ಮಂಗಳೂರು ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಕಾರಾಗೃಹಕ್ಕೆ ಗುರುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಅಯುಕ್ತ ಅನುಪಮ್ ಅಗ್ರವಾಲ್ ಆದೇಶದಂತೆ ಇಂದು ಮುಂಜಾವ ಸುಮಾರು 4 ಗಂಟೆಗೆ ದಾಳಿ ನಡೆಸಿದ ಪೊಲೀಸರು ತಪಾಸಣೆ ನಡೆಸಿದರು.
ವಿಟ್ಲದ ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್ ಹಂಡೆ, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ.
ಗಂಗಾವಳಿ ನದಿಯಲ್ಲಿ ಪತ್ತೆಯಾದ ಲಾರಿ ಕೇರಳದ ಕೋಝಿಕ್ಕೋಡ್ ಮೂಲದ ಅರ್ಜುನ್ ಎಂಬುವರಿಗೆ ಸೇರಿದ್ದು ಎಂದು ಪೊಲೀಸರು ಬುಧವಾರ (ಜು.24ರಂದು) ಖಚಿತಪಡಿಸಿದ್ದಾರೆ.
ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ಬುಧವಾರ ನಡೆದಿದೆ.
ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ತಮ್ಮ ಟ್ರಕ್‌ನೊಂದಿಗೆ ನಾಪತ್ತೆಯಾಗಿದ್ದ ಕೊಝಿಕ್ಕೋಡ್ ನಿವಾಸಿ ಅರ್ಜುನ್ ಅವರಿಗಾಗಿ ಶೋಧ ಮುಂದುವರಿದಿರುವ ನಡುವೆ ಟ್ರಕ್ ಒಂದು ಗಂಗಾವಳಿ ನದಿಯಲ್ಲಿ ಮುಳುಗಿರುವುದು ಖಚಿತವಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೇಳಿದೆ.
ಕೃಷಿ ಹಿನ್ನೆಲೆ ಹೊಂದಿರುವ ಬಡ ಕುಟುಂಬದ ಆಶ್ರಿತಾ, ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪೆನಿಯ ಉದ್ಯೋಗಿ. ವೇತನ ಎಷ್ಟು ಗೊತ್ತೇ? ವರ್ಷಕ್ಕೆ 52 ಲಕ್ಷ ರೂ. ಯುವ ಪ್ರತಿಭೆ ಆಶ್ರಿತಾ, ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಚೆನ್ನಾಗಿ ಓದಬೇಕು, ಕೈತುಂಬಾ ಸಂಬಳ ನೀಡುವ ಒಳ್ಳೆಯ ಮತ್ತು…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕುಂಬ್ರ ವಲಯದ ಆರ್ಯಾಪು ಒಕ್ಕೂಟದ ಶಿವಶಕ್ತಿ ಸಂಘದ ಸದಸ್ಯೆ ಪುಷ್ಪಾ ಅವರ ಚಿಕಿತ್ಸಾ ವೆಚ್ಚಕ್ಕೆ ಮಂಜೂರಾದ ಸುರಕ್ಷಾ ಮೊತ್ತವನ್ನು ಹಸ್ತಾಂತರಿಸಲಾಯಿತು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದ ಅನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು 13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಪುತ್ತೂರು: ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮುರ ಶಿವಸದನ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ಆಶ್ರಮಕ್ಕೆ ಜು. 23ರಂದು ಹಣ್ಣು ಹಂಪಲು ವಿತರಿಸಲಾಯಿತು. ಆಶ್ರಮದ ಸಂಚಾಲಕ ಶ್ರೀಪತಿ ರಾವ್, ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ, ಅಧ್ಯಕ್ಷ ಸುಬ್ರಮಣಿ ಪಿ.ವಿ, ಕಾರ್ಯದರ್ಶಿ ವಿಶಾಲ್, ಮಾಜಿ ಜಿಲ್ಲಾ…
ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು ಟ್ಯಾಂಕರ್ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ.
Welcome, Login to your account.
Welcome, Create your new account
A password will be e-mailed to you.