ಚೆನ್ನೈ: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶಕ್ಕಿಳಿದಿದ್ದಾರೆ.
ಕಳೆದ ಕೆಲ ಸಮಯದಿಂದ ಅವರು ನಿರ್ದೇಶನ ಮಾಡುತ್ತಿರುವ ಬಗ್ಗೆ ಅನೌನ್ಸ್ ಆಗಿತ್ತು. ಕಾಲಿವುಡ್‌ನಲ್ಲಿ ಈಗಾಗಲೇ ಜೇಸನ್ ಅವರ ಸಿನಿಮಾದ ಬಗ್ಗೆ ದೊಡ್ಡದಾಗಿ ಹೈಪ್ ಕ್ರಿಯೇಟ್ ಆಗಿದೆ.
ಜೇಸನ್ ಕನಸಿಗೆ ಖ್ಯಾತ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ ಪ್ರೊಡಕ್ಷನ್ಸ್ (Lyca Productions) ಸಾಥ್ ನೀಡಲಿದೆ.
ಯುವನಟ ಸಂದೀಪ್ ಕಿಶನ್ (Sundeep Kishan) ಅವರು ಜೇಸನ್ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
‘ಸಿನ್ಮಾ’ (Sigma) ಎನ್ನುವ ಟೈಟಲ್ ಚಿತ್ರಕ್ಕೆ ಇಡಲಾಗಿದೆ. ನೋಟು ಹಾಗೂ ಚಿನ್ನದ ಬಿಸ್ಕೆಟ್‌ಗಳ ಮಧ್ಯದಲ್ಲಿ ನಾಯಕ ಸಂದೀಪ್ ಕೂರಿರುವ ಪೋಸ್ಟರ್ ರಿಲೀಸ್ ಆಗಿದೆ. ಮೇಲ್ನೋಟಕ್ಕೆ ಇದೊಂದು ಕ್ರೈಮ್ ಡ್ರಿಲ್ಲರ್ ಸಿನಿಮಾವೆನ್ನುವ ರೀತಿಯಲ್ಲಿ ಕಾಣಿಸುತ್ತದೆ.
ಬಹುತೇಕ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ. ಒಂದು ಹಾಡಿನ ಶೂಟ್ ಬಾಕಿಯಿದೆ ಎನ್ನಲಾಗಿದೆ.
ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಥಮನ್ ಅವರು ಮ್ಯೂಸಿಕ್ ನೀಡಿದ್ದಾರೆ. ಸಂದೀಪ್ ಕಿಶನ್ ಜತೆ ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಅನ್ನು ಥಾಸನ್, ಯೋಗ್ ಜಪೀ, ಸಂಪತ್ ರಾಜ್, ಕಿರಣ್ ಕೊಂಡ, ಮಗಲಕ್ಷ್ಮಿ ಸುದರ್ಶನನ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ತಮಿಳು – ತೆಲುಗು ಭಾಷೆಯಲ್ಲಿ ‘ಸಿಗ್ಮಾ’ ರಿಲೀಸ್ ಆಗಲಿದೆ. 2026ರ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.


























