ವಾಣಿಜ್ಯ ವಾರ್ತೆ

ಕೇರಳ ಎಸ್‌ಆರ್‌ಟಿಸಿ ಬಸ್‌ಗಳಿಗೆ ಕರ್ನಾಟಕದ ಡೀಸೆಲ್‌.! ಕಾಸರಗೋಡು ಡಿಪೋಗೆ ಪ್ರತಿ ದಿನ 25000 ರೂ. ಲಾಭ

ಕೇರಳದಲ್ಲಿ ಡೀಸೆಲ್ ಕೊರತೆ ತೀವ್ರಗೊಂಡಿದ್ದು, ತೆರಿಗೆ ಹೆಚ್ಚಳ ಮುಂಗಡಪತ್ರದಲ್ಲಿ ಏರ್ಪಡಿಸಿರುವುದರಿಂದ ನಷ್ಟ ಭರಿಸಲು ಕೇರಳ ಎಸ್‌ಆರ್‌ಟಿಸಿ ಈ ದಾರಿ ಹಿಡಿದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕದಿಂದ ಡೀಸೆಲ್ ತುಂಬಿಸುವುದರಿಂದ ಕಾಸರಗೋಡು ಡಿಪೋಗೆ ಪ್ರತಿ ದಿನ 25000 ರೂ. ಲಾಭವಾಗುತ್ತಿದೆ ಎಂದು ವರದಿ ಪ್ರಕಟಗೊಂಡಿದೆ. ಕೇರಳದಲ್ಲಿ ಡೀಸೆಲ್ ಕೊರತೆ ತೀವ್ರಗೊಂಡಿದ್ದು, ತೆರಿಗೆ ಹೆಚ್ಚಳ ಮುಂಗಡಪತ್ರದಲ್ಲಿ ಏರ್ಪಡಿಸಿರುವುದರಿಂದ ನಷ್ಟ ಭರಿಸಲು ಕೇರಳ ಎಸ್‌ಆರ್‌ಟಿಸಿ ಈ ದಾರಿ ಹಿಡಿದಿದೆ.

akshaya college

ಕಾಸರಗೋಡು-ಮಂಗಳೂರು ಸರ್ವಿಸ್‌ಗಳನ್ನು ನಡೆಸಲು ಒಂದು ದಿನಕ್ಕೆ 2,860 ಲೀಟರ್ ಡೀಸೆಲ್ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಾಸರಗೋಡು ಡಿಪೋದಿಂದ ಕೊಲ್ಲೂರು, ಸುಳ್ಯ, ಪುತ್ತೂರು ಮಂಗಳೂರು ಭಾಗಗಳಿಗೆ ಸರ್ವಿಸ್‌ ನಡೆಸುವ ಬಸ್‌ಗಳು ಕರ್ನಾಟಕದಿಂದ ಡೀಸೆಲ್ ತುಂಬಿಸಿದರೆ ಪ್ರತಿ ದಿನ 50 ಸಾವಿರ ರೂ. ಲಾಭ ಪಡೆಯಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಇದಕ್ಕೆ ಅನುಮತಿ లభిసిల్ల.

ನಷ್ಟ ಲೆಕ್ಕಗಳು, ಆರ್ಥಿಕ ಬಿಕ್ಕಟ್ಟು ಪರಿಹರಿಸಲಾಗದ ಕೇರಳ ಎಸ್‌ಆರ್‌ಟಿಸಿಗೆ ಕರ್ನಾಟಕದಲ್ಲಿ ಡೀಸೆಲ್ ತುಂಬಿಸುವುದರಿಂದ ಲಭಿಸುವ ಲಾಭ ಭರವಸೆಯುಂಟು ಮಾಡಲಿದೆ ಎಂಬ ನಿರೀಕ್ಷೆ ಅಧಿಕಾರಿಗಳದ್ದಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts