pashupathi
ಅಪರಾಧ

ಪುತ್ತೂರು: ಕಾರಿನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ; ಇಬ್ಬರ ಬಂಧನ!!

tv clinic
ಕಾರಿನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಾರಿನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

akshaya college

ಬಂಧಿತ ಆರೋಪಿಗಳನ್ನು ಇಸುಬು ಫೈಝಲ್ (30) ಮತ್ತು ತಸ್ಲಿಪ್ (26) ಎಂದು ಗುರುತಿಸಲಾಗಿದೆ.

ನಗರ ಪೊಲೀಸ್ ಠಾಣೆ ನಿರೀಕ್ಷಕರು ಸೋಮವಾರ ಬೆಳಿಗ್ಗೆ ನರಿಮೊಗರು ಗ್ರಾಮದ ಮುಕೈ ಎಂಬಲ್ಲಿ ತಾತ್ಕಾಲಿಕ ಚೆಕ್ ಪಾಯಿಂಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸುಬ್ರಹಮಣ್ಯ ಕಡೆಯಿಂದ ಬಂದ ಮಾರುತಿ ಸುಝುಕಿ ಆಲ್ಲೋ 800 ಕಾರನ್ನು ಪರಿಶೀಲಿಸಿದಾಗ ಕಾರಿನ ಡ್ಯಾಶ್ ಬೋರ್ಡ್‌ಲ್ಲಿ ಮಾದಕ ವಸ್ತುಗಳನ್ನು ಸೇದುವ ಸಾಧನಗಳು, ತೂಕ ಮಾಪಕ ಕಂಡುಬಂದಿತ್ತು.

ಕಾರಿನ ಚಾಲಕ ಹಾಗೂ ಮತ್ತೊಬ್ಬನಲ್ಲಿ ಈ ಬಗ್ಗೆ ವಿಚಾರಿಸಿದಾಗ ತಡವರಿಸಿಕೊಂಡು ಉತ್ತರಿಸಿದ್ದು ಪ್ರಶ್ನಿಸಿದಾಗ, ತಮ್ಮ ಬಳಿ ಎಂಡಿಎಂಎ ವಸ್ತು ಇರುವುದಾಗಿಯೂ, ಇದನ್ನು ಮಾರಾಟ ಮಾಡಲು ತೆರಳುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts