೆ ದೂರವಾಗಿದ್ದರು. ಮಗಳು ರತ್ನಾಕರ್ ಬಳಿ ಇದ್ದರು. ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಕೇಳ್ತಾರೆ, ಮಗಳು ನನಗೆ ಕೇಳುತ್ತಾಳೆ. ನನಗೆ ಗೊತ್ತಿಲ್ಲದಂತೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ.

ಮಗಳು ತುಂಬಾ ಬೇಜಾರಾಗಿದ್ದು, “ಪಪ್ಪಾ… ಎಲ್ಲಾ ನಿಮ್ಮ ಅಮ್ಮ ಎಲ್ಲಿ ಎನ್ನುತ್ತಾರೆ” ಎಂದು ಕೇಳುತ್ತಾಳೆ. ನನ್ನ ನಿರ್ಧಾರವನ್ನ ನನ್ನ ಕುಟುಂಬದವರಿಗೆ ಹೇಳಿದ್ದೇನೆ. ನನ್ನ ಮನೆಯವಳು ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಪಾಪುನೂ ಬೇಡ ಅಂತ ಬಿಟ್ಟಳು, ಪಾಪುನೂ ನಾನೇ ನೋಡಿಕೊಳ್ಳುತ್ತಿದ್ದೇನೆ” ಎಂದು ಕೊಲೆ ಬಳಿಕ ಸೆಲ್ಸಿ ವಿಡಿಯೋ ಮಾಡಿ ಹೇಳಿಕೊಂಡಿದ್ದಾನೆ.

ತನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ ಎಂದು ಅತ್ತೆ ನಾದಿನಿ ಮತ್ತು ಮಗುವನ್ನು ಕೊಂದು ಹಾಕಿದ್ದಾನೆ.

ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts