ಪುತ್ತೂರು: ಕಟ್ಟೆಮಾರ್ ತುಳು ಸಿನಿಮಾದ ಪ್ರೀಮಿಯರ್ ಶೋಗೆ ಸೋಮವಾರ ಸಂಜೆ ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿ ಚಾಲನೆ ನೀಡಲಾಯಿತು.
ಜ. 23ರಂದು ಕಟ್ಟೆಮಾರ್ ತುಳು ಸಿನಿಮಾ ತೆರೆ ಕಾಣಲಿದೆ.
ದೀಪ ಬೆಳಗಿಸಿ ಉದ್ಘಾಟಿಸಿದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ತುಳು ಸಿನಿಮಾ ಎಂದಾಗ ಉಭಯ ಜಿಲ್ಲೆಗಳ ಪ್ರೋತ್ಸಾಹ ಸಿಗುತ್ತದೆ. ಕಟ್ಟೆಮಾರ್ ಸಿನಿಮಾ ಈ ಗಡಿಯನ್ನು ಮೀರಿ ವಿಸ್ತರಿಸಲಿ. ಕಟ್ಟೆಮಾರ್ ಸಿನಿಮಾದಲ್ಲಿ ಹೊಸ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದ ಕಲಾವಿದರೆಲ್ಲರೂ ಪ್ರಬುದ್ಧರಾಗಿ, ಹೆಚ್ಚಿನ ಅವಕಾಶ ಪಡೆಯುವಂತಾಗಲಿ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು
ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉದ್ಯಮಿ ಕರುಣಾಕರ್ ರೈ, ನಟ ಚೇತನ್ ರೈ ಮಾಣಿ, ನಿರ್ದೇಶಕರಾದ ಸಚಿನ್ ಕಟ್ಲ, ರಕ್ಷಿತ್ ಗಾಣಿಗ, ಆರಾಟ ಸಿನಿಮಾದ ನಾಯಕಿ ನಟಿ ವೆನ್ಯಾ ರೈ, ನಟಿಯರಾದ ಹರ್ಷಿತಾ ಕುಲಾಲ್ ಹಾಗೂ ಆಕಾಂಶ ರಾವ್, ಕಾರ್ತಿಕ್ ಮಂಗಳೂರು, ಸಿನಿಮಾ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಸಿನಿಮಾದ ನಾಯಕ ನಟ ಸ್ವರಾಜ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ನಟಿ ಪಲ್ಲವಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
























