ಸಿನೇಮಾ

ಪ್ರೇಮಿಗಳ ದಿನದಂದು ಮೃಣಾಲ್ ಕೈಹಿಡಿಯಲಿದ್ದಾರೆಯೇ ನಟ ಧನುಶ್?

GL

ಈ ಸುದ್ದಿಯನ್ನು ಶೇರ್ ಮಾಡಿ

ರಜನಿಕಾಂತ್ ಪುತ್ರಿಯ ಜೊತೆ ವಿವಾಹವಾಗಿದ್ದ ನಟ ಧನುಶ್ ಅವರು 20 ವರ್ಷಗಳ ದಾಂಪತ್ಯ ಜೀವನದ ಬಳಿಕ ವಿಚ್ಛೇದನ ನೀಡಿದ್ದರು. ಇದೀಗ ಅವರ ಹೆಸರು ಇನ್ನೋರ್ವ ಸ್ಟಾರ್ ನಟಿಯೊಂದಿಗೆ ಕೇಳಿಬರುತ್ತಿದೆ.

ಧನುಶ್ ಅವರು ರಜನೀಕಾಂತ್ ಪುತ್ರಿ ಐಶ್ವರ್ಯ ಜೊತೆಗೆ 2004 ರಲ್ಲಿ ವಿವಾಹವಾದರು. ಇಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ತಾವು ಬೇರೆ ಆಗುತ್ತಿರುವುದಾಗಿ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಘೋಷಿಸಿದರು. 2024ರಲ್ಲಿ ಇವರಿಗೆ ನ್ಯಾಯಾಲಯವು ವಿಚ್ಛೇದನ ನೀಡಿತು. ಇದೀಗ ಧನುಶ್, ಸ್ಟಾರ್ ನಟಿಯೊಬ್ಬರನ್ನು ವಿವಾಹ ಆಗುವ ಯೋಜನೆ ಹಾಕಿಕೊಂಡಿದ್ದಾರಂತೆ.

ಧನುಶ್ ಹಾಗೂ ನಟಿ ಮೃಣಾಲ್ ಠಾಕೂರ್ ಅವರುಗಳು ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರೂ ಸಹ ಶೀಘ್ರವೇ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೃಣಾಲ್ ಠಾಕೂರ್ ಮತ್ತು ಧನುಶ್ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಮೃಣಾಲ್ ನಟಿಸಿದ್ದ ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್ ಶೋನಲ್ಲಿ ಧನುಶ್ ಭಾಗವಹಿಸಿದ್ದರು. ಧನುಶ್ ನಟಿಸಿದ್ದ ಹಿಂದಿ ಸಿನಿಮಾ ‘ತೇರೆ ಇಷ್ಕ್ ಮೇ’ ರ್ಯಾಪ್ ಅಪ್ ಪಾರ್ಟಿಯಲ್ಲಿ ಮೃಣಾಲ್ ಭಾಗವಹಿಸಿದ್ದರು. ಆಗಲೇ ಈ ಇಬ್ಬರ ಪ್ರೀತಿಯ ಬಗ್ಗೆ ಪುಕಾರುಗಳು ಹರಿದಾಡಿದ್ದವು.

ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಮೃಣಾಲ್ ಠಾಕೂರ್ ಮತ್ತು ಧನುಶ್ ಮದುವೆ ಆಗಲಿದ್ದಾರಂತೆ. ಈ ಇಬ್ಬರ ವಿವಾಹ ಫೆಬ್ರವರಿ 14 ರಂದು ನಡೆಯಲಿದೆ. ಈ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಧನುಶ್ ಅವರಿಗೆ ಇದು ಎರಡನೇ ಮದುವೆ ಆದರೆ ಮೃಣಾಲ್ ಅವರಿಗೆ ಇದು ಮೊದಲ ಮದುವೆ ಆಗಲಿದೆ. ಮೃಣಾಲ್ ಠಾಕೂರ್ ಅವರಿಗೆ ಈಗ 33 ವರ್ಷ ವಯಸ್ಸು, ಧನುಶ್ ಅವರಿಗೆ 42 ವರ್ಷ. ಇಬ್ಬರೂ ಸಹ ಯಶಸ್ವಿ ನಟ ಮತ್ತು ನಟಿಯರು. ಈ ಇಬ್ಬರ ದಾಂಪತ್ಯ ಜೀವನ ಹೇಗೆ ಸಾಗುತ್ತದೆ ಕಾದು ನೋಡಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಒಂದು ಸೇತುವೆಯ ಕಥೆಗೆ `ಜೈ’ | ತುಳುವಿನ ಘನತೆ, ಗಂಭೀರತೆಗೆ ಕಲಶ ಪ್ರಾಯ ಹಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅಭಿನಯ

`ಕಾರ್ ಪತ್ತುನವು ತುಳು ನಾಡ್’ದ ಸಂಸ್ಕೃತಿ, ಕಾರ್ ವೊಯ್ಪುನವ್ವತ್’ (ಕಾಲು ಹಿಡಿಯುವುದು ತುಳು…

ಮಲಯಾಳಂ – ತುಳುವಿನ ಸ್ಪರ್ಶವಿರುವ ಕೋಸ್ಟಲ್ ವುಡ್’ನ ‘ಮೀರಾ’ | ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ ಎಲ್ಲರೂ ಹೊಸಬರೇ!!

ತುಳು ರಂಗ ಭೂಮಿಯ ಅಪ್ಪ - ತುಳು ಸಿನಿಮಾ ರಂಗದ ಮಗಳು. ಇವರೆರಡರ ನಡುವಿನ ಬಾಂಧವ್ಯ, ರಂಗಭೂಮಿ…