Gl
ಕರಾವಳಿಪ್ರಚಲಿತಸ್ಥಳೀಯ

ವಿಶ್ವ ಹಿಂದೂ ಪರಿಷದ್ ನೂತನ ಕಾರ್ಯಾಲಯಕ್ಕೆ ನಾಳೆ ಭೂಮಿಪೂಜೆ; ಅಯೋಧ್ಯೆಯ ಉಸ್ತುವಾರಿ ಗೋಪಾಲ್ ಉಪಸ್ಥಿತಿ | 31 ಸಾವಿರ ಚ.ಅಡಿಯ ಸುಸಜ್ಜಿತವಾದ ಸ್ವಂತ ಕಟ್ಟಡ ಹೇಗಿರಲಿದೆ ಗೊತ್ತೇ?

ವಿಶ್ವ ಹಿಂದೂ ಪರಿಷದ್‍ಗೆ ಹೊಸ ಕಾರ್ಯಾಲಯ ನಿರ್ಮಾಣವಾಗಲಿದೆ. ಸ್ವಂತ, ಸುಸಜ್ಜಿತ ಕಟ್ಟಡದಲ್ಲಿ ಕಾರ್ಯ ಶುರು ಮಾಡಲಿರುವ ವಿಹಿಂಪ ಹೊಸ ಹುಮ್ಮನಸ್ಸಿನಿಂದ, ಇನ್ನಷ್ಟು ವೇಗವಾಗಿ ತನ್ನ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ ಎನ್ನುವುದು ಪ್ರಮುಖರ ಅಭಿಮತ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಶ್ವ ಹಿಂದೂ ಪರಿಷದ್‍ಗೆ ಹೊಸ ಕಾರ್ಯಾಲಯ ನಿರ್ಮಾಣವಾಗಲಿದೆ. ಸ್ವಂತ, ಸುಸಜ್ಜಿತ ಕಟ್ಟಡದಲ್ಲಿ ಕಾರ್ಯ ಶುರು ಮಾಡಲಿರುವ ವಿಹಿಂಪ ಹೊಸ ಹುಮ್ಮನಸ್ಸಿನಿಂದ, ಇನ್ನಷ್ಟು ವೇಗವಾಗಿ ತನ್ನ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ ಎನ್ನುವುದು ಪ್ರಮುಖರ ಅಭಿಮತ.

rachana_rai
Pashupathi
akshaya college
Balakrishna-gowda

ಪುತ್ತೂರು ಪೇಟೆಯ ಪ್ರಶಾಂತವಾದ ಪರಿಸರದಲ್ಲಿ ಇತ್ತೀಚೆಗಷ್ಟೇ ಆರ್.ಎಸ್.ಎಸ್.ನ ಸುಸಜ್ಜಿತ ಕಟ್ಟಡ ಪಂಚವಟಿಯ ನೂತನ ಕಟ್ಟಡ ತಲೆಎತ್ತಿತ್ತು. ಇದರ ಕೂಗಳತೆಯ ದೂರದಲ್ಲೇ ಇದೆ ವಿಶ್ವ ಹಿಂದೂ ಪರಿಷದ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿರುವ ಪ್ರದೇಶ.

pashupathi

ಸುಮಾರು 40 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ. ಮಂಗಳವಾರ ಅಂದರೆ ಅಕ್ಟೋಬರ್ 23ರಂದು ಬೆಳಿಗ್ಗೆ 9.30ಕ್ಕೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಲಿದೆ. ಶಿಥಿಲವಾದ ಕಟ್ಟಡವನ್ನು ಕೆಡವಿ, ಆಧುನಿಕತೆಗೆ ತಕ್ಕಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಸುಮಾರು 3 ಅಂತಸ್ತಿನ ಕಟ್ಟಡ ಇದಾಗಿರಲಿದ್ದು, 31 ಚದರ ಅಡಿಯಷ್ಟು ವಿಸ್ತಾರದ ಕಟ್ಟಡಕ್ಕೆ ನೀಲನಕಾಶೆ ಸಿದ್ಧಗೊಂಡಿದೆ. ಮೊದಲಿಗೆ ಪ್ರಥಮ ಹಂತದ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ.

ಜಿಲ್ಲೆಯಾಗಿ ಪುತ್ತೂರು:

ಆರ್.ಎಸ್.ಎಸ್. ಕಾರ್ಯವ್ಯಾಪ್ತಿಯಲ್ಲಿ ಪುತ್ತೂರು ಜಿಲ್ಲೆ. ಹಾಗಾಗಿ ಜಿಲ್ಲೆಗೊಂದು ಕಾರ್ಯಾಲಯವನ್ನು ಸ್ಥಾಪಿಸುವುದು ಜರೂರು ಕೂಡ. ಈ ಕಟ್ಟಡ ನಿರ್ಮಾಣವಾದ ಬಳಿಕ ವಿಹಿಂಪಕ್ಕೆ ಸಭೆ, ಬೈಠಕ್ ಗಳನ್ನು ನಡೆಸಲು ಅನುಕೂಲವಾಗಲಿದೆ. ಮಾತ್ರವಲ್ಲ ಸಂಬಂಧಪಟ್ಟ ಕಡತಗಳನ್ನು ಜೋಪಾನವಾಗಿಡಲು ಸಹಕಾರಿ. ಮಾತ್ರವಲ್ಲ ವಿಐಪಿಗಳು ಆಗಮಿಸಿದಾಗ ಅವರಿಗೆ ಉಳಿದುಕೊಳ್ಳಲು ಒಂದು ವ್ಯವಸ್ಥೆ ಮಾಡಿದಂತಾಗುತ್ತದೆ.

ಭೂಮಿ ಪೂಜೆ:

ಮಂಗಳವಾರ ಬೆಳಿಗ್ಗೆ 8.20ರಿಂದ 10ರ ನಡುವೆ ನಡೆಯುವ ವೃಶ್ಚಿಕ ಲಗ್ನದಲ್ಲಿ ಹೊಸ ಕಾರ್ಯಾಲಯಕ್ಕೆ ಭೂಮಿ ಪೂಜೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿರುವರು. ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಕಾರ್ಯದರ್ಶಿ, ಅಯೋಧ್ಯೆಯ ಉಸ್ತುವಾರಿ ಗೋಪಾಲ್ ಜೀ ಅವರು ಮುಖ್ಯ ಅತಿಥಿಯಾಗಿರುವರು. ವಿಶ್ವ ಹಿಂದೂ ಪರಿಷದ್ ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಗೌರವ ಉಪಸ್ಥಿತರಿರುವರು ಎಂದು ವಿಹಿಂಪ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 139