ಕರಾವಳಿ

ಟಿಂಬರ್ ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ !!

ಬಂಟ್ವಾಳ: ಟಿಂಬರ್ ವ್ಯಾಪಾರ ಮಾಡುತ್ತಿದ್ದ ಅವಿವಾಹಿತ ವ್ಯಕ್ತಿಯೋರ್ವ ಬಿ.ಸಿ. ರೋಡಿನ ಪ್ರತಿಷ್ಠಿತ ಅಪಾರ್ಟ್ ಮೆಂಟ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.22ರ ಗುರುವಾರ ನಡೆದಿದೆ.

ಬಸ್ಸಿನಲ್ಲೇ ಅಸ್ವಸ್ಥಗೊಂಡ ವಿದ್ಯಾರ್ಥಿನಿ!! ಸಮಯಪ್ರಜ್ಞೆ ಮೆರೆದ ಚಾಲಕ, ನಿರ್ವಾಹಕರು!

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಘಟನೆ ಗುರುವಾರ (ಆಗಸ್ಟ್ 22) ಉಡುಪಿಯಲ್ಲಿ ನಡೆದಿದೆ.

ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ನಿಧನ

ಕುರುಡಪದವು ಕುರಿಯ ವಿಠಲ ಶಾಸ್ತ್ರೀ ಸ್ಮಾರಕ ಪ್ರೌಢ ಶಾಲೆಯ ಮೆನೇಜರ್, ಧಾರ್ಮಿಕ, ಸಾಮಾಜಿಕ ಮುಂದಾಳು ಕುರಿಯ ಗೋಪಾಲಕೃಷ್ಣ ಶಾಸ್ತ್ರೀ (65) ಬುಧವಾರ ಬೆಳಿಗ್ಗೆ ಹೃದಯಘಾತದಿಂದ ನಿಧನರಾದರು.

10.96 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿದ ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪ್. ಸೊಸೈಟಿ

ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವ ಪ್ರಯುಕ್ತ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮಂಗಳೂರಿನ ಶ್ರೀ ರಾಧಾಕೃಷ್ಣ ಸಭಾಂಗಣದಲ್ಲಿ ರವಿವಾರ ನಡೆಯಿತು.

ಅಪೆಕ್ಸ್ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ವಸಂತ ಕುಮಾರ್ ಪೋನಡ್ಕ | ಅಪೆಕ್ಸ್ ಬ್ಯಾಂಕಿನ ಸಿಜಿಎಂ…

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇದರ ಮುಖ್ಯ ಪ್ರಧಾನ ವ್ಯವಸ್ಥಾಪಕರು (ಹಣಕಾಸು, ಲೆಕ್ಕ ಪರಿಶೋಧನೆ ವಿಭಾಗ) ಹುದ್ದೆಗೆ ಸುಳ್ಯ ತಾಲೂಕಿನ ಚೊಕ್ಕಾಡಿಯ ವಸಂತ ಕುಮಾರ್ ಪೋನಡ್ಕ ನೇಮಕಗೊಂಡಿದ್ದಾರೆ.

ಸಾಹಿತ್ಯ ಕ್ಷೇತ್ರದ ಸಾಧಕನಿಗೆ ಸನ್ಮಾನ

ದಕ್ಷಿಣ ಕನ್ನಡ ತಮಿಳು ಸೇವಾ ಸಂಘ ಸುಳ್ಯ ಇದರ ವತಿಯಿಂದ ಹೋಟೆಲ್ ಸದರ್ನ್ ರೆಸಿಡೆನ್ಸಿ, ಸುಳ್ಯ ಇಲ್ಲಿ ಆ.18ರಂದು 2023-24ನೇ ಸಾಲಿನ ಎಸ್ಸಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.

ನೀರಲ್ಲಿ ಮುಳುಗಿ ವಿದ್ಯಾರ್ಥಿ ತಂಝೀರ್ ಮೃತ್ಯು!! ತಿಂಗಳಲ್ಲಿ ಮೂರು ಸಾವು ಕಂಡ ಮನೆ!!

ಬೆಳ್ತಂಗಡಿ : ತುರ್ಕಳಿಕೆ ಕರಂಕಿತೋಡಿ ನಿವಾಸಿಯಾಗಿರುವ ಮುಸ್ತಫಾ ರವರ ಮಗ ಮಿಫ್ತಾಹುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ತುರ್ಕಳಿಕೆ ಇದರ 9 ನೇಯ ತರಗತಿಯ ವಿಧ್ಯಾರ್ಥಿ ಮುಹಮ್ಮದ್ ತಂಝೀರ್ ಆ. 17 ರಂದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.