Gl harusha
ಸಿನೇಮಾ

ಹಳ್ಳಿ ಹುಡುಗನ ‘ಒಲವಿನ ಪಯಣ’ | ಹೊಸಬರೇ ಹೆಣೆದಿರುವ ಹೊಸತನದ ಕಥೆ; ಇಲ್ಲಿ ಎಲ್ಲರೂ ಹೊಸಬರೇ

ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬನ ಬದುಕಿನ ಕಥೆಯೇ ಒಲವಿನ ಪಯಣ. ಗೊತ್ತು ಗುರಿಯಿಲ್ಲದ ಪ್ರೀತಿ ಪ್ರೇಮ ಆತನನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸುತ್ತದೆ ಎನ್ನುವುದೇ ‘ಒಲವಿನ ಪಯಣ’ದ ತಿರುಳು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬನ ಬದುಕಿನ ಕಥೆಯೇ ಒಲವಿನ ಪಯಣ. ಗೊತ್ತು ಗುರಿಯಿಲ್ಲದ ಪ್ರೀತಿ ಪ್ರೇಮ ಆತನನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸುತ್ತದೆ ಎನ್ನುವುದೇ ‘ಒಲವಿನ ಪಯಣ’ದ ತಿರುಳು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಲವಿನ ಪಯಣ ಕನ್ನಡ ಸಿನಿಮಾದ ನಿರ್ದೇಶಕ ಕಿಶನ್ ಬಲ್ನಾಡ್ ಅವರು, ಫೆಬ್ರವರಿ 21ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕಥೆಯೇ ನಾಯಕನಾಗಿರುವ ಈ ಚಿತ್ರ, ಕುಟುಂಬ ವರ್ಗ ಕುಳಿತು ನೋಡಬಹುದಾದಂತಹ ಸಿನಿಮಾವಾಗಿದೆ ಎಂದರು.

ನಾಗರಾಜ್ ಎಸ್. ಮುಳಗುಂದ ನಿರ್ಮಾಪಕರಾಗಿದ್ದು, ಮುಳಗುಂದ ಕ್ರಿಯೇಷನ್ಸ್’ನಡಿ ಸಿನಿಮಾ ಮೂಡಿಬಂದಿದೆ. ಮೂಲತಃ ಧರ್ಮಸ್ಥಳದವರಾದ ಸುನೀಲ್ ನಾಯಕ ನಟನಾಗಿ, ಕುಶಿ ಹಾಗೂ ಪ್ರಿಯಾ ಹೆಗ್ಡೆ ನಾಯಕಿಯರಾಗಿದ್ದಾರೆ. ಪದ್ಮಜಾ ರಾವ್, ಬಲ ರಾಜ್ವಾಡಿ, ನಾಗೇಶ್ ಮಯ್ಯ, ಪೃಥ್ವಿರಾಜ್, ಸುಧಾಕರ್ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ಸಮೀಕ್ಷಾ, ಬೇಬಿ ರಿಧಿ ತಾರಾಗಣದಲ್ಲಿದ್ದಾರೆ ಎಂದರು.

ಜೀವನ್ ಗೌಡ ಛಾಯಗ್ರಾಹಕರಾಗಿ, ಕೀರ್ತಿರಾಜ್ ಸಂಕಲನದಲ್ಲಿ, ಗುರುಪ್ರಸಾದ್ ಕಲರಿಸ್ಟ್ ಆಗಿ, ಎಸ್.ಎಫ್.ಎಕ್ಸ್‍.ನಲ್ಲಿ ನವೀನ್ ಸಹಕರಿಸಿದ್ದಾರೆ. ಸಾಯಿ ಸರ್ವೇಶ್ ಅವರ ಸಂಗೀತದಲ್ಲಿ ಸಿನಿಮಾ ಮೂಡಿಬಂದಿದೆ ಎಂದು ವಿವರಿಸಿದರು.

ನಾಯಕ ನಟ ಸುನೀಲ್ ಮಾತನಾಡಿ, ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದು, ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸುತ್ತಿದ್ದು, ಸಿನಿಮಾದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.

ನಿರ್ಮಾಪಕ ನಾಗರಾಜ್ ಎಸ್. ಮುಳಗುಂದ, ನಟ ನಾಗೇಶ್ ಮಯ್ಯ, ನಟಿ ಕುಶಿ ಸಿನಿಮಾದ ಬಗ್ಗೆ ಮಾತನಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಮಲಯಾಳಂ – ತುಳುವಿನ ಸ್ಪರ್ಶವಿರುವ ಕೋಸ್ಟಲ್ ವುಡ್’ನ ‘ಮೀರಾ’ | ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ ಎಲ್ಲರೂ ಹೊಸಬರೇ!!

ತುಳು ರಂಗ ಭೂಮಿಯ ಅಪ್ಪ - ತುಳು ಸಿನಿಮಾ ರಂಗದ ಮಗಳು. ಇವರೆರಡರ ನಡುವಿನ ಬಾಂಧವ್ಯ, ರಂಗಭೂಮಿ…

ಮಗನ ಪರಿಚಯಿಸಿದ ಡ್ಯಾನ್ಸ್ ಕಿಂಗ್ ಪ್ರಭುದೇವ್! ಡ್ಯಾನ್ಸ್ ಫ್ಯಾಮಿಲಿಯ ಮತ್ತೊಂದು ಕುಡಿ, ಕೊರಿಯೋಗ್ರಾಫಿ ಫಿಲ್ಡಿಗೆ!

ನಟ, ಕೊರಿಯೋಗ್ರಾಫರ್, ನಿರ್ದೇಶಕ ಪ್ರಭುದೇವ ಅವರು ತಮ್ಮ ಮಗ ರಿಷಿಯನ್ನು ಪರಿಚಯಿಸಿದ್ದಾರೆ. ಈ…